ಮಸಾಜ್ ಸ್ಪಾಗಳಿಗೆ ಬೀಗ: ಸ್ವಾಗತಾರ್ಹ

ಕಲಬುರಗಿ,ಫೆ.7-ಕಲಬುರಗಿ ಮಹಾನಗರ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ಇಂಥಹ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಪೆÇಲೀಸ್ ಇಲಾಖೆ ನಗರದಲ್ಲಿರುವಂತಹ ಎಲ್ಲಾ ಮಸಾಜ ಸ್ಪಾಗಳಿಗೆ ಕೀಲಿ ಹಾಕಿಸುವ ಮೂಲಕ ಪೆÇೀಲಿಸ್ ಇಲಾಖೆ ಜಾಗೃತವಾಗಿದೆ ಎಂಬುದನ್ನು ತೋರಿಸಿಕೋಟ್ಟಿದೆ. ಪ್ರತಿಯೊಂದು ಮಸಾಜ ಸ್ಪಾ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆ ನಡೆಯದೆ ಇರಬಹುದು ಬಹಳಷ್ಟು ಸ್ಪಾಗಳಲ್ಲಿ ನಡೆಯುತ್ತಿರುವುದು ಗಮನಕ್ಕೆ ಬಂದ ನಂತರ ಕ್ರಮ ಕೈಗೊಂಡಿರುವ ಪೆÇೀಲಿಸ್ ಇಲಾಖೆಗೆ, ವಿಶೆಷವಾಗಿ ಆಯುಕ್ತರಿಗೂ, ಪೆÇಲೀಸ್ ತಂಡಕ್ಕೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ, ಮಾಲಾ ದಣ್ಣೂರ್, ಹಿಂದೂ ಜಾಗೃತ ಸೇನೆ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಅಧ್ಯಕ್ಷೆ ಸುಮಾ ಕವಲ್ದಾರ ಅಭಿನಂದನೆ ಸಲ್ಲಿಸಿದ್ದಾರೆ. ಅದೇ ರೀತಿ ಇಸ್ಪಿಟ್, ಮಟಗಾ, ವೇಶ್ಯಾವಾಟಿಕೆ ಅಡ್ಡೆಗಳಾದ ಕೆಲವು ಲಾಡ್ಜ, ಕ್ರಮ ಮರಳು ಸಾಗಾಣಿಕೆ ಮೇಲೆ ಪೆÇಲೀಸರು ನಿರ್ಧಾಕ್ಷಿಣ್ಯ ಕ್ರಮ ಕೈಗೋಳ್ಳಬೆಕು ಇದರಿಂದ ಎಷ್ಟೋ ಕುಟುಂಬ ಬೀದಿಪಾಲು ಆಗದಂತೆ ತಡೆಯಬಹುದು ಇದರಿಂದ ಜೆಲ್ಲೆಯ ಜನ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.À ಪೆÇಲೀಸರ ಮೇಲೆ ಮತ್ತಷ್ಟು ಗೌರವ, ಅಭಿಮಾನ ಮೂಡತ್ತದೆ ಎಂದು ತಿಳಿಸಿದ್ದಾರೆ.