ಸ್ಥಳೀಯರಿಗ ಮಾತ್ರ ಮನೆ

ಬೆಂಗಳೂರು, ಜ. ೮-ಕೋಗಿಲುವಿನಲ್ಲಿ ಮನೆ ಕಳೆದುಕೊಂಡವರಿಗೆ ಮಾತ್ರ ಮನೆ ಕೊಡುತ್ತೇವೆ. ಹೊರಗಿನವರಿಗೆ ಯಾವುದೇ ಕಾರಣಕ್ಕೂ ಮನೆ ಕೊಡಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದರು.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಗಿಲುವಿನಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ತರ ದಾಖಲಾತಿ ಪರಿಶೀಲನೆ ನಡೆದಿದೆ. ಎಲ್ಲ ದಾಖಲೆಗಳನ್ನು ನೋಡಬೇಕು. ಜನರಿಗೆ ಮನೆ ಕೊಡಬಹುದು. ಆದರೆ, ೧೬೧ ಮನೆ ನೆಲಸಮಗೊಳಿಸಲಾಗಿದೆ. ಷರತ್ತುಗಳನ್ನು ಹಾಕಿ ಮನೆ ಕೊಡುತ್ತೇವೆ ಎಂದರು.


ಮನೆ ಪಡೆಯುವರು ಸ್ಥಳೀಯರೇ ಆಗಿರಬೇಕು. ಅವರಿಗೆ ಮಾತ್ರ ಮನೆ. ಹೊರಗಿನವರಿಗೆ ಯಾವುದೇ ಕಾರಣಕ್ಕೂ ಮನೆ ಕೊಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.


ಕೋಗಿಲುವಿನಲ್ಲಿ ಮನೆ ಕಳೆದುಕೊಂಡ ೨೯ ಜನರ ದಾಖಲಾತಿ ಸರಿಯಾಗಿದೆ. ಅವರಿಗೆ ಇವತ್ತೆ ಮನೆ ಕೊಡುವ ಸಾಧ್ಯತೆಯೂ ಇದೆ ಎಂದು ಹೇಳಿದರು.