
ಬೆಂಗಳೂರು, ಮಾ. ೨೦- ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಆಗಿರುವ ಕೆ.ಎಂ.ಎಫ್ ಇದೀಗ ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ. ಅಂತರರಾಷ್ಟ್ರೀಯ ಉದ್ವಿಗ್ನತೆ ಹಾಗೂ ಅದರ ಪರಿಣಾಮವಾಗಿ ಉಂಟಾದ ಇಂಧನ ಅಭಾವ, ಈಗ ನಂದಿನಿ ಉತ್ಪನ್ನಗಳ ಮೇಲೂ ನೇರ ಪರಿಣಾಮ ಬೀರಿದೆ.
ನ.ದಿನಿ ಉತ್ಪನ್ನಗಳು ಇನ್ನೆರಡು ದಿನ ಮಾತ್ರ ಲಭ್ಯವಿರಲಿದ್ದು, ನಂತರ ಕೊರತೆ ಎದುರಾಗುವ ಭೀತಿ ವ್ಯಕ್ತವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ.
ಪ್ರತಿ ತಿಂಗಳು ಸುಮಾರು ೪೫೦ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಅವಲಂಬಿಸಿರುವ ಕೆಎಂಎಫ್, ಕಳೆದ ಕೆಲ ದಿನಗಳಿಂದ ಯಾವುದೇ ಸಿಲಿಂಡರ್ ಪೂರೈಕೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಇರುವ ಸ್ಟಾಕ್ ಕೇವಲ ಎರಡು ದಿನಗಳಷ್ಟೇ ಸಾಕಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆಯೊಳಗೆ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಆಗದಿದ್ದರೆ, ನಂದಿನಿ ಸಿಹಿ ಮತ್ತು ಖಾರ ತಿಂಡಿಗಳ ಉತ್ಪಾದನೆ ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ, ಕೆಎಂಎಫ್ ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೆ ವಿಷಯವನ್ನು ತಂದಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಐPಉ ಕೊರತೆಯಿಂದ ರಾಜಧಾನಿ ಭಾಗದಲ್ಲಿ ಹೋಟೆಲ್‌ಗಳೂ ಬಂದ್ ಆಗುತ್ತಿರುವ ಹಿನ್ನಲೆಯಲ್ಲಿ, ಕೆಎಂಎಫ್ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಜೊತೆಗೆ, ಹಾಲಿನ ಸರಬರಾಜಿನ ಪ್ರಮಾಣದಲ್ಲೂ ಸ್ವಲ್ಪ ಇಳಿಕೆ ಕಂಡುಬರುತ್ತಿದೆ.
ಈ ಸಮಸ್ಯೆ ಮುಂದುವರೆದರೆ, ಹಾಲು ಮತ್ತು ಮೊಸರು ಉಳಿಕೆಯಾಗುವ ಆತಂಕವೂ ಕೆಎಂಎಫ್ ವಲಯದಲ್ಲಿ ವ್ಯಕ್ತವಾಗಿದೆ. ಸರಿಯಾದ ಸಮಯದಲ್ಲಿ ಎಲ್‌ಪಿಜಿ ಪೂರೈಕೆ ಆಗದಿದ್ದರೆ, ನಂದಿನಿ ಉತ್ಪನ್ನಗಳ ಲಭ್ಯತೆ ತೀವ್ರವಾಗಿ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದರು.
ಇಂಧನ ಕೊರತೆ ಈಗ ಹೋಟೆಲ್ ಉದ್ಯಮದಿಂದ ಹಾಲು ಉತ್ಪಾದನಾ ಕ್ಷೇತ್ರದವರೆಗೂ ವ್ಯಾಪಿಸಿ, ರಾಜ್ಯದ ಪ್ರಮುಖ ಬ್ರ್ಯಾಂಡ್‌ಗಳಿಗೂ ಹೊಡೆತ ನೀಡುತ್ತಿರುವುದು ಸ್ಪಷ್ಟವಾಗಿದೆ.






























