ಕಾಳಗಿ:ಸದ್ಗುರುನಾಥರ ವೈಭವದ ಆರಾಧನ ಮಹೋತ್ಸವ

ಕಾಳಗಿ:ಮೇ.23:ಪಟ್ಟಣದ ಸಂತ ಶ್ರೀಸದ್ಗುರುನಾಥರ ಆರಾಧನ ಮಹೋತ್ಸವ ಗುರುವಾರ ಸಂಜೆ ವೈಭವದಿಂದ ನೆರವೇರಿತು.

ಬೆಳಿಗ್ಗೆ ಸದ್ಗುರುವಿನ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು.

ಸಂಜೆ 06-00ಗಂಟೆಗೆ ಅರ್ಚಕ ಶರಣಪ್ಪ ಆಚೇರಿ ಮನೆಯಿಂದ ದೇವಸ್ಥಾನದ ವರೆಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.

ಪಲ್ಲಕ್ಕಿ ದೇವಸ್ಥಾನ ಪಲುಪಿದ ನಂತರ ಸದ್ಗುರುನಾಥರ ಗದ್ದುಗೆಗೆ ಮಹಾಪೂಜೆಗೈದ ಬಳಿಕ ಸರ್ವ ಭಕ್ತಾದಿಗಳು, ಸದ್ಗುರುವಿನ ಸವಿಯಾದ ಮಾಲ್ದಿ ಸವಿರುಚಿ ಮಹಾಪ್ರಸಾದ ಸವಿದರು.

ನಂತರದಲ್ಲಿ ವಿವಿಧ ಗ್ರಾಮದ ಭಜನಾ ಮಂಡಳಿಗಳಿಂದ ಬೆಳಗಿನ ಜಾವದವರೆಗೆ ಭಜನೆ ನಡೆಯಿತು.

ಅರ್ಚಕ ಶರಣಪ್ಪ ಆಚಾರಿ, ಶಿವಾನಂದಸ್ವಾಮಿ ದೇವಾಂಗಮಠ, ಬಾಲಚಂದ್ರಕಾಂತಿ, ಗಣಪತರಾವ ಸಿಂಗಶೇಟ್ಟಿ, ರಾಮಣ್ಣ ಕಣ್ಣಿ, ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ ಅಷ್ಟಗಿ, ಶ್ರೀನೀವಾಸ ಗುರುಮಠಕಲ, ಗುರುರಾಜ ಆಚಾರಿ, ವೀರಣ್ಣ ಗೌಡ ತೆಂಗಳಿ, ವಿಜಯಕುಮಾರ ಅಲ್ಲಾಪೂರ, ಕೃಷ್ಣ ಸಿಂಗಶೇಟ್ಟಿ, ಗುರು ಚೀಲಾ, ವಿರೇಶ ಕಣ್ಣಿ, ಶರಣಪ್ಪ ಕಿಟ್ಟದ, ನಾಗಣ್ಣ ಕಮರಡ್ಡಿ, ರವಿ ಅಲ್ಲಾಪೂರ, ಗಣೇಶ ಸಿಂಗಶೇಟ್ಟಿ, ಚೇತನ ಕಣ್ಣಿ, ಮಹೇಶ ಗುಂಡಮಿ, ಸುಭಾಷ ಕಿಟ್ಟದ, ನಾಗಣ್ಣ ಕಣ್ಣಿ, ಕಾಳು ಜಿಲ್ಲಿ, ವಿಠ್ಠಲ ಗುಗುಮಠಕಲ, ಬಸವರಾಜ ಸಿಂಗಶೇಟ್ಟಿ, ಮಲ್ಲು ಗುರುಮಠಕಲ, ಸಂತೋಷ ಸಿಂಗಶೇಟ್ಟಿ, ಮಹಾದೇಶ ರೋಜದ, ವಸಂತ ಕಣ್ಣಿ, ಪಾಂಡುರಂಗ ಗುರುಮಠಕಲ, ವಿಠ್ಠಲ ಕಲ್ಗುಂಡಿ, ಚೌಡಪ್ಪ ಗುರುಮಠಕಲ, ಬಸವರಾಜ ಜುಂಜಿ, ರಾಜು ಜಿಲ್ಲಿ ಸೇರಿದಂತೆ ಅನೇಕರಿದ್ದರು.