
ಕಲಬುರಗಿ,ಮಾ.20-ಎನ್‍ಎಸ್‍ಎಸ್ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುತ್ತದೆ ಎಂದು ಮಿಲಿಂದ್ ಪದವಿ ಪೂರ್ವ ಮಹಾವಿದ್ಯಾಲಯದ ಶಿಕ್ಷಣ ಶಾಸ್ತ್ರ ಉಪನ್ಯಾಸಕರಾದ ಬಲಭೀಮರಾಯ ಹೇಳಿದರು.
ನಗರದ ಕೆಪಿಇ ಸಂಸ್ಥೆಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಮಾ.18 ರಂದು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,
ಎನ್‍ಎಸ್‍ಎಸ್ ಯುವಜನರಲ್ಲಿ ನಾಯಕತ್ವದ ಗುಣಗಳು ಮತ್ತು ಪ್ರಜಾಸತ್ತಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ‘ಸೇವೆಯ ಮೂಲಕ ಶಿಕ್ಷಣ’ ಎಂಬ ಧ್ಯೇಯವಾಕ್ಯದೊಂದಿಗೆ, ಇದು ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ, ರಾಷ್ಟ್ರಪ್ರೇಮ ಮತ್ತು ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಸಿದ್ದಪ್ಪ ಎಮ್. ಕಾಂತಾ ಅವರು ಮಾತನಾಡುತ್ತಾ ಎನ್.ಎಸ್.ಎಸ್.ಗೆ ಸೇರಿದವರಿಗೆ ಸೇರುವ ಮೊದಲು ಉಂಟಾಗುವ ಪ್ರಶ್ನೆಯಿದು. ಸಮಾಜ ಸೇವೆಯಿಂದ ನಮಗೇನು ಲಾಭವೆಂದು ಅದರಲ್ಲಿ ತೊಡಗಿದ ಮೇಲೆ ಗೊತ್ತಾಗುವುದು. ಎನ್‍ಎಸ್‍ಎಸ್‍ನಿಂದ ತುಂಬ ಲಾಭವಿದೆ ಶಿಕ್ಷಣವೆಂದರೆ ಸರ್ವತೋಮುಖ ಬೆಳವಣಿಗೆ ಸಾಧಿಸುವುದೇ ಇದರ ಮೂಲ ಉದ್ದೇಶ ಎಂದು ನುಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ವಸಂತ ನಾಶಿ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡುತ್ತಾ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು 18-03.2026 ರಿಂದ 25-3-2026ರ ವರೆಗೆ ಜರಗಲಿದೆ. ರಾಷ್ಟ್ರೀಯ ಸ್ವಯಂ ಸೇವಕನು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಉತ್ತಮ ಅಭಿಪ್ರಾಯವನ್ನು ಜನರಲ್ಲಿ ಬಿಂಬಿಸುವುದು ಶಿಸ್ತು, ಸಮಯ ಪಾಲನೆ, ಸಹಬಾಳ್ವೆ, ಶ್ರಮದಾನ ಇತ್ಯಾದಿಗಳನ್ನು ಚಾಚೂ ತಪ್ಪದೆ ಪಾಲಿಸುವುದು.ಎಂದು ಹೇಳಿದರು.
ಸಮಾರಂಭದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಿರ್ಮಲಾ ಸಿರಗಾಪುರ್, ಗ್ರಂಥಪಾಲಕರ ರಮೇಶ್ ಜಾಬನೂರು, ಡಾ. ಸುದರ್ಶನ್ ಮದನ್ಕರ್, ಡಾ. ದತ್ತುರಾಯ,ಡಾ ಹರ್ಷವರ್ಧನ್ ಡಾ. ಕರಬಸಪ್ಪ ಮೂಲಗೆ,ಡಾ. ಶಿವಕುಮಾರ್ ಮತ್ತು ಶೃತಿ ಉಪಸ್ಥಿತರಿದ್ದರು ಡಾ. ಗಾಂಧೀಜಿ ಮೋಳಕೆರೆ ವಂದಿಸಿದರು ಡಾ. ಅರುಣ್ ಕುಮಾರ್ ಸಂಗಾವಿ ನಿರೂಪಿಸಿದ್ದರು.



























