ಮಲ್ಲಿಕಾರ್ಜುನ ಶಿವಯೋಗಿಗಳ ಪುಣ್ಯಾರಾಧನೆ

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೨೯: ಪ್ರತಿ ಸಲದಂತೆ ಜುಲೈ ೩ ರಿಂದ ೧೦ ರ ವರೆಗೆ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ೪೧ನೇ ಪುಣ್ಯಾರಾಧನೆ ಸುಕ್ಷೇತ್ರ ಜ್ಞಾನಯೋಗಾಶ್ರಮದಲ್ಲಿ ಜರುಗಲಿದೆ.
ಜು.೩ ರಿಂದ ೯ ರ ವರೆಗೆ ಪ್ರತಿ ನಿತ್ಯ ಬೆಳಗಿನ ಜಾವ ೬ ರಿಂದ ೭ ರ ವರೆಗೆ ಮತ್ತು ಸಾಯಂಕಾಲ ೫ ರಿಂದ ೬ ರ ವರೆಗೆ ಮಲ್ಲಿಕಾರ್ಜುನ ಶಿವಯೋಗಿಗಳ ಧ್ವನಿ ಸುರುಳಿ ಪ್ರವಚನ, ಜು. ೧೦ರಂದು ಗುರು ಪೌರ್ಣಿಮೆಯ ದಿವಸ ಬೆಳಗಿನ ಜಾವ ೪ ರಿಂದ ೬ ರ ವರೆಗೆ ಲೋಕ ಕಲ್ಯಾಣಾರ್ಥ ಜಪಯಜ್ಞ ೬ ರಿಂದ ೭ ರ ವರೆಗೆ ಮಲ್ಲಿಕಾರ್ಜುನ ಶ್ರೀಗಳ ಧ್ವನಿ ಸುರುಳಿ ಪ್ರವಚನ, ೭ ರಿಂದ ೯ ರ ವರೆಗೆ ಪ್ರಣವಮಂಟಪ ಪೂಜೆ, ೯ ರಿಂದ ಸಾಯಂಕಾಲ ೫ ಗಂಟೆವರೆಗೆ ವಚನ ಗಾಯನ, ಭಕ್ತಿಗೀತೆ, ಏಕಪಾತ್ರಾಭಿನಯ, ಪ್ರಹಸನ, ನೃತ್ಯ, ಛದ್ಮವೇಷ, ಭಜನಾ ಕಾರ್ಯ್ಕಕ್ರಮಗಳು ಜರುಗಲಿವೆ.
ಸದ್ಭಕ್ತರು ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸೇವೆಗೈದು ಪುನೀತರಾಗಬೇಕು ಎಂದು ಜ್ಞಾನಯೋಗಾಶ್ರಮದ ಉತ್ಸವ ಸಮಿತಿಯವರು ಪ್ರಕಟಣೆಯಲ್ಲಿ ಕೋರಿದ್ದಾರೆ.