
ಕಲಬುರಗಿ,ಮೇ.6-ಇವತ್ತಿನ ಕಾಲಮಾನ ಪ್ರಕಾರ ನಾವೆಲ್ಲ ಸಂಗೀತದಿಂದ ಬಹಳ ಹಿಂದೂಳಿದವರು ಕಲೆ ಹುಟ್ಟಿದೆ ಗ್ರಾಮೀಣ ಪ್ರದೇಶದಲ್ಲಿ ಕಲೆಯಿಂದ ಮನುಷ್ಯನ ಜೀವನದಲ್ಲಿ ಉಲ್ಲಾಸ ಹೆಚ್ಚಾಗುತ್ತದೆ ಜೊತೆಯಲ್ಲಿ ಮನುಪ್ಯನ ಆಯುಷ್ಯ ಹೆಚ್ಚಾಗುತ್ತದೆ ಎಂದು ಸಿದ್ದರಾಮಯ್ಯ ಸ್ವಾಮಿ ಹೇಳಿದರು.
ಅವರು ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಅರ್ಜುಣಗಿ ಗ್ರಾಮದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡ ಸಿದ್ದಶ್ರೀ ಸಂಸ್ಕøತಿಕ ಕಲಾ ಸಂಘ ಸಯ್ಯದ್ ಚಿಂಚೋಳಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಕ್ಷರದಲ್ಲಿ ಜರುಗಿದ ಗಡಿನಾಡ ಸಂಗೀತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದಿಕೆ ಮೇಲೆ ಗುರುಶಾಂತಪ್ಪ ಬಿರಾದಾರ, ಹಣಮಂತರಾಯ ಅನೂರೆ, ಪ್ರವೀಣಕುಮಾರ ಕೋಣೆ, ಬಸವಣ್ಣಪ್ಪ ಎಂ ಕೆ, ಭೀಮರಾವ್ ಜಮಾದಾರ್ ಅಲ್ಲದೆ ಗಣ್ಯ ಮಾನ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
Àಕಲಾವಿದರಾದ ಭೀಮರಾವ್ ಎಸ್ ಎಚ್, ರಮೇಶ್ ಕಲ್ಯಾಣಿ, ಮೌನೇಶ್ ಸುತಾರ್, ಸಿದ್ದಣ್ಣ ಬಿರಾದಾರ್, ಶರಣಪ್ಪ ಚೌಕಿ, ಪ್ರಭುಲಿಂಗ ಕೆ, ಸಿದ್ದರಾಮಯ್ಯ, ನಿರ್ಮಲಾ ಎಕೆ, ಶಶಿಕಲಾ ಕೋಣೆ, ಜಯಶ್ರೀ ಕೆ, ಸಂಗಮ್ಮ ಬಿರಾದಾರ, ಮಲ್ಲಮ್ಮ ಬಿರಾದಾರ ಅಲ್ಲದೆ ಶ್ರೀ ಚೌಡೇಶ್ವರಿ ಮಹಿಳಾ ಭಜನಾ ಸಂಘದವರು ಚೆನ್ನಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಎಂದು ಮೌನಯೋಗಿ ಸಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿಯಾದ ಸಿದ್ದಪ್ಪ ಸಿನ್ನೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















