
ಕಲಬುರಗಿ,ಫೆ.7-ನಾಗರಿಕತೆ ಮತ್ತು ಅಕ್ಷರಗಳು ಹುಟ್ಟುವ ಮೊದಲೇ ಚಿತ್ರಕಲೆ ಹುಟ್ಟಿದೆ ಎಂದು ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಹೇಳಿದರು.
ನಗರದ ಕೆಸಿಇಡಿಟಿ ಬಾಲಕಿಯರ ಪ್ರೌಢಶಾಲೆಯ ಮಕ್ಕಳಿಂದ ಮಾತೋಶ್ರೀ ನೀಲಗಂಗಮ್ಮ ಅಂದಾನಿ ಆಟ್ರ್ಸ್ ಗ್ಯಾಲರಿಯಲ್ಲಿ ಫೆ. 6 ಮತ್ತು 7 ರಂದು ಮುಂಜಾನೆ 10.30 ರಿಂದ 5.30ರವರೆಗೆ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಚಿತ್ರಕಲಾ ಪರಿವೀಕ್ಷಕರಾದ ಶಿವಾನಂದ ಕೊಪ್ಪದ ಅವರು ಮಾತನಾಡಿ, ಕೆಸಿಇಡಿಟಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಸಂಗೀತ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುತ್ತಾರೆಂದು ಚಿತ್ರಕಲಾ ಪ್ರದರ್ಶನ ನೋಡಿದರೆ ಗೊತ್ತಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಐಡಿಯಲ್ ಫೈನ್ ಆಟ್ರ್ಸ್ ಇನ್ಸಟಿಟ್ಯೂಟ್ ಮುಖ್ಯಸ್ಥರಾದ ವಿ.ಜಿ.ಅಂದಾನಿ ಅವರು ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಬಿ.ಕೆ.ಹಳ್ಳಿ, ಖಚಾಂಚಿ ಬಸವರಾಜ ಆವಂಟಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು.ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಕು.ಐಶ್ವರ್ಯಾ ವಂದಿಸಿದರು.























