
ಕಲಬುರಗಿ,ಆ.18: ನಗರದ ಹಳೆಯ ಜೇವರಗಿರಸ್ತೆ ರೈಲ್ವೆ ಕೆಳಸೇತುವೆ ಹತ್ತಿರ ಅಪಾರ್ಟಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಪರಿಚಿತರು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ ಘಟನೆ ರವಿವಾರ ರಾತ್ರಿ ಸಂಭವಿಸಿದೆ.
ಶಹಬಾದ್ ಪಟ್ಟಣದ ನಿವಾಸಿ ಸುಭಾಷ ಮುಡದಿ ( 45) ಕೊಲೆಯಾದ ವ್ಯಕ್ತಿ.ಕೊಲೆಗಾರರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.