
ಲಕ್ಷೆö್ಮÃಶ್ವರ,ಅ೨೭: ಮಹರ್ಷಿ ವಾಲ್ಮೀಕಿ ಒಬ್ಬ ಮಹಾನ್ ಕವಿ. ಅವರು ಸಂಸ್ಕöÈತ ಭಾಷೆಯಲ್ಲಿ÷್ಲ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಇದರಲ್ಲಿ ಭಗವಾನ್ ಶ್ರೀ ರಾಮನ ಸಂಪೂರ್ಣ ಜೀವನಶೈಲಿಯನ್ನು ಇಡಿ ಜಗತ್ತಿಗೆ ತೋರಿಸಿಕೊಟ್ಟ ಮಹರ್ಷಿ ವಾಲ್ಮೀಕಿಯವರ ಜೀವನ ಇಡಿ ಸಮಾಜಕ್ಕೆ ಒಂದು ಪಾಠವಿದ್ದಂತೆ ಎಂದು ಗ್ರೇಡ್-೨ ತಹಸೀಲ್ದಾರ ಮಂಜುನಾಥ ಅಮಾಸಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ ತಾಲೂಕಾಡಳಿತ ಹಾಗೂ ವಾಲ್ಮೀಕಿ ಸಮಾಜ ಬಾಂಧವರಿAದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾಜದ ಹಿರಿಯ ಮುಖಂಡ ಎನ್.ಎನ್.ನೆಗಳೂರ ಮಾತನಾಡಿ ಪ್ರಪಂಚಕ್ಕೆ ರಾಮಾಯಣದಂತ ಮೇರು ಕೃತಿ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ೨೪ ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನು ಅಂದಿನ ರತ್ನಾಕರ್ ಇಂದಿನ ವಾಲ್ಮೀಕಿಯವರು ರಚನೆ ಮಾಡಿ ರಾಮಾಯಣ ರಚನೆ ಮಾಡಿದ್ದು ಇತಿಹಾಸ, ಮಹರ್ಷಿ ವಾಲ್ಮೀಕಿ ಅವರ ಆಚಾರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಕಾಡಿನಲ್ಲಿ ಬೇಟೆಯಾಡುತ್ತಾ ಜೀವನ ಸಾಗಿಸುತ್ತಿರುವ ವೇಳೆಜ್ಙಾನೋದಯವಾಗಿ ಮಹರ್ಷಿ ವಾಲ್ಮೀಕಿ ಪರಿವರ್ತನೆ ಹೊಂದಿದ್ದು ಜಗತ್ತಿಗೆ ತಿಳಿದ ವಿಷಯವಾಗಿದೆ. ಮಹಾನ್ ದಾರ್ಶನಿಕರ ವ್ಯಕ್ತಿತ್ವವನ್ನು ಒಂದೆ ಜಾತಿಗೆ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿಯಾಗಿದೆ, ನಮ್ಮ ಸಮಾಜದಲ್ಲಿ ಆಗಿಹೋದ ಎಲ್ಲ ಮಹನೀಯರು ಇಡಿ ಸಮಾಜಕ್ಕೆ ಸಂಬAಧಿಸಿದವರು ಆಗಿದ್ದಾರೆ ಎನ್ನುವದನ್ನು ಅರಿತುಕೊಳ್ಳಬೇಕು ಎಂದರು.
ಸಭೆಯಲ್ಲಿ ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷ ಭೀಮಣ್ಣ ಯಂಗಾಡಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಪಿಎಸ್ಐ ಆನಂದ ಕೆ, ಉಪನೋಂದಣಾಧಿಕಾರಿ ಎಸ್.ಕೆ.ಜಲರಡ್ಡಿ, ಆರೋಗ್ಯ ಇಲಾಖೆ ಬಿ.ಎಸ್.ಹಿರೇಮಠ, ಅಗ್ನಿಶಾಮಕದಳದ ವಿನಯ ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಸ್.ಸAಕನೂರ, ಕಂದಾಯ ಇಲಾಖೆಯ ರೇಣುಕಾ ಶಿರಹಟ್ಟಿ, ಬಸವರಾಜ ಹಡಪದ, ಮಂಜುನಾಥ ಮುದಗಲ್,, ರಾಜು ಓಲೇಕಾರ, ಕೆ.ಓ.ಹೂಲಿಕಟ್ಟಿ, ಪ್ರಕಾಶ ಬೆಂತೂರ, ಅನಿಲ, ಬಿ.ಎನ್.ರಾಟಿ, ಬಸವರಾಜ ದೊಡ್ಡಮನಿ, ಎ.ವಿ.ತಿಮ್ಮಾಪೂರ, ನಿಂಗಪ್ಪ ಜಂತ್ಲಿ, ಗಂಗಪ್ಪ ಕಲ್ಲಣ್ಣವರ, ಬಸವರಾಜ ಬನ್ನಿಮಟ್ಟಿ, ಬಸವರಾಜ ತಳವಾರ, ಚನ್ನಪ್ಪ ಬೆಟಸೂರ, ಬಸವರಾಜ ಗಳಗನಾಥ, ರಮೇಶ ಶಿವಳ್ಳಿ, ಬಸವರಾಜ ಮಲ್ಲೂರ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮಾಜ ಬಾಂಧವರು ಪಾಲ್ಗೊಂಡಿದ್ದರು.





















