
ಕಲಬುರಗಿ,ಮಾ.20-ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಲುವಾಗಿ ರೂಪಿಸಿರುವ ಕಲಬುರಗಿ ನೆಕ್ಸ್ಟ್ ಫೌಂಡೇಶನ್ ಹಾಗೂ ಕ್ಯಾಡೆನ್ಸ್ ಆರ್ಕಿಟೆಕ್ಟ್ ಇಂಟರ್ ಡಿಸೈನ್ ನಡುವೆ ಒಡಂಬಡಿಕೆ ಪತ್ರಿಕ್ಕೆ ಸಹಿ ಹಾಕಲಾಯಿತು.
ಬೆಂಗಳೂರಿನಲ್ಲಿಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಕಂಪನಿಯ ಪ್ರಧಾನ ಆರ್ಕಿಟೆಕ್ಟ್ ಆರ್.ನರೇಂದ್ರ ಪಿಗಳ್ ಹಾಗೂ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಒಪ್ಪಂದ ಪತ್ರಿಕ್ಕೆ ಸಹಿ ಹಾಕಿದರು.
ಕಲಬುರಗಿಯಲ್ಲಿ ಲಭ್ಯವಿರುವ ಸುಮಾರು 30 ಎಕರೆ ಪ್ರದೇಶದಲ್ಲಿ ಬಹುಸೌಲಭ್ಯಗಳನ್ನು ಒಳಗೊಂಡ ಉದ್ಯಾನವನ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಕಲಬುರಗಿ ಅಭಿವೃದ್ಧಿ ಪ್ರಾಧಿಕಾರದ (ಕುಡಾ) ಅಧ್ಯಕ್ಷರಾದ ಮೊಹಮದ್ ಮರುಫ್‍ಖಾನ್ ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.



























