Home ಮುಖಪುಟ ಸುದ್ದಿ ಬಹುಮತವಿರುವ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ

ಬಹುಮತವಿರುವ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ

ಚೆನ್ನೈ, ಮೇ. ೮- ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬೇಕಾದ ೧೧೮ ಮಂದಿ ಶಾಸಕರ ಬೆಂಬಲ ಹೊಂದಿರುವ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಲು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಮುಂದಾಗಿದ್ದಾರೆ. ವಿeಯ್ ನೇತೃತ್ವದ ಟಿವಿಕೆ ನಾಯಕ ಬೆಂಬಲ ಗಳಿಸಲು ಕಸರತ್ತು ನಡೆಸುವ ಬೆನ್ನಲ್ಲೇ ರಾಜ್ಯಪಾಲರ ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. ಈ ವಿದ್ಯಮಾನ ಬೆನ್ನಲ್ಲೇ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳು ಸೇರಿಕೊಂಡು ಸರ್ಕಾರ ರಚನೆಗೆ ಕಸರತ್ತು ನಡೆಸಿವೆ.


ತಮಿಳುನಾಡಿನಲ್ಲಿ ಕುತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು, ಸರ್ಕಾರ ರಚನೆ ಕೋರಿ ವಿಜಯ್ ಅವರು ೨ನೇ ಬಾರಿ ರಾಜ್ಯಪಾಲರನ್ನು ನಿನ್ನೆ ಭೇಟಿ ಮಾಡಿದ್ದರು.

ಅಗತ್ಯ ಶಾಸಕರ ಸಂಖ್ಯಾಬಲದೊಂದಿಗೆ ಬನ್ನಿ. ಸರ್ಕಾರ ರಚಿಸಿ ಎಂದು ವಿಜಯ್‌ಗೆ ಹೇಳಿ ವಾಪಸ್ ಕಳುಹಿಸಿದ್ದರು.


ಟಿವಿಕೆ ಹೊರತುಪಡಿಸಿ ೧೧೮ ಶಾಸಕರ ಬೆಂಬಲ ಯಾವುದೇ ರಾಜಕೀಯ ಪಕ್ಷಗಳು ಸಾಬೀತುಪಡಿಸಿದರೆ ಆ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನಿಸುತ್ತೇವೆ. ಆದರೆ ಕೇಂದ್ರದ ಒತ್ತಡಕ್ಕೆ ಮಣಿದಿದೆ ಎಂಬ ಆರೋಪಗಳನ್ನು ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.


ಸರ್ಕಾರಕ್ಕೆ ರಚನೆಗೆ ಕಸರತ್ತು ನಡೆಸಿವೆ. ವಿಜಯ್ ಅವರು ಅಧಿಕಾರಕ್ಕೆ ಬರುವುದನ್ನು ತಡೆಯಲು ಡಿಎಂಕೆ ಅಣ್ಣಾ ಡಿಎಂಕೆ ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ಎಚ್ಚರಿಕೆ
ತಮಿಳುನಾಡಿನಲ್ಲಿ ಅತಂತ್ರ ವಿಧಾನಸಭೆ ಸೃಷ್ಠಿಯಾದ ಹಿನ್ನೆಲೆಯಲ್ಲಿ ಎರಡು ದ್ರಾವಿಡ ಪಕ್ಷಗಳಾದ ಎಂಕೆ ಸ್ಟಾಲಿನ್ ಅವರ ಡಿಎಂಕೆ ಅಥವಾ ಇ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ರಚಿಸಲು ಪ್ರಯತ್ನಿಸಿದರೆ ಟಿವಿಕೆಯ ಎಲ್ಲಾ ೧೦೭ ಶಾಸಕರೂ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಬೆದರಿಕೆ ಹಾಕಿದೆ.


ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚನೆಗೆ ಅವಕಾಶ ನೀಡದೆ, ಡಿಎಂಕೆ, ಅಥವಾ ಎಐಎಡಿಎಂಕೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದರೆ ಇಲ್ಲವೆ ಅವಕಾಶ ಮಾಡಿಕೊಟ್ಟರೆ ಟಿವಿಕೆಯ ಎಲ್ಲಾ ಶಾಸಕರು ರಾಜೀನಾಮೆ ನೀಡಲು ಟಿವಿಕೆ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ಟಿವಿಕೆ ಮುಖ್ಯಸ್ಥ ನಟ ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸೇರಿದಂತೆ ೧೦೮ ಟಿವಿಕೆ ಮತ್ತು ೫ ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಎರಡನೇ ಬಾರಿಗೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ಭೇಟಿ ಮಾಡಿ ಹಕ್ಕು ಮಂಡಿಸಿದ್ದರೂ ಸರ್ಕಾರ ರಚನೆಗೆ ಅಗತ್ಯವಿರುವ ೧೧೮ ಶಾಸಕರೊಂದಿಗೆ ಬನ್ನಿ ಎಂದು ಸೂಚನೆ ನೀಡಿದ್ದಾರೆ,


ಎಐಎಡಿಎಂಕೆಯ ಬಣ ಸರ್ಕಾರ ರಚಿಸಲು ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಲಿದೆ ಎನ್ನುವ ಚರ್ಚೆಯ ನಡುವೆಯೇ ಎಡಪ್ಪಾಡಿ ಪಳನಿಸಾಮಿ ಅವರಯ ೨೯ ಶಾಸಕರನ್ನು ಪದುಚೆರಿಯ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದ್ದು ಅವರ ಜೊತೆ ಚರ್ಚೆ ನಡೆಸಿದ್ದಾರೆ


ಮತ್ತೊಂದೆಡೆ ಡಿಎಂಕೆ ಮತ್ತು ಎಐಎಡಿಎಂಕೆ ಶಿಬಿರಗಳಲ್ಲಿ ಎರಡು ನಿರ್ಣಾಯಕ ಸಭೆ ನಡೆಸಿದ್ದು ಸರ್ಕಾರ ರಚನೆಗೆ ಮುಂದಾಗಿವೆ ಎನ್ನಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ಟಿವಿಕೆ ಈ ನಿರ್ಧಾರ ಬಂದಿದೆ. ಜನಾದೇಶ ಪಡೆದ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡದೆ ಅನ್ಯ ಮಾರ್ಗ ಅನುಸರಿಸಿದರೆ ರಾಜೀನಾಮೆ ನೀಡದೆ ಬೇರೆ ದಾರಿ ಇಲ್ಲ ಎಂದು ಟಿವಿಕೆ ಮೂಲಗಳು ತಿಳಿಸಿವೆ


ರಾಜ್ಯದಲ್ಲಿ ಸರ್ಕಾರ ರಚಿಸಲು ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಳ್ಳುತ್ತಿವೆ ಎನ್ನುವ ಚರ್ಚೆಯ ಹಿನ್ನೆಲೆಯಲ್ಲಿ ಟಿವಿಕೆ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ
೨೩೪ ವಿಧಾನಸಭಾ ಕ್ಷೇತ್ರಗಳ ಪೈಕಿ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಎರಡೂ ಕ್ಷೇತ್ರಗಳೂ ಸೇರಿದಂತೆ ೧೦೭ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈಗಾಗಲೆ ಕಾಂಗ್ರಸ್ ೫ ಶಾಸಕರು ಬೆಂಬಲದೊಂದಿಗೆ ಎರಡನೇ ಬಾರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ.


ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ವಿಜಯ್ ಅವರಿಗೆ ಹಕ್ಕು ಮಂಡಿಸಲು ಅವಕಾಶ ನೀಡಲು ನಿರಾಕರಿಸಿದ್ದು ಬಹುಮತ ತಲುಪಲು ನಟ ವಿಜಯ್ ಮಂಡಿಸಿದ ಪ್ರಸ್ತಾಪವನ್ನು ಒಪ್ಪಿಕೊಂಡಿಲ್ಲ.


ಬಹುಮತವನ್ನು ತಲುಪಲು ಟಿವಿಕೆಗೆ ಇನ್ನೂ ೧೦ ಸ್ಥಾನಗಳು ಬೇಕಾಗುತ್ತವೆ ಮತ್ತು ಈಗಾಗಲೇ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ನ ಬೆಂಬಲವಿದೆ. ಉಳಿದ ಸ್ಥಾನಗಳಿಗಾಗಿ ಎಡಪಂಥೀಯರು ಮತ್ತು ಕೆಲವು ಸಣ್ಣ ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ.
ಈ ನಡುವೆ ಟಿವಿಕೆ ನ್ಯಾಯಾಲಯದ ಮೊರೆ ಹೋಗಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ

  • ಡಿಎಂಕೆ ಅಥವಾ ಎಐಡಿಎಂಕೆಗೆ ಸರ್ಕಾರ ರಚನೆಗೆ ಅವಕಾಶ ನೀಡಿದರೆ
  • ಟಿವಿಕೆಯ ೧೦೭ ಶಾಸಕರು ಸಾಮೂಹಿಕ ರಾಜೀನಾಮೆಗೆ ವಿಜಯ್ ಬೆದರಿಕೆ
  • ಏಕೈಕ ದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚನೆಗೆ ಅವಕಾಶ
  • ಎರಡು ಬಾರಿ ರಾಜ್ಯಪಾಲ ಭೇಟಿ , ಸರ್ಕಾರ ರಚನೆಗೆ ಹಕ್ಕು ಮಂಡನೆ
  • ಅಗತ್ಯ ೧೧೮ ಶಾಸಕರೊಂದಿಗೆ ಬನ್ನಿ ಎಂದಿರುವ ರಾಜ್ಯಪಾಲರು
  • ಈ ನಡುವೆ ಡಿಎಂಕೆ, ಎಐಎಡಿಎಂಕೆ ಸರ್ಕಾರ ರಚಿಸುವ ಯತ್ನ
  • ಸರ್ಕಾರ ರಚನೆಗೆ ಆಹ್ವಾನ ನೀಡದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಟಿವಿಕೆ ನಿರ್ಧಾರ
  • ಕುತೂಹಲ ಕೆರಳಿಸಿದ ತಮಿಳುನಾಡು ರಾಜಕೀಯ