Home ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ

ಪ್ರಗತಿ ಪರಿಶೀಲನಾ ಸಭೆ


ನವಲಗುಂದ,ಮೇ.೮:
ಮುಂಗಾರು ಹಂಗಾಮಿನಲ್ಲಿ ರೈತರ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗದAತೆ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಎನ್ ಎಚ್ ಕೋನರಡ್ಡಿ ಸೂಚನೆ ನೀಡಿದರು.


ಪಟ್ಟಣದ ವಾಲ್ಮೀಕಿ ಸಭಾಭವನದಲ್ಲಿ ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲ್ಲೂಕಗಳ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ನವಲಗುಂದ ಅಣ್ಣಿಗೇರಿ ಪಟ್ಟಣವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೆರೆಗಳಿಗೆ ಮಲಪ್ರಭಾ ಕಾಲುವೆ ನೀರನ್ನು ತುಂಬಿಸಿ ತೊಂದರೆಯಾಗದ ರೀತಿ ಆಯಾ ಭಾಗದ ಅಧಿಕಾರಿಗಳು ಎಚ್ಚರ ವಹಿಸಬೇಕು. ಬೇಸಿಗೆ ಇರುವುದರಿಂದ ನೀರಿನ ಅಭಾವವಾಗದಂತೆ ಕೂಡಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.


ತಾಲ್ಲೂಕಿನಾದ್ಯಂತ ಅಕ್ರಮ ಸಾರಾಯಿ ದಂಧೆ ಬಗ್ಗೆ ಶಾಸಕರು ತಾಲೂಕ ಅಬಕಾರಿ ನಿರೀಕ್ಷಕರಿಂದ ಮಾಹಿತಿ ಪಡೆದು ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ತಿಳಿ ಹೇಳಿದರು.


ತಹಶೀಲ್ದಾರರಾದ ಸುಧೀರ ಸಾಹುಕಾರ, ಮಂಜುನಾಥ ದಾಸಪ್ಪನವರ, ಜೆ.ಬಿ. ಮಜ್ಜಗಿ, ತಾ.ಪಂ. ಇಒ ರವೀಂದ್ರಗೌಡ ಪಾಟೀಲ, ಆರ್. ಎಂ. ಹೊಸಮನಿ, ಸಿಪಿಐ ರವಿ ಕಪ್ಪತ್ತನವರ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ಭೂಮಣ್ಣವರ, ಡಿಡಿಪಿಐ ಉಮೇಶ ಬೊಮ್ಮಕ್ಕನವರ, ಸೋಮನಗೌಡ ಪಾಟೀಲ, ರಾಘವೇಂದ್ರ ಜಾಲಗಾರ,ಮನೋಹರ ದ್ಯಾಬೇರಿ, ಗಾಯತ್ರಿ ಪಾಟೀಲ ಡಾ. ಎನ್ ಬಿ ಕಾಲವಾಡ, ಎಸ್ ಎಸ್ ಲಂಗೂಟಿ, ಎಸ್.ಪಿ. ಪೂಜಾರ, ವಾಯ್.ಜಿ. ಗದ್ದಿಗೌಡರ, ಅಬೀದಾ ಮುಲ್ಲಾನವರ ಸೇರಿದಂತೆ ತಾಲ್ಲೂಕಾ ಕೆಡಿಪಿ ನಾಮನಿರ್ದೇಶಿತ ಸದಸ್ಯರು, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.