
ಕಲಬುರಗಿ,ಮಾ.18: ನಗರದ ಜೀವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದಿ ಅಸೋಸಿಯನ್ಸ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ ಹಾಗೂ ಎಂವಿ ಎಫ್ ಜಿ ಗ್ಲೋಬಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ರೋಟರಿ ಕ್ಲಬ್, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ವ್ಯಾಯಾಮ ತರಬೇತಿ ಹಾಗೂ ಸಂಪೂರ್ಣ ಆರೋಗ್ಯದ ಸಮಾಲೋಚನೆಯನ್ನು ಉಚಿತವಾಗಿ ಎರಡು ದಿನಗಳ ಕಾಲ ಕೈಗೊಳ್ಳಲಾಯಿತು.
ಸೊಂಟ ನೋವು, ಸ್ಪೈನ್ ತೊಂದರೆ, ಬೆನ್ನು ಹುರಿ, ಪಾರ್ಶು ವಾಯು, ತಲೆನೋವು, ಕುತ್ತಿಗೆ ಹಿಂಬಾಗ ನೋವು , ಮೂರ್ಛೆರೋಗ, ಹಾಗೂ ಅಪಘಾತದಿಂದ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಸುಮಾರು 20 ಜನ ರೋಗಿಗಳನ್ನು ತಜ್ಞ ವೈದ್ಯರ ತಂಡ, ಅನೇಕ ಸಂಘ ಸಂಸ್ಥೆಗಳು,ಕ್ಲಬ್ ಇವರು ವಿಶೇಷ ಕಾಳಜಿ ವಹಿಸಿ ರೋಗಿಗಳ ತೊಂದರೆಯನ್ನು ಸಮಾಲೋಚಿಸಿ ಒಂದು ದಿನ ಆಸ್ಪತ್ರೆಯಲ್ಲಿಯೇ ಇರಿಸಿಕೊಂಡು ಉಚಿತ ಚಿಕಿತ್ಸೆಯನ್ನು ನೀಡಿ ಅವರ ತೊಂದರೆಯನ್ನು ಬಗೆಹರಿಸುವಲ್ಲಿ ತಜ್ಞ ವೈದ್ಯರ ತಂಡದವರು ಯಶಸ್ವಿಯಾದರು. ಅವರಿಗೆ ಬೇಕಾಗುವ ಚಿಕಿತ್ಸೆಯ ಕಿಟ್ಟನ್ನು ಉಚಿತವಾಗಿ ವಿತರಿಸಲಾಯಿತು
ಈ ಸಂದರ್ಭದಲ್ಲಿ ಜೀವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಹಾಗೂ ಆಸ್ಪತ್ರೆಯ ಸಂಸ್ಥಾಪಕ ನಿರ್ದೇಶಕರಾದ ಡಾ.ಅಜಯ್.ಎ. ಗುತ್ತೇದಾರ್ ಡಾ: ಸುಶೀಲ್ ಗುತ್ತೇದಾರ್ ಡಾ: ಶಿಫಾಲಿ.ಏ. ಗುತ್ತೇದಾರ್ ಡಾ: ದಿವ್ಯಾ.ಎಸ್. ಗುತ್ತೇದಾರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಸುಮಿತ್ ಬೋಲ್ಗವರ್,ಡಾ.ಕೃಷ್ಣಾ ಕುಲಕರ್ಣಿ ಡಾ. ವಿಶ್ವರಾಜ್ ತಡಕಲ್ ಡಾ.ಕವಿರಾಜ್ ಡಾ. ಕಾರ್ತಿಕ್ ಗುತ್ತೇದಾರ್ ಹಾಗೂ ಸಂಸ್ಥೆಯ ಇನ್ನಿತರ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ಮಂಡಳಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

























