
ಭಾಲ್ಕಿ:ಮಹಿಳೆ ತಾಯಿಯಾಗಿ,ಪತ್ನಿಯಾಗಿ,ಸೊಸೆಯಾಗಿ,ಅತ್ತಿಗೆಯಾಗಿ ಎಲ್ಲರ ಸೇವೆ ಮಾಡುವ ವಿಶಾಲ ಹೃದಯ ಹೊಂದಿ,ಬಹುರೂಪಿಯಾಗಿ ಕಾರ್ಯನಿರ್ವಹಿಸಿ,ಎಲ್ಲರನ್ನು ಸಮಾಧಾನ ಪಡಿಸುವ ಶಕ್ತಿ ಹೊಂದಿದ್ದಾಳೆ ಎಂದು ನ್ಯಾಯವಾದಿ ಆರತಿ ಎಸ್.ತಿವಾರಿ ಪ್ರತಿಪಾದಿಸಿದರು.
ಪಟ್ಟಣದ ಸರ್ಕಾರಿ ಫ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ನ್ಯಾಯವಾದಿ ಆರತಿ ಎಸ್.ತಿವಾರಿ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಹೇಮಾವತಿ ಪಾಟೀಲ್ ಮಾತನಾಡಿ,ಗಿವ್ ಟು ಗೇನ್ ಧ್ಯೇಯವಾಕ್ಯ ಪಾಲಿಸಿ, ಇಂದು ಮಹಿಳೆ ಸ್ವಾವಲಂಬಿ ಬದುಕು ಸಾಗಿಸಿ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿüಸುತ್ತಿರುವುದು ಸಂತಸದ ಸಂಗತಿಯಾಗಿದೆ.
ಬಹುಮಾನ ವಿತರಣೆ:ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಡಾ.ರಘುನಂದ,ಡಾ.ನಾಗಮ್ಮ,ಪ್ರೊ.ಸAಪತಕುಮಾರಿ,ಡಾ.ಸಹನಾ,ಪ್ರೊ.ಸಾವಿತ್ರಿ ದೇಸಾಯಿ,ಪ್ರೊ.ಮೀನಾಕ್ಷಿ,ಡಾ.ಕೃಷ್ಣಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಡಾ.ಮಾತೇಶ ಸುಬೇದಾರ ಸ್ವಾಗತಿಸಿದರು.ಡಾ.ರವಿ ಮೇಟಿ ನಿರೂಪಿಸಿದರು.ಪ್ರೊ.ಅಶೋಕ ಚೆಲವಾ ವಂದಿಸಿದರು.

























