Home ಜಿಲ್ಲೆ ಕಿತ್ತೂರು ಚನ್ನಮ್ಮ ಜಯಂತ್ಯೋತ್ಸವ

ಕಿತ್ತೂರು ಚನ್ನಮ್ಮ ಜಯಂತ್ಯೋತ್ಸವ

ಲಕ್ಷ್ಮೇಶ್ವರ,ಅ ೨೪: ಪಟ್ಟಣದಲ್ಲಿನ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಸ್ವತಂತ್ರ ಭಾರತದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮನವರ ೨೪೮ನೇ ಜಯಂತ್ಯುತ್ಸವ ಹಾಗೂ ೨೦೨ನೇ ವಿಜಯೋತ್ಸವವನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷ್ಮೇಶ್ವರ ತಾಲೂಕು ಘಟಕದ ವತಿಯಿಂದ ಶುಕ್ರವಾರ ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನವರ ಮೂರ್ತಿಗೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಿಎಸ್‌ಐ ಆನಂದ ಕೆ. ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಂತಹ ಅನೇಕ ಸ್ವಾತಂತ್ರö್ಯ ಹೋರಾಟಗಾರರ ದೇಶಾಭಿಮಾನ, ಹೋರಾಟ, ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಚನ್ನಮ್ಮನಂತಹ ದೇಶಭಕ್ತೆಯರ ಜಯಂತೋತ್ಸವ ಕೇವಲ ಆಚರಣೆಗೆ ಸೀಮಿತವಾಗಬಾರದು. ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ಯವಾದ ಸಮಯ ವ್ಯರ್ಥ ಮಾಡದೇ ಈ ನೆಲದ ಸ್ವಾತಂತ್ರಕ್ಕಾಗಿ ಸಮರ್ಪಿಸಿಕೊಂಡ ಮಹನೀಯರ ಬದುಕಿನ ಮೌಲ್ಯ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕುಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ವೀರರಾಣಿ ಕಿತ್ತೂರ ಚನ್ನಮ್ಮ ಕೇವಲ ಒಂದು ಜಾತಿ, ಸಮಾಜಕ್ಕೆ ಮೀಸಲಾಗಿರದೇ ಇಡೀ ರಾಷ್ಟçದ ಆಸ್ತಿಯಾಗಿದ್ದಾರೆ. ಇಡೀ ದೇಶವೆ ಅವರ ಶೌರ್ಯ ಪರಾಕ್ರಮಕ್ಕೆ ತಲೆಬಾಗಿದೆ ಅಂತಹ ವೀರ ಮಹಿಳೆಯ ಜಯಂತೋತ್ಸವ ಮತ್ತು ವಿಜಯೋತ್ಸವವನ್ನು ನವಂಬರ ೨೨ರಂದು ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತ, ಜ್ಯಾತ್ಯಾತೀತವಾಗಿ ಪಾಲ್ಗೊಳ್ಳಬೇಕೆಂದು ಕೋರಿದರು.


ಯುವ ಮುಖಂಡ ಬಸವರಾಜ ಅರಳಿ ವೀರರಾಣಿ ಕಿತ್ತೂರ ಚನ್ನಮ್ಮಾಜಿ ಹೋರಾಟ ಬದುಕನ್ನು ವಿವರಿಸಿದರು. ಈ ವೇಳೆ ನಾಗರಾಜ ಚಿಂಚಲಿ, ಗುರಪ್ಪ ಮುಳಗುಂದ, ಶಂಕ್ರಣ್ಣ ಬ್ಯಾಡಗಿ, ಕಾಶಪ್ಪ ಮುಳಗುಂದ, ಬಸಣ್ಣ ಬಾಳಿಕಾಯಿ, ನಾಗಪ್ಪ ಉಮಚಗಿ, ಭೀಮಪ್ಪ ಉಪ್ಪಾರ, ವಿ.ಎಸ್ ಹಿರೇಮಠ, ಭರಮಣ್ಣ ಗುಡಗೇರಿ, ಸೋಮನಗೌಡ ಪಾಟೀಲ, ಫಕ್ಕೀರೇಶ ಕವಲೂರ, ಮಂಜುನಾಥ ಗೌರಿ, ಚಂದ್ರು ಮಾಗಡಿ, ಜಗದೀಶಯ್ಯ ಪುರಾಣಿಕಮಠ, ರವಿಸ್ವಾಮಿ ಅಖಳಂಡಸ್ವಾಮಿಮಠ, ನಾರಾಯಣ ಪವಾರ, ಬಸವರಾಜ ಹಿರೇಮನಿ, ಜುಂಜನಗೌಡ ನರಸಮ್ಮನವರ, ಶಿವಾನಂದ ಬನ್ನಿಮಟ್ಟಿ, ಬಸಣ್ಣ ಪ್ಯಾಟಿ, ಬಸವರಾಜ ಜಾಲಗಾರ, ನಾಗಪ್ಪ ಓಂಕಾರಿ, ಸುರೇಶ ಹಟ್ಟಿ, ಭರಮಣ್ಣ ಶರಸೂರಿ, ಮಂಜುನಾಥ ಮುಳಗುಂದ, ಮೈಲಾರಿ ಹೆಗ್ಗಣ್ಣವರ, ಶಬ್ಬೀರಅಲಿ ಶೇಖ, ಮುತ್ತು ನೀರಲಗಿ, ರಾಜು ಲಿಂಬಿಕಾಯಿ, ಮಲ್ಲಿಕಾರ್ಜುನ ನೀರಲೋಟಿ, ಮಾಂತೇಶ ಉಮಚಗಿ, ಪವನ ಬಂಕಾಪುರ, ಗಿರಿಜವ್ವ ಕರೆಯತ್ತಿನ, ಅರುಣಾ ಮಣ್ಣಪ್ಪನವರ, ರೇಣುಕಾ ಸಂಶಿ ಅನೇಕರಿದ್ದರು.