
ನವಲಗುಂದ,ಜೂ29: ಒಕ್ಕಲುತನವನ್ನೇ ನಂಬಿ ಬದುಕುತ್ತಿರುವ ಪಂಚಮಸಾಲಿ ಸಮಾಜವು ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡಬೇಕಾದ ಅನಿವಾರ್ಯತೆ ಇದ್ದು, ಪಾಲಕರು ಸಾಲ ಮಾಡಿಯಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದರು.
ಅವರು ಸ್ಥಳೀಯ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ತಾಲೂಕಾ ಲಿಂಗಾಯತ ಪಂಚಮಸಾಲಿ ಸಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನನಿಧ್ಯ ವಹಿಸಿ ಮಾತನಾಡುತ್ತಿದ್ದ ಅವರು ಪಂಚಮಸಾಲಿ ಮದುದಾಯದಲ್ಲಿ ಇತ್ತಿಚೆಗೆ ಕೆಎಎಸ್ ಪರೀಕ್ಷೆ ಪಾಸಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯಾಗಿದ್ದು ಪ್ರತಿಯೊಬ್ಬರೂ ಸರಕಾರಿ ನೌಕರಿ ಅವಲಂಭಿಸಿದೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಬೇಕೆಂದು ಸಲಹೆ ನೀಡಿದರು.
ನರಗುಂದ ಶಾಸಕ ಸಿ,ಸಿ,ಪಾಟೀಲ್ ಮಾತನಾಡಿ ಪ್ರಸ್ತುತ ಕೃಷಿಯನ್ನೇ ನಂಬಿ ಬದುಕುವು ಕಷ್ಟವಾಗುತ್ತಿದೆ. ಕಣೇರಿ ಮಠವು ಮಾಡುತ್ತಿರುವ ಸಾವಯವ ಕೃಷಿಯನ್ನು ಅಳವಡಿಸಿಕೊಂಡಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದ್ದು, ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆ ಆದಲ್ಲಿ ಉನ್ನತ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲು ಸಿದ್ದನಿದ್ದು, ಸಮಾಜ ಬಾಂಧವರು ಶಿಕ್ಷಣದೊಂದಿಗೆ ತಮ್ಮ ಮಕ್ಕಳಿಗೆ ಸಂಸ್ಕಾರಯು ಜೀವನ ಕಲಿಸಬೇಕೆಂದರು.
ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ ಸಮಾಜದಲ್ಲಿ ಐಎಎಸ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1ಲಕ್ಷರೂಗಳ ಸಹಾಯಧನ ನೀಡುವುದಾಗಿ ವಾಗ್ದಾನ ಮಾಡಿದರು.
ಸಮಾರಂಭದ ಉದ್ಘಾಟಿಸಿದ ಮಾಜಿ ಶಾಸಕ ಡಾ.ಆರ್,ಬಿ,ಶಿರಿಯಣ್ಣವರ ಸಮಾಜದ ಬೇಡಿಕೆಗಳ ಬೇಡಿಕೆ ಈಡೇರಿಕೆಗಾಗಿ ಹೋರಾಟದ ಹಾದಿ ಅನಿವಾರ್ಯವಾಗಿದ್ದು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ಸಮಾಜದ ಏಳ್ಗೆ ಸಾಧ್ಯ ಎಂದರು.
ತಾಲೂಕಾ ಅಧ್ಯಕ್ಷ ಶಂಕರಗೌಡ ಬಾಳನಗೌಡ್ರ ಅಧ್ಯಕ್ಷತೆ ವಹಿಸಿದ್ದರು.ಶಾಂತಾದೇವಿ ನಿಡವಣಿ, ಎಮ್,ಎಸ್,ರೋಣದ.ಅಡಿವೆಪ್ಪ ಮನಮಿ. ನಿಂಗಣ್ಣ ಕರಿಕಟ್ಟಿ. ಸದುಗೌಡ ಪಾಟೀಲ್.ದೇವರಾಜ ದಾಡಿಬಾವಿ.ಸಿದ್ದನಗೌಡ ಪಾಟೀಲ್,ಗಂಗಪ್ಪ ಮನಮಿ,ದ್ಯಾಮನಗೌಡ ಪಾಟೀಲ್ ಮಾತನಾಡಿದರು.
ಡಾ.ಸುರೇಶ ಕಮ್ಮಾರ,ವಿನೋದಾ ನಾಗರಳ್ಳಿ.ವಿಜಯಲಕ್ಷ್ಮೀ ಪಾಟೀಲ್,ನಾಗಪ್ಪ ಸಂಕದ,ಡಾ.ಕೆ.ಬಿ.ಮದ್ನೂರ. ನಾಗನಗೌಡ ಪಾಟೀಲ್, ವೀರಣ್ಣ ಚವಡಿ.ಶಂಕ್ರು ತೋಟದ.ಸಿದ್ದಲಿಂಗಪ್ಪ ಮದ್ನೂರ. ಷಣ್ಮುಖ ಗುರಿಕಾರ. ಬಸವರಾಜ ಕೊಟಗಿ, ಮಲ್ಲಪ್ಪ ಕಿರೇಸೂರ, ಮಹೇಶ ಕುರ್ತಕೋಟಿ.ಎಸ್.ವಿ.ಮುದಿಗೌಡರ, ಗೌರೀಶ ಕಮತರ ಎಂ ಎಸ್ ಕೊಪ್ಪದ ಮತ್ತಿತರರಿದ್ದರು.