
ಕಲಬುರಗಿ,ಜು.13: ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ ಸಭೆ ಉದ್ಘಾಟಿಸಿ, ರಾಷ್ಟ್ರದ ಅಭಿವೃದ್ಧಿ ಮತ್ತು ಮಕ್ಕಳ ಸವಾರ್ಂಗೀಣ ವಿಕಾಸವಾಗಬೇಕಾದರೆ,ಶಿಕ್ಷಣದಲ್ಲಿ ಭಾರತೀಯತೆ ತರುವುದರಿಂದ ಮಾತ್ರ ಸಾಧ್ಯವೆಂದು ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಪೆÇ್ರ. ಬಸವರಾಜ ಡೊಣೂರು ಹೇಳಿದರು.
ಶಿಕ್ಷಣದಲ್ಲಿ ಭಾರತೀಯ ಸಂಸ್ಕøತಿ ಮತ್ತು ಪರಂಪರೆಯ ಅಸ್ಮಿತೆಯಿರಲಿ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯ, ನಡೆನುಡಿಯಲ್ಲಿ ತನ್ನ ದೇಶದ ಜೀವನ ವಿಧಾನವನ್ನು ಅಳವಡಿಸಿಕೊಳ್ಳಬೇಕು, ದೇಶದ ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯಬೇಕು.ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಮಕ್ಕಳ ಸವಾರ್ಂಗೀಣ ವಿಕಾಸಕ್ಕಾಗಿ ಪಾಲಕರು, ಶಿಕ್ಷಕರು ಮತ್ತು ಸಂಸ್ಥಾಚಾಲಕರು,ಸಾಮಾಜಿಕ ಸಂಘಟನೆಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಈ ಸಭೆಯ ಅಧ್ಯಕ್ಷತೆ ವಹಿಸಿದ ಭಾರತೀಯ ಶಿಕ್ಷಣ ಮಂಡಲದ ಜಿಲ್ಲಾಧ್ಯಕ್ಷರಾದ ಬಸವರಾಜ ದೇಶಮುಖ ಅವರು ಮಾತನಾಡಿಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಕೈಜೊಡಿಸೋಣ. ಹಾಗೂ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿವಿದ್ಯಾರ್ಥಿಗಳಲ್ಲಿ ಇರುವ ಪರೀಕ್ಷಾ ಭಯ ಹೋಗಲಾಡಿಸಲು ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಗಳಲ್ಲಿ ಆತ್ಮಸ್ಥೈರ್ಯ ತುಂಬುವಕಾರ್ಯಕ್ರಮ ಮತ್ತು ಕಾರ್ಯಗಾರಗಳನ್ನು ಆಯೋಜಿಸೋಣವೆಂದರು.
ಒತ್ತಡಮುಕ್ತ ಶೈಕ್ಷಣಿಕ ವಾತಾವಾರಣದಿಂದ ಮಾತ್ರ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯ. ತಾಯಿ ಗರ್ಭದಿಂದಲೇ ಮಕ್ಕಳ ಶಿಕ್ಷಣಆರಂಭವಾಗುವುದು. ಹೀಗಾಗಿ ಶಿಕ್ಷಣ ಮತ್ತು ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ದೊಡ್ಡದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಶಿಕ್ಷಣ ಮಂಡಲದ ಪ್ರಾಂತ ಸಹ ಕಾರ್ಯದರ್ಶಿ, ಡಾ. ಪಲ್ಲವಿ ಪಾಟೀಲ ಸೇಡಂ ಅವರು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಮೂಲ್ಯ ವಾದದ್ದು, ಶಿಕ್ಷಕ ವಿಷಯ ಶಿಕ್ಷಕನಾಗದೆ, ಗುರುವಾಗುವಡೆಗೆಸಾಗಬೇಕು ಎಂದರು ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಖಜೂರಿ ಎಂದುಕಳವಳ ವ್ಯಕ್ತಪಡಿಸಿದರು. ಶಿಕ್ಷಣದಲ್ಲಿ ಭಾರತೀಯ ತರುವುದೆಂದರೆ, ಸ್ಥಳೀಯ ಕಲೆ, ಸಂಗೀತ,ಸಾಹಿತ್ಯ ಜಾನಪದ, ಭಾರತೀಯಯೋಗಮಯ ಜೀವನ ಶೈಲಿ ಪ್ರತಿಯೊಂದರಲ್ಲು ಭಾರತೀಯತೆ ಎದ್ದು ಕಾಣಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಅನುಸಂಧಾನ ಗತಿವಿಧಿ ಪ್ರಾಂತ ಪ್ರಮುಖರಾದ ಪೆÇ್ರ.ರವೀಂದ್ರ ಹೆಡಗಿ , ಜಿಲ್ಲಾ ಉಪಾಧ್ಯಕ್ಷೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ಜಿಲ್ಲಾ ಉಪಾಧ್ಯಕ್ಷ ಡಾ. ಉದಯ ಪಾಟೀಲ, ಡಾ. ಮಹೇಶತನವಾಡೆ, ಡಾ. ಬಾಲಾಜಿ ಬಿರಾದಾರ, ನಿಶಾ ಜೋಶಿ, ಸಂಗಣ್ಣ ಕೆ. ,ಡಾ. ನಾಗಬಸವಣ್ಣ ಗುರಾಗೋಳ ,ಪೆÇ್ರ. ಭಾರತಿ ಹರಸೂರ್,ಪೆÇ್ರ. ಸುವರ್ಣಾ ನಂದ್ಯಾಳ, ಡಾ. ಜಗದೀಶ್ ಬಿರಾದಾರ, ಶಶಿಕಲಾ ಬಿ. ಎಸ್.. ಮಳಯ್ಯ ಹಿರೇಮಠ, ಡಾ. ವಿಜಯಕುಮಾರಉಪಸ್ಥಿತರಿದ್ದರು.
ಪ್ರಾಂತ ವಿದ್ಯಾಲಯ ಗತಿವಿಧಿ ಪ್ರಮುಖ ಶರಣು ಉದನೂರ ನಿರೂಪಿಸಿದರು. ಡಾ. ಶರಭಯ್ಯ ಸ್ವಾಮಿ ಪರಿಚಯಸಿ ಸ್ವಾಗತಿಸಿದರು.ಡಾ. ಉದಯ ಪಾಟೀಲ ವಂದಿಸಿದರು.




























