Home ಜಿಲ್ಲೆ ಕಲಬುರಗಿ ನವ ಕಲ್ಯಾಣ ಕರ್ನಾಟಕ ನಿರ್ಮಾಣಕ್ಕೆ ನೂತನ ಡಿ.ಕೆ.ಸರಕಾರ ಬದ್ಧತೆ ಪ್ರದರ್ಶಿಸಲಿ

ನವ ಕಲ್ಯಾಣ ಕರ್ನಾಟಕ ನಿರ್ಮಾಣಕ್ಕೆ ನೂತನ ಡಿ.ಕೆ.ಸರಕಾರ ಬದ್ಧತೆ ಪ್ರದರ್ಶಿಸಲಿ

ಕಲಬುರಗಿ,ಜೂ.7-ರಾಜ್ಯದಲ್ಲಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರಕಾರ ಹಿಂದುಳಿದ 371ನೇ (ಜೆ) ಕಲಂ ವಿಶೇಷ ಸ್ಥಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕಾಲಮಿತಿಯಲ್ಲಿ ನೂತನ ಕಲ್ಯಾಣ ಕರ್ನಾಟಕ ನಿರ್ಮಾಣ ಮಾಡಲು ನೀಲಿ ನಕ್ಷೆಯನ್ನು ನಿರ್ಮಿಸಿ ವೈಜ್ಞಾನಿಯ ಕ್ರೀಯಾ ಯೋಜನೆಯ ಆಧಾರದ ಮೇಲೆ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ, ಪ್ರವಾಸೋಧ್ಯಮ, ಕ್ರೀಡೆ ಸೇರಿದಂತೆ ಸಮಗ್ರ ಕ್ಷೇತ್ರಗಳ ಅಭಿವೃದ್ಧಿಗೆ ಕಾಲಮಿತಿಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕಲ್ಯಾಣದ ನೂತನ ಸಚಿವರಾದ ಪ್ರಿಯಾಂಕ ಖರ್ಗೆ, ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲರವರು ಗಂಭೀರವಾಗಿ ಪರಿಗಣಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಕೋರ್ ಕಮಿಟಿಯ ಮುಖಾಂತರ ಒತ್ತಾಯಿಸಲಾಯಿತು.
ಭಾನುವಾರ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾ ಮನೆಯಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಭೆಯು ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ಜರುಗಿತು. ಸಭೆಗೆ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಕಲ್ಯಾಣದ 371ನೇ(ಜೆ) ಕಲಂ ಜಾರಿಯಾದ ನಂತರ ಸಾಧನೆಗಳ ಮತ್ತು ಆಶಯಗಳ ವಿವರಣೆ ನೀಡಿದರು. ಅದರಂತೆ ಕೆ.ಕೆ.ಆರ್.ಡಿ.ಬಿ.ಯ ಅಸ್ಪಷ್ಟ ಧೋರಣೆ, ಅದೇ ರೀತಿಯಾಗಿ ರಾಜ್ಯ ಸರಕಾರ ಈಗಾಗಲೆ ಘೋಷಣೆ ಮಾಡಿರುವ ಪ್ರತ್ಯೇಕ ಸಚಿವಾಲಯದ ವಿಳಂಬ ನೀತಿಯ ಬಗ್ಗೆ ಪ್ರಸ್ತಾಪಿಸಿದರು. ಪೆÇ್ರ.ಆರ್.ಕೆ. ಹುಡುಗಿಯವರು ಮಾತನಾಡಿ ಕಲ್ಯಾಣದ ಅಭಿವೃದ್ಧಿಯ ಬಗ್ಗೆ ಸಚಿವರಾದ ಪ್ರಿಯಾಂಕ ಖರ್ಗೆಯವ ರೊಂದಿಗೆ ಸಮಾಲೋಚನೆ ನಡೆಸಿ ಪ್ರಸ್ತಾವನೆ ನೀಡುವ ಬಗ್ಗೆ ಮಾಟನಾಡಿದರು. ಪೆÇ್ರ. ಬಸವರಾಜ ಕುಮನೂರವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉದ್ದೇಶ ದಾರಿ ತಪ್ಪುತ್ತಿದೆ, ಈ ಬಗ್ಗೆ ಆದಷ್ಟು ಶೀಘ್ರ, ಮಂಡಳಿಯ ಕಾರ್ಯದರ್ಶಿಗಳು, ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಾಬೇಕೆಂದು ಆಗ್ರಹಿಸಿದರು. ಸಭಗೆ ಸನಾಉಲ್ಲಾ, ಕೈಲಾಸನಾಥ ದೀಕ್ಷಿತ್, ಲಿಂಗರಾಜ ಸಿರಗಾಪೂರ, ಸಂಧ್ಯಾರಾಜ ಮಾತನ್ನಾಡಿ ಸಲೆಹೆಗಳು ನೀಡಿದರು.
ಸಭೆಯಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯದಂತೆ ‘ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಅಭ್ಯರ್ಥಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಅದರಂತೆ, ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ, ಎಲ್ಲಾ ವಿಶ್ವವಿದ್ಯಾಲಯದ ಗುಣಮಟ್ಟ ಹೆಚ್ಚಿಸಲು ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು, ಕಲ್ಯಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಅಭಿವೃದ್ಧಿಗೆ 5 ಇಲ್ಲವೆ 10 ವರ್ಷದ ವೈಜ್ಞಾನಿಕ ಕ್ರೀಯಾ ಯೋಜನೆ ರಚಿಸಿ ಈ ಯೋಜನೆಯಂತೆಯೆ ರುಟಿನ್ ಬಜೆಟ್‍ನ ಯೋಜನೆಗಳು ಮತ್ತು ಕೆ.ಕೆ.ಆರ್.ಡಿ.ಬಿ. ಯೋಜನೆಗಳು ಅನುಷ್ಠಾನಕ್ಕೆ ತಂದು ಕಾಲಮಿತಿಯಲ್ಲಿ ಕಲ್ಯಾಣದ ಅಭಿವೃದ್ಧಿಗೆ ದಿಟ್ಟತನ ಕೈಗೊಳ್ಳಬೇಕು, ಕಲ್ಯಾಣ ಕರ್ನಾಟಕದಲ್ಲಿ ಈಗಾಗಲೆ ಆರಂಭಿಸಿರುವ ನೀರಾವರಿ ಯೋಜನೆಗಳು ಪೂರ್ಣಗೊಳಿ ಸುವವರೆಗೆ ಬೇರೆ ಯೋಜನೆಗಳು ಕೈಗೆತ್ತಿಕೊಳ್ಳಬಾರದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲ್ಯಾಣ ಪಥದ ರಸ್ತೆ ನಿರ್ಮಾಣ ಮತ್ತು ಬೀದರದಿಂದ ಬಳ್ಳಾರಿಯವರೆಗೆ ಚತುಸ್ಪಥ ರಸ್ತೆ ನಿರ್ಮಿಸಿ, ಕೈಗಾರಿಕೆ, ವಾಣಿಜ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ತಕ್ಷಣ ಕಾಲಮಿತಿಯ ಕ್ರಮ ಕೈಗೊಳ್ಳಬೇಕು, ಗೋವಿಂದರಾವ ಕಮಿಟಿಯಲ್ಲಿ ತಿಳಿಸಿರುವಂತೆ ಬಸವಕಲ್ಯಾಣದಿಂದ ಬಾಗೇವಾಡಿಯವರೆಗೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ನಮ್ಮ ಶ್ರೀಮಂತ ಇತಿಹಾಸದ ಪರಿಚಯ ಮಾಡಿಸುವುದರ ಜೊತೆಗೆ ಲೆಕ್ಕವಿಲ್ಲದಷ್ಟು ಉದ್ಯೋಗಗಳು ಸೃಷ್ಟಿಗೆ ಅನುಕೂಲವಾಗುವುದು ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು, ನೂತನ ಸರಕಾರದಲ್ಲಿ ಮೂರು ಪ್ರಭಾವಿ ಖಾತೆಗಳೊಂದಿಗೆ ಸಚಿವರಾಗಿದ್ದಾರೆ. ಇನ್ನೂ ಕನಿಷ್ಠ ಐದು ಜನ ಸಚಿವ ಸ್ಥಾನಗಳು ಕಲ್ಯಾಣ ಕರ್ನಾಟಕಕ್ಕೆ ಕೊಡಬೇಕು, ಕೃಷ್ಣಾ ಯೋಜನೆ ಕೇಂದ್ರ ಸರಕಾರದ ಸುಪರ್ಧಿಗೆ ವಹಿಸಿ ಕಾಲಮಿತಿಯಲ್ಲಿ ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರದ ಮೇಲೆ ಬಲವಾದ ಒತ್ತಡ ತರಬೇಕು, ಕಲಬುರಗಿಯಲ್ಲಿ ಕನಿಷ್ಠ ಐದು ಮೇಲ್ಸೇತುವೆ ರಸ್ತೆಗಳ ನಿರ್ಮಾಣ ಮತ್ತು ಹದಗೆಟ್ಟ ರಸ್ತೆಗಳಿಗೆ ತಕ್ಷಣ ಹೊಸ ರಸ್ತೆಗಳ ನಿರ್ಮಾಣ ಮಾಡಿ ಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ಮಾಡಬೇಕು, ಏಮ್ಸ್ ಹೋರಾಟಕ್ಕೆ ಸ್ಪಂದಿಸಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು. ಅದರಂತೆ, ಬೀದರ ಜಿಲ್ಲೆಯ ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಹಣ ಕಾಲಮಿತಿಯಲ್ಲಿ ನೀಡಬೇಕು ಎಂದು ಒತ್ತಾಯಿಸಲಾಯಿತು.
ಸಮಿತಿ ಸುಮಾರು ದಿನಗಳ ಹಿಂದೆ ನಿರ್ಣಯ ಕೈಗೊಂಡಿರುವಂತೆ ವಿಭಾಗೀಯ ಕೆಂದ್ರ, ಕಲಬುರಗಿ ಸೇರಿದಂತೆ, ಏಳು ಜಿಲ್ಲೆಗಳಲ್ಲಿ 371ನೇ(ಜೆ) ಕಲಂ ಜಾಗೃತಿ ಅಭಿಯಾನ ನಿಮಿತ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುವ ಯೋಜನೆಗೆ ಅನುಷ್ಠಾನಕ್ಕೆ ಜೂ.13 ರಂದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರಮುಖರ ಸಭೆಯನ್ನು ನಿಯೋಜಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೌಫ ಖಾದ್ರಿ,ಪೆÇ್ರ.ಮಂಜೂರ ಡೆಕ್ಕನಿ, ರಿಜ್ವಾನ್ ಸಿದ್ಧಿಕಿ,ರಾಜು ಜೈನ್, ಕಲ್ಯಾಣರಾವ.ಟಿ., ಭೀಮಶೆಟ್ಟಿ ಮುಕ್ಕಾ, ಮುತ್ತಣ್ಣ ನಡಗೇರಿ, ಮುಕ್ತಾರ ,ಎಂ.ಬಿನಿಂಗಪ್ಪ, ಬಾಬುರಾವ ಗಂವ್ಹಾರ, ಅಸ್ಲಂ ಚೌಂಗೆ, ಬಾಬಾ ಫಕ್ರೂದ್ದೀನ, ಶೈಲೆಂದ್ರ ಬಿರಾದಾರ, ವಿನಯಕುಮಾರ ಶಾಸ್ತ್ರಿ ದೇವೆಂದ್ರಕುಮಾರ.ಕೆ., ವಿಜಯಕುಮಾರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.