
ಕಲಬುರಗಿ:ಇಂದಿರಾ ಸ್ಮಾರಕ ಭವನದ ಎದುರು ಪಾಲಿಕೆಯ ಮುಂದುವರೆದ ಸಾಮಾನ್ಯ ಸಭೆಗೂ ಮುನ್ನ ನಗರದಲ್ಲಿ ಕಳೆದೊಂದು ವರ್ಷದಿಂದ ಮೇಯರ್ ಹಾಗೂ ಆಯುಕ್ತರು ಯಾವುದೇ ಕೆಲಸ ಮಾಡಿಲ್ಲ ಅವರು ಜೀವಂತವಾಗಿಲ್ಲ ಎಂದು ಆರ್ ಐಪಿ ಬೋರ್ಡಗಳನ್ನು ಹಿಡಿದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರಾದ ಸಾಜೀದ್ ಕಲ್ಯಾಣಿ, ಮೇಘನಾ ಕಳಸ್ಕರ್, ಅರುಣಾಬಾಯಿ ಲಿಂಗನವಾಡಿ, ಗಂಗಮ್ಮ ಬಸವರಾಜ ಮುನ್ನಳ್ಳಿ ಹಾಗೂ ಇತರರು ಪ್ರತಿಭಟನೆ ನಡೆಸಿದರು.