
ಬೀದರ: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಹಾಗೂ ಹಿರಿಯ ದಲಿತ ನಾಯಕರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿಯವರ ಬೆಂಗಳೂರು ನಿವಾಸಕ್ಕೆ ಚಾಕು , ಚೂರಿ, ಹಾಗೂ ಇತರ ಅಪಾಯಕಾರಿ ವಸ್ತುಗಳನ್ನು ಆನ್‍ಲೈನ್ ಮೂಲಕ ಕಳುಹಿಸಿರುವ ಘಟನೆಯನ್ನು ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ.
ಈ ಘಟನೆಯನ್ನು ಖಂಡಿಸಿ ದಲಿತ ನಾಯಕರ ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವಂತೆ ಆಗ್ರಹಿಸಿ ದಿನಾಂಕ 09-11-2026 ರಂದು ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರವರ ವೃತ್ತದಲ್ಲಿ ಪ್ರತಿಭಟನೆಯನ್ನು ಉದೇಶಿಸಿ ಮಾತನಾಡಿದ ಅವರು ಈ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಚಾಕು , ಚೋರಿ ತೋರಿಸಿ ಬೇದರಿಸುವ ಪ್ರವೃತ್ತಿ ಹೆಚ್ಚಾಗಿದೆ. ಈ ನಿಚ ಕೆಲಸ ಬಹಳ ದಿನ ನಡೆಯುವುದಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಜನರು ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ರವಿ ನಿಜಾಂಪೂರೆ ಹೇಳಿದರು.
ಈ ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಮೋರ್ಚಾ ಜಿಲ್ಲಾಧ್ಯಕ್ಷರಾದ ರವಿ ನಿಜಾಂಪೂರೆ, ಉಪಾಧ್ಯಕ್ಷರಾದ ಮಹೇಶ ದೊಡ್ಡಿ, ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಜೈ ಭೀಮ್ ಬಂಧು, ಲುಂಬಿಣಿ ಗೌತಮ್ , ನಗರ ಘಟಕದ ಅಧ್ಯಕ್ಷರಾದ ಶಶಿ ಹೊಸಳ್ಳಿ, ಗ್ರಾಮಾಂತರ ಘಟಕದ ಅಧ್ಯಕ್ಷರಾದ ದಿಪೀಕ್ ಗಾದಗೆ, ರಾಜೇಂದ್ರ ಪೂಜಾರಿ, ಸುಭಾಷ ವರ್ಮಾ, ಸ್ವಾಮಿದಾಸ ಕೆಂಪೇನೋರ್, ಪ್ರಕಾಶ ಮಹಾರಾಜ ಕೆರೋರ್, ಶಿವಕಾಂತ ಹಾರೂರಗೇರಿ, ನಿಜಲಿಂಗ ಪಾಟೀಲ, ಶಿವಶಂಕರ ಚಾಂಬೋಳ, ಭೀಮಣ್ಣ ಚಿಕಪೇಟ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು





















