
ಬೀದರ್ ಮೇ. 08ಃ ಕಲೆಯ ಉಳಿವು ಮತ್ತು ಬೆಳೆವಣಿಗೆಗಾಗಿ ಸರ್ಕಾರ, ಕಲಾವಿದರು ಹಾಗೂ ಸಂಘ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯವೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅಭಿಪ್ರಾಯಪಟ್ಟರು.
ಬುಧವಾರ ಮಧ್ಯಾನ ನಡೆದ ಸ್ನೇಹ ಕಲ್ಚರಲ್ ಮತ್ತು ಸೋಶಲ್ ಡೆವಲಮೆಂಟ ಸೊಸೈಟಿ ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಹಾಗೂ ಕವಿಗೊಷ್ಟಿ ಕಾರ್ಯಕ್ರಮವು 2025-26ನೇ ಸಾಲಿನ ಸಂಘ ಸಂಸ್ಥೆಗಳ ಧನಸಹಾಯ, ಸಾಮಾನ್ಯ ಯೋಜನೆಯಡಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭೆಗೆ ಪುರಸ್ಕಾರ ಹಾಗೂ ಪೆÇ್ರೀತ್ಸಾಹಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವು ಡಾ.ಪರಮ ಪೂಜ್ಯ ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಅವರು ಮಾತನಾಡಿ, ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಮೂಡಿಸುವುದು ಅತ್ಯಗತ್ಯ. ಸಮಾಜದ ಸಹಕಾರದೊಂದಿಗೆ ಸ್ಥಳೀಯ ಕಲಾವಿದರಿಗೆ ಬೆಂಬಲ ನೀಡಿದಾಗ ಮಾತ್ರ ನಮ್ಮ ಜಾನಪದ ಕಲೆಗಳು ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಮುಖರಾದ ಶ್ರೀಮಂತ ಸಪಾಟೆ ಅವರು ನಮ್ಮ ನಾಡಿನ ಸಂಸ್ಕೃತಿ ಮತ್ತು ಜಾನಪದ ಕಲೆಗಳು ನಮ್ಮ ಅಸ್ತಿತ್ವದ ಬೆನ್ನೆಲುಬಾಗಿವೆ. ಅವುಗಳಲ್ಲಿ ನಮ್ಮ ಪೂರ್ವಜರ ಜೀವನ ಶೈಲಿ, ನಂಬಿಕೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳು ಜೀವಂತವಾಗಿ ಅಡಗಿವೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ವೇಗವಾಗಿ ಬದಲಾಗುತ್ತಿರುವ ಜೀವನ ಶೈಲಿಯ ಪರಿಣಾಮವಾಗಿ ಈ ಅಮೂಲ್ಯ ಪರಂಪರೆ ನಿಧಾನವಾಗಿ ಮರೆಯಾಗುತ್ತಿರುವುದು ವಿμÁದನೀಯ ಸಂಗತಿಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ ಪಾಟೀಲ್, ಕನ್ನಡ ಶಿಕ್ಷಣ ಸಂಸ್ಥೆಗಳ ಸಮನ್ವಯ ಅಧಿಕಾರಿಯಾದ ಶರಣಪ್ಪಾ ಬಿರಾದಾರ, ಕರ್ನಾಟಕ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಸುನೀಲ್ ಭಾವಿಕಟ್ಟಿ, ಘೋಡಂಪಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ರವೀಂದ್ರ ಚಟ್ನಳ್ಳಿ, ಇತರರು ವೇದಿಕೆ ಮೇಲಿದ್ದರು.
ಪ್ರಾರಂಭದಲ್ಲಿ ಕಾರ್ಯಕ್ರಮವು ದೇವಿದಾಸ್ ಜೋಶಿ ನಿರೂಪಿಸಿದರು, ಶ್ರೀಮತಿ ಜ್ಯೋತಿ ಸಪಾಟೆ ವಂದಿಸಿದರು.
ಕೊನೆಯಲ್ಲಿ 2025-26ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭೆಗೆ ಪುರಸ್ಕಾರ ಹಾಗೂ ಪೆÇ್ರೀತ್ಸಾಹಿಸಿದ ಶಿಕ್ಷಕರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾತಂಡಗಳಲ್ಲಿ ರಮಾಬಾಯಿ ಅಂಬೇಡ್ಕರ್ ಮಹಿಳಾ ಭಜನಾ ನಾಗನಪಲ್ಲಿ ತಂಡದಿಂದ ಜಾನಪದ ಗೀತೆ, ತಾಳಮಡಗಿಯ ಮಹರ್ಷಿ ವಾಲ್ಮೀಕಿ ಮಹಿಳಾ ಭಜನಾ ಸಂಘದಿಂದ ವಚನ ಗಾಯನ, ಅಲ್ಲಾಪುರ ಜೈ ಭವಾನಿ ಮಹಿಳಾ ಭಜನೆ ತಂಡದಿಂದ ಭಕ್ತಿ ಗೀತೆ, ಕುಂಬರವಾಡಾ ರಮಾಬಾಯಿ ಅಂಬೇಡ್ಕರ್ ಮಹಿಳಾ ತಂಡದಿಂದ ಜಾನಪದ ಗಾಯನ, ಯಾದಲಾಪುರ ಅಕ್ಕಮಹಾದೇವಿ ಮಹಿಳಾ ಭಜನೆ ತಂಡದಿಂದ ಜಾನಪದ ಗಾಯನ, ಇನ್ನೂ ಮುಂತಾದ ತಂಡಗಳು ಭಾಗವಹಿಸಿ ತಮ್ಮ ಸುಮಧುರ ಕಂಠದಿಂದ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು.
ಅದೇ ಸಂದರ್ಭದಲ್ಲಿ ಕಲಾವಿದರು, ಮಹಿಳೆಯರು, ಮಕ್ಕಳು ನಾಗರಿಕರು ಅನೇಕರು ಉಪಸ್ಥಿತರಿದ್ದರು.






















