
ವಿಜಯಪುರ, ಮಾ. 18:ಸಂವಹನ ಮತ್ತು ಸಂಪರ್ಕದ ಸೇತುವೆಯೇ ಭಾಷೆ. ಒಬ್ಬರಿಗೊಬ್ಬರು ವಿಚಾರ ಅಭಿಪ್ರಾಯ, ಭಾವನೆಗಳನ್ನು ಹಂಚಿಕೊಳ್ಳಲು ಬಳಸುವ ಸೂಕ್ತವಾದ ಸಾಧನೆ. ಭಾಷೆ ಬಲ್ಲವನು ಜಗತ್ತಿನೆಲ್ಲಡೆ ಉತ್ತಮವಾಗಿ ಬದುಕಬಲ್ಲನು. ಭಾಷಾ ಕೌಶಲ್ಯಗಳು ಮಾನವನ ಸವಾರ್ಂಗೀಣ ಅಭಿವೃದ್ಧಿಗೆ ಪೂರಕ ಎಂದು ಸಾಹಿತಿ ಪೆÇ್ರ. ಎ.ಎಚ್. ಕೊಳಮಲಿ ಅಭಿಪ್ರಾಯಪಟ್ಟರು.
ಬುಧವಾರ ವಿಜಯಪುರ ನಗರದ ಹೊರ ವಲಯದ ಅಲಿ ಯಾಬಾದ ರಸ್ತೆಯಲ್ಲಿರುವ ಎಸ್ ಎಂ ಆರ್ ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಭಾಷಾ ಕೌಶಲ್ಯಗಳ ಮಹತ್ವ ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಸಾಹಿತ್ಯ ರಚನೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಮತ್ತು ಸಾಹಿತಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಶಿಕ್ಷಕರು ಹೆಚ್ಚೆಚ್ಚು ಸಾಹಿತ್ಯದ ಭಂಡಾರವನ್ನು ಓದಿ ಮೌಲ್ಯಯುತ ವಿವಿಧ ಕೃತಿ ರಚಿಸಿದಾಗ ಸಮಾಜ ಪರಿವರ್ತನೆ ಸಾಧ್ಯ. ಶಿಕ್ಷಕರಿಗೆ ಸಾಹಿತ್ಯ ದೇವಿಯ ಕೃಪಾ ಆಶೀರ್ವಾದವಿದೆ. ಶಿಕ್ಷಕರಿಂದಲೆ ಮೌಲ್ಯಾಧಾರಿತ ಕೃತಿ ರಚನೆ ಸಾಧ್ಯ ಎಂದು ಅವರು ಸಾಹಿತ್ಯದ ಮಹತ್ವ ಕುರಿತು ಹೇಳಿದರು.
ಹಿರಿಯ ಪ್ರಾಧ್ಯಾಪಕ ಪೆÇ್ರ. ಧೂಮಗೊಂಡ ಮಾತನಾಡಿ, ಸಾಹಿತ್ಯ ಸಾವಿಲ್ಲದ ಸಂಪತ್ತು. ಅಂತಹ ಸಂಪತ್ತನ್ನು ಗಳಿಸುವ ವ್ಯಕ್ತಿಗಳು ನೀವು ಆಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪೆÇ್ರ. ಹೂಗಾರ ಮಾತನಾಡಿ, ಪಠ್ಯದ ಜೊತೆಗೆ ವಿಶೇಷ ಚಟುವಟಿಕೆಗಳ ಕಾರ್ಯಕ್ರಮವು ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ನಡೆಯುತ್ತವೆ. ಇದರಿಂದ ಸಮರ್ಥ ಶಿಕ್ಷಕರಾಗಲು ಸಾಧ್ಯ ಎಂದು ಹೇಳಿದರು.
20 ಅಧಿಕ ಬಿ ,ಎಡ್ ಪ್ರಶಿಕ್ಷಣಾರ್ಥಿಗಳು ಕವನವನ್ನು ವಾಚಿಸಿದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಹಿತ್ಯ ರಚನೆಯ ಶಿಬಿರದಲ್ಲಿ ಭಾಗಿಯಾಗಿದ್ದರು.
ಕಾಲೇಜಿನ ಸಿಬ್ಬಂದಿ ವರ್ಗದವರಾದ ಪೆÇ್ರ, ಅವಟಿ, ಪೆÇ್ರ ಹತ್ತಳ್ಳಿ ಉಪಸ್ಥಿತರಿದ್ದರು.

























