Home ಜಿಲ್ಲೆ ಕಲಬುರಗಿ ಕಾರ್ಮಿಕರಿಗೆ ಮಾಸ್ಟರ್ ಹೆಲ್ತ್ ಚೆಕಪ್ ಹಾಗೂ ಇಎಸ್‍ಐ ಸೌಲಭ್ಯ ಕಡ್ಡಾಯಗೊಳಿಸಿ:ಜಿಲ್ಲಾಧಿಕಾರಿ ಇಕ್ರಂ ಶರೀಫ್

ಕಾರ್ಮಿಕರಿಗೆ ಮಾಸ್ಟರ್ ಹೆಲ್ತ್ ಚೆಕಪ್ ಹಾಗೂ ಇಎಸ್‍ಐ ಸೌಲಭ್ಯ ಕಡ್ಡಾಯಗೊಳಿಸಿ:ಜಿಲ್ಲಾಧಿಕಾರಿ ಇಕ್ರಂ ಶರೀಫ್

ಕಲಬುರಗಿ: ಸಫಾಯಿ ಕರ್ಮಚಾರಿಗಳು ಹಾಗೂ ನೈರ್ಮಲ್ಯ ಸಿಬ್ಬಂದಿಯ ಆರೋಗ್ಯ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು. ವಾರದ ಅಂತ್ಯದೊಳಗೆ ಪ್ರತಿಯೊಬ್ಬ ಸಿಬ್ಬಂದಿಗೂ ಮಾಸ್ಟರ್ ಹೆಲ್ತ್ ಚೆಕಪ್ ಪೂರ್ಣಗೊಳಿಸಲು ಸೂಕ್ತ ವೇಳಾಪಟ್ಟಿ ಸಿದ್ಧಪಡಿಸಿ ವರದಿ ನೀಡಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬುಧುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸಫಾಯಿ ಕರ್ಮಚಾರಿಗಳು, ವಾಹನ ಚಾಲಕರು ಹಾಗೂ ಕಾರ್ಮಿಕ ವರ್ಗದವರ ಆರೋಗ್ಯ ಭದ್ರತೆ ಮತ್ತು ಇನ್ಶೂರೆನ್ಸ್ ಕುರಿತು ಸುದೀರ್ಘ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಖಾಸಗಿ ಇನ್ಶೂರೆನ್ಸ್ ಹಾಗೂ ಇಎಸ್‍ಐ (ಇSI) ಸೌಲಭ್ಯಗಳನ್ನು ಹೋಲಿಕೆ ಮಾಡಿ ಸಿಬ್ಬಂದಿಗೆ ಗರಿಷ್ಠ ಆರೋಗ್ಯ ಸೇವೆ ಲಭಿಸುವಂತೆ ಕ್ರಮವಹಿಸಲು ತಿಳಿಸಿದರು.
ಕಾರ್ಮಿಕ ಇಲಾಖೆಯ ನಿಯಮಾವಳಿಗಳಂತೆ ಪ್ರತಿಯೊಬ್ಬ ನೌಕರನಿಗೂ ಪಿಎಫ್, ಇಎಸ್‍ಐ ಮತ್ತು ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗುವುದನ್ನು ಅಧಿಕಾರಿಗಳು ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ಜೊತೆಗೆ, ನೈರ್ಮಲ್ಯ ಸಿಬ್ಬಂದಿಗೆ ಗ್ಲೌಸ್, ಮಾಸ್ಕ್, ನೈಟ್ ಜಾಕೆಟ್ ಮತ್ತು ರೇನ್ ಕೋಟ್‍ಗಳಂತಹ ಸುರಕ್ಷತಾ ಸಾಮಗ್ರಿಗಳನ್ನು ತಕ್ಷಣವೇ ವಿತರಿಸಿ, ಅವುಗಳ ಸರಿಯಾದ ಬಳಕೆಯಾಗುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದರು.
ಇದೇ ವೇಳೆ ನೈರ್ಮಲ್ಯ ಕಾಮಗಾರಿಗಳು ಜಟ್ಟಿಂಗ್ ಹಾಗೂ ಸಕ್ಕಿಂಗ್ ಯಂತ್ರೋಪಕರಣಗಳ ಟೆಂಡರ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಸಂಪೂರ್ಣ ಕಡತಗಳನ್ನು ಸರಿಪಡಿಸಿ ಮುಂದಿನ 48 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಗಡುವು ನೀಡಿದರು. ಸಭೆಗೆ ಪೂರ್ವ ಸಿದ್ಧತೆಯಿಲ್ಲದೆ ಆಗಮಿಸಿ ಅಸ್ಪಷ್ಟ ಮಾಹಿತಿ ನೀಡದ ಅಧಿಕಾರಿಗಳಿಗೆ , ಅಮಾನತುಗೊಳಿಸಲಾಗುವುದು. ಆಡಳಿತ ಯಂತ್ರಾಂಗದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ವಸತಿ ಯೋಜನೆಗಳ ಪರಿಶೀಲನೆ ನಡೆಸಿದ ಅವರು, ಆಳಂದ ಹಾಗೂ ಅಫ್ಜಲಪುರ ತಾಲೂಕುಗಳಲ್ಲಿ 50 ರಿಂದ 70 ಲಕ್ಷ ವೆಚ್ಚದಲ್ಲಿ ಲೇಔಟ್ ಅಭಿವೃದ್ಧಿಪಡಿಸಿ, ಮುಂದಿನ 3 ತಿಂಗಳ ಒಳಗಾಗಿ ನಿವೇಶನ ರಹಿತ ಸಫಾಯಿ ಕರ್ಮಚಾರಿಗಳಿಗೆ ಹಕ್ಕುಪತ್ರ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಶಾಹಾಬಾದ್ ವ್ಯಾಪ್ತಿಯಲ್ಲಿ ಮನೆ ಇಲ್ಲದ 30ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಲಂ ಬೋರ್ಡ್ ಯೋಜನೆಯಡಿ ವಸತಿ ಕಲ್ಪಿಸಲು ಹಾಗೂ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆ ಒಪ್ಪಂದಗಳ ಅವಧಿ ಮುಗಿಯುವ ಮುನ್ನವೇ ಪಾರದರ್ಶಕವಾಗಿ ಹೊಸ ಟೆಂಡರ್ ಮುಗಿಸಲು ತಿಳಿಸಿದರು. ಅಂತಿಮವಾಗಿ, ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನವನ್ನು ಅನಗತ್ಯ ಕಾಮಗಾರಿಗಳಿಗೆ ಪೆÇೀಲು ಮಾಡದೆ ನೌಕರರ ವಸತಿ ಹಾಗೂ ಮೂಲಭೂತ ಅಗತ್ಯಗಳಿಗೆ ಬಳಸಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ (ಪ್ರಭಾರ) ಮಧುಮತಿ, ಪೆÇ್ರಜೆಕ್ಟರ್ ಯೋಜನಾ ನಿರ್ದೇಶಕ ಜಗದೇವಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಬೇಬಿಮುಗೇರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.