
ಕಲಬುರಗಿ,ಮೇ.21-ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಬಂದಿಯೊಬ್ಬರನ್ನು ಸಂದರ್ಶಿಸಲು ಬಂದ ವ್ಯಕ್ತಿಯೊಬ್ಬ ಕಾರಾಗೃಹದ ಒಳಗೆ ನಿಷೇಧಿತ ವಸ್ತುಗಳನ್ನು ಎಸೆದು ಹೋಗಿರುವ ಘಟನೆ ನಡೆದಿದೆ.
ಕಾರಾಗೃಹದ ಬಂದಿಯಾದ ಜಾವೇದ್ ಪಟೇಲ್ ಎಂಬಾತನನ್ನು ಸಂದರ್ಶಿಸಲು ಬಂದ ಎಂ.ಡಿ.ಅಯೂಬ್ ಎಂಬಾತನ ಕಾರಾಗೃಹದ ಒಳಗೆ ನಿಷೇಧಿತ ವಸ್ತುಗಳನ್ನು ಎಸೆದಿದ್ದು, ಕಾರಾಗೃಹದ ವಿಚಾರಣೆ ಬಂದಿ ಎಂ.ಡಿ.ಸಮೀರ್ ಅಲಿಯಾಸ್ ಟಮಟಾ ಸಮೀರ್ ಎಂಬಾತನ ಬಳಿ ಈ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ನಿಷೇಧಿತ ವಸ್ತುಗಳಾದ 5 ತಂಬಾಕು ಪಾಕೇಟ್, 2 ಸಿಗರೇಟ್ ಪ್ಯಾಕ್, 3 ಕಟ್ಟು ಬೀಡಿ ಮತ್ತು 7 ಸುಣ್ಣದ ಪಾಕೇಟ್ ಪತ್ತೆಯಾಗಿದ್ದು, ಕಾರಾಗೃಹದ ಒಳಗೆ ಈ ನಿಷೇಧಿತ ವಸ್ತುಗಳನ್ನು ಎಸೆದ ಎಂ.ಡಿ.ಅಯೂಬ್ ಮತ್ತು ನಿಷೇಧಿತ ವಸ್ತುಗಳನ್ನು ಹೊಂದಿದ ಕಾರಾಗೃಹದ ವಿಚಾರಣೆ ಬಂದಿ ಎಂ.ಡಿ.ಸಮೀರ್ ವಿರುದ್ಧ ಕೇಂದ್ರ ಕಾರಾಗೃಹದ ವಾರ್ಡರ್ ಬಸಯ್ಯ ಹಿರೇಮಠ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.






















