Home ಜಿಲ್ಲೆ ದಾಖಲೆ ಫಲಿತಾಂಶ

ದಾಖಲೆ ಫಲಿತಾಂಶ

ತೇರದಾಳ, ಮಾ 26: ತೇರದಾಳ ಪಟ್ಟಣದ ಎಸ್‍ಡಿಎಂ ಟ್ರಸ್ಟ್‍ನ ದಾನಿಗೊಂಡ ಕಾಲೇಜ್ ಆಫ್ ನರ್ಸಿಂಗ್ ಮಕ್ಕಳು ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಪ್ರಕಟಿಸಿರುವ ಬೇಸಿಕ್ ನರ್ಸಿಂಗ್ 2ನೇ ಸೆಮಿಸ್ಟರ್ ಹಾಗೂ 4ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಮೆರೆದಿದ್ದಾರೆ.


2ನೇ ಸೆಮಿಸ್ಟರ್ ಫಲಿತಾಂಶ: ಪರೀಕ್ಷೆ ಬರೆದ ಒಟ್ಟು 40 ಮಕ್ಕಳಲ್ಲಿ 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 18 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.


ದೀಪಾ ಸಿಂಧ್ಯಾ ನಟ್ಟಿ: ಪ್ರಥಮ ರಾಂಕ್, ಆದರ್ಶ ಮಾನೆ: ದ್ವಿತೀಯ ರಾಂಕ್, ಶ್ವೇತಾ ಪೂಜೇರಿ: ತೃತೀಯ ರಾಂಕ್, 4ನೇ ಸೆಮಿಸ್ಟರ್ ಫಲಿತಾಂಶ: ಒಟ್ಟು 25 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.


ವರ್ಷಾ ಮಿಟಾವಕರ: ಪ್ರಥಮ ರಾಂಕ್, ವಾಣೀಶ್ರೀ ಮುಗತಿ: ದ್ವಿತೀಯ ರಾಂಕ್, ವಸುಧಾ ಮುರಗೋಡ: ತೃತೀಯ ರಾಂಕ್
ದಾಖಲೆಯ ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಸಂಸ್ಥಾಪಕ ಅಧ್ಯಕ್ಷರಾದ ಡಾ. ಮಹಾವೀರ ದಾನಿಗೊಂಡ, ಎಂ.ಡಿ. ಡಾ. ಪುಷ್ಪದಂತ ದಾನಿಗೊಂಡ, ಮತ್ತು ಪ್ರಾಚಾರ್ಯರಾದ ಡಾ. ಎಸ್. ಅನ್ನಪೂರ್ಣ ಅವರು ಅಭಿನಂದಿಸಿದ್ದಾರೆ.