
ಲಕ್ಷೆö್ಮÃಶ್ವರ, ಅ೨೫: ಇಲ್ಲಿಗೆ ಹೂವಿನಶಿಗ್ಲಿ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಸ್ಥಳೀಯ ಶ್ರೀ ವೀರಕ್ತಮಠ ದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಳ ೨೪೮ನೇ ಜಯಂತಿ ಹಾಗೂ ೨೦೨ನೇಯ ವಿಜಯೋತ್ಸವಕಾರ್ಯಕ್ರಮ ಜರುಗಿತು.
ಮಠದಾಧ್ಯಕ್ಷ ರಾದ ಚನ್ನವೀರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಕಿತ್ತೂರು ಚನ್ನಮ್ಮ ಳ ಧೈರ್ಯ ಸ್ಥೆöÊರ್ಯ ಮೆಚ್ಚುವಂತಹದು ಅವಳು ಹೆಣ್ಣಾದರೂ ಗಂಡೆದೆಯುಳ್ಳ ದಿಟ್ಟೆ ಅವಳದೇಶಪ್ರೇಮ ಶಕ್ತಿ ಕೀರ್ತಿ ಗಳು ಎಂದೆAದಿಗೂ ಅಜರಾಮರ ಸರ್ವಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಇಂತಹ ಕಾರ್ಯ ಸೂಕ್ತ ಎಂದುತಮ್ಮ ಆಶೀರ್ವಚನದಲ್ಲಿ ನುಡಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಮಾಜಿಸಂಸದ ಮಂಜುನಾಥಕುನ್ನೂರ್ ಅವರು ಪಂಚಮಸಾಲಿಸಮಾಜದ ಶೈಕ್ಸಣಿಕ ಅನುಕೂಲ ಹಾಗೂ ಮಕ್ಕಳ ಅಭಿವೃದ್ಧಿ ಬಗ್ಗೆ ಸಮಾಜದ ಅಭಿವೃದ್ಧಿ ಕಡೆಗಮನ ಕೊಡಬೇಕು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ನಿಂಗನಗೌಡ ಹೊಸಮನಿ, ಯಲವಿಗಿ ರಾಜೇಶ್ವರಿ ಬುಶೆಟ್ಟಿ, ಸವಣೂರ ಪಂಚಮಸಾಲಿ ಅಧ್ಯಕ್ಷರಾದ ಬಿ. ಎಂ. ಪಾಟೀಲ್ ಹಾಗೂ ಸೋಮಣ್ಣ ಡಾನಗಲ್, ಪರಮೇಶ್ವರ್ ಸಂಕಪ್ಪನವರ, ಚಂದ್ರಣಾ ಗುದಗಿ ಹಾಗೂ ಗಂಗಪ್ಪ ಬಿದರಿ, ವೀರಣ್ಣ ಶಿಗ್ಲಿ, ಮಲ್ಲನಗೌಡ ನಡುವಿನಮನಿ ಭಾಗವಹಿಸಿದ್ದರು.
ಗ್ರಾಮದ ಎಲ್ಲ ಸಮುದಾಯದ ಹಿರಿಯರನ್ನು ಸತ್ಕಾರ ಮಾಡಲಾಯಿತು. ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕಾರ ಮಾಡಲಾಯಿತು. ಸಂಗೀತಗಾರರದ ಅನಿಲ್ ಮಠಪತಿ ಬಾಲಾಜಿ ಯವರನ್ನು ಸತ್ಕಾರ ಮಾಡಲಾಯಿತು. ಮಹದೇವ್ ಬಿಷ್ಟಣ್ಣವರ ಸ್ವಾಗತ, ಕೆ . ಎಸ್. ಇಟಗಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





















