Home ಜಿಲ್ಲೆ ಕಲಬುರಗಿ ಮರೆಪ್ಪ ಬೇಗಾರ್‍ಗೆ ಮಾಧ್ಯಮರತ್ನ ಪ್ರಶಸ್ತಿ

ಮರೆಪ್ಪ ಬೇಗಾರ್‍ಗೆ ಮಾಧ್ಯಮರತ್ನ ಪ್ರಶಸ್ತಿ

ಜೇವರಗಿ,ಮೇ 6: ಪಟ್ಟಣದ ಮಹಾಲಕ್ಷ್ಮೀ ಮಹಿಳಾ ಕಾಲೇಜಿನಲ್ಲಿ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಸಂಜೆವಾಣಿ ಪತ್ರಕರ್ತ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕ ಅಧ್ಯಕ್ಷ ಮರೆಪ್ಪ ಬೇಗಾರ್ ಗೆ ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಕಾಪುರ ತಪೆÇೀವನದ ಸಿದ್ದರಾಮ ಶಿವಾಚಾರ್ಯರ ಸಾನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಧರ್ಮಣ್ಣ ಕೆ. ಬಡಿಗೇರ್, ಜೆಡಿಎಸ್ ಮುಖಂಡ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ್ ಪಾಟೀಲ್ ನರಬೋ¼,À ಪುರಸಭೆ ಮಾಜಿ ಅಧ್ಯಕ್ಷಪ್ಪ ಷಣ್ಮುಖಪ್ಪ ಸಾಹು ಗೋಗಿ, ಕಾಂಗ್ರೆಸ್ ಹಿರಿಯ ಮುಖಂಡರಾದ ರಾಜಶೇಖರ್ ಸೀರಿ , ಸಂಗಮೇಶ ಸಂಕಾಲಿ ಉಪಸ್ಥಿತರಿದ್ದರು.