Home ಜಿಲ್ಲೆ “ವೋಟ್ ಬಚಾವೋ, ದೇಶ ಬಚಾವೋ” ಆಂದೋಲನ ಮತಗಳ್ಳತನ ಬಗ್ಗೆ ಜಾಗೃತಿ : ಗಜಾನನ ಮಂಗಸೂಳಿ

“ವೋಟ್ ಬಚಾವೋ, ದೇಶ ಬಚಾವೋ” ಆಂದೋಲನ ಮತಗಳ್ಳತನ ಬಗ್ಗೆ ಜಾಗೃತಿ : ಗಜಾನನ ಮಂಗಸೂಳಿ

ಕಾಗವಾಡ : ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವುದು ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿರುವ ‘ವೋಟ್ ಬಚಾವೋ, ದೇಶ ಬಚಾವೋ’ ಆಂದೋಲನಕ್ಕೆ ಕಾಗವಾಡ ಮತಕ್ಷೇತ್ರದಲ್ಲಿ ಸಂಘಟಿತವಾಗಿ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ವೋಟ್ ಬಚಾವೋ ದೇಶ ಬಚಾವೋ ಆಂದಲೋಲನದ ಕೆ.ಪಿ.ಸಿ.ಸಿ ಕಾಗವಾಡ ಮತಕ್ಷೇತ್ರದ ಪ್ರಭಾರಿ ಗಜಾನನ ಮಂಗಸೂಳಿ ಮಾತನಾಡಿ ಕಾಗವಾಡ ಮತ್ತು ಅನಂತಪುರ ಬ್ಲಾಕ್ ಮಟ್ಟದಲ್ಲಿ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಮತ್ತು ಮತಗಳ್ಳತನ ವಿರೋಧಿಸಿ ಇದೇ ನವೆಂಬರ 11 ರಿಂದ ಒಂದು ವಾರದೊಳಗಾಗಿ ಕಾಗವಾಡ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ವೋಟ್ ಬಚಾವೋ ದೇಶ ಬಚಾವೋ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸಮಾನ ಮನಸ್ಕರು ಮತ್ತು ವಿವಿಧ ಜನಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಪ್ರಜಾಪ್ರಭುತ್ವ ಉಳಿಸಬೇಕು ಎಂದು ಮನವಿ ಮಾಡಿದರು.
ಅವರು ಕಾಗವಾಡ ಶಾಸಕ ರಾಜು ಕಾಗೆಯವರ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈಗಾಗಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಮತಗಳ್ಳತನ ವಿರೋಧಿಸಿ ಇಡೀ ದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಮತ್ತು ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನವೆಂಬರ 1 ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಈ ಹಿನ್ನೆಲೆಯಲ್ಲಿ ನಮ್ಮ ನಾಯಕರ ಹೋರಾಟವನ್ನು ಬೆಂಬಲಿಸಿ ಇದೇ ನವೆಂಬರ 5 ರಿಂದ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ 11 ರಿಂದ ಒಂದುವಾರದವರೆಗೆ ಬ್ಲಾಕ್ ಮಟ್ಟದಲ್ಲಿ ಮತ್ತು ನವೆಂಬರ್ 20 ರಿಂದ ಗ್ರಾಮ ಪಂಚಾಯತ ಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಇಡೀ ದೇಶದಲ್ಲಿ ಎಸ್.ಐ.ಆರ್ ನೆಪದಲ್ಲಿ ಸುಮಾರು 15 ಕೋಟಿಗೂ ಅಂದರೆ ಶೇ.15 ರಷ್ಟು ಮತಗಳನ್ನು ಡಿಲೀಟ್ ಮಾಡಿದೆ ಎಂದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಕೇವಲ 3 ಪ್ರತಿಶತರಷ್ಟು ಮತಗಳಿಂದ ಗೆಲುವು ಸಾಧಿಸಿರುವುದು ಗಮನಾರ್ಹ ಸಂಗತಿ ಎಂದ ಅವರು ಡಾ.ಅಂಬೇಡ್ಕರ್ ನಮಗೆ ಸಂವಿಧಾನ ಕೊಟ್ಟರು ಮತ್ತು ಮಾಜಿ ಪ್ರಧಾನಿ ರಾಜೀವ ಗಾಂಧಿ ನಮ್ಮ ಯುವಕರಿಗೆ ಮತದಾನದ ಹಕ್ಕು ನೀಡಿದರು ಆದರೆ ಇಂದಿನ ಸರಕಾರ ಮಾತ್ರ ಜನರಿಂದ ಮತಗಳ್ಳತನ ಮಾಡುತ್ತಿದ್ದು, ಇದನ್ನು ವಿರೋಧಿಸಿ ನಾವೆಲ್ಲ ಅಂದೋಲನದಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.

ಈ ವೇಳೆ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಹೆಚ್ಚು ಮಹತ್ವ ಇದೆ ಆದರೆ ನಮ್ಮ ಮತಗಳೇ ಕಳ್ಳತನವಾದರೆ ಹೇಗೆ ಎಂದು ಪ್ರಶ್ನಿಸಿದ ಅವರು ಮತಗಳ್ಳತನ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ವೋಟ್ ಬಚಾವೋ ದೇಶ ಬಚಾವೋ ಆಂದಲೋನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಕಾಗವಾಡ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕ್ಕಿವಾಟೆ, ಆನಂತಪುರ ಬ್ಲಾಕ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಕೆ.ಪಿ.ಸಿ.ಸಿ ಸದಸ್ಯ ಚಂದ್ರಕಾಂತ ಇಮ್ಮಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ ಉಪಸ್ಥಿತರಿದ್ದರು.


ಮತದಾನವು ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಶಕ್ತಿಯಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕು ಸುರಕ್ಷಿತವಾಗಿರಬೇಕು. ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪ್ರತಿಯೊಬ್ಬರೂ ಜಾಗೃತರಾಗಿ ಆಂದೋಲನದಲ್ಲಿ ಪಾಲ್ಗೊಳ್ಳಬೇಕು.

ಗಜಾನನ ಮಂಗಸೂಳಿ. ಕಾಂಗ್ರೆಸ್ ಮುಖಂಡ. ಕೆ.ಪಿ.ಸಿ.ಸಿ ಕಾಗವಾಡ ಮತಕ್ಷೇತ್ರದ ಪ್ರಭಾ