ಕಲಬುರಗಿ:ಜೂ.30: ಪ್ರಕೃತಿ ವಿಕೋಪದಿಂದ ಯಾವುದೇ ರೀತಿ ಹಾನಿ ಸಂಭವಿಸದಂತೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಕೆಪಿಟಿಸಿಎಲ್. ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಸ್ವಾನ್ ವಿಡಿಯೋ ಕಾನ್ಪರೆನ್ಸ್ ಮೂಲಕ ಕಲಬುರಗಿ ಜಿಲ್ಲೆಯ 2025-26ನೇ ಸಾಲಿನ ಮುಂಗಾರು ಮಳೆ ಅವಧಿ ಪೂರ್ವ ಸಿದ್ಧತೆ ಹಾಗೂ ಮುಂಜಾಗೃತಾ ಕ್ರಮಕೈಗೊಳ್ಳುವ ಕುರಿತು ಜಿಲ್ಲಾಮಟ್ಟದ ಹಾಗೂ ತಾಲೂಕನ ಅಧಿಕಾರಿಗಳು, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಗಾಲ ಇರುವುದರಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳು, ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಬೆಳೆಹಾನಿ, ಪ್ರಾಣಿಹಾನಿ ಮತ್ತು ಜಿಲ್ಲೆಯಲ್ಲಿ ಕೃಷಿಯ ಉತ್ಪದಾನೆಗೆ ಬೇಕಾದ ರಸಗೊಬ್ಬರ ಪೂರೈಕೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಕೊಂಡರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಮಾನತಾಡಿ, ಕಲಬುರಗಿ ಜಿಲ್ಲೆಯ 2025 ರ ಜನವರಿ 1 ರಿಂದ ಜೂನ್ 29 ರವರೆಗೆ ವಾಡಿಕೆಯಂತೆ 168.5 ಮೀಲಿ ಮೀಟರ ಮಳೆಯಾಗಬೇಕಾಗಿತ್ತು. 280.4 ಮಿ.ಮೀಟರ್ ಶೇ. 72 ಪ್ರತಿಶತ ಹೆಚ್ಚು ಮಳೆಯಾಗಿದೆ ಎಂದು ಹೇಳಿದರು.
ಜೂನ್. 29 ರಿಂದ ಇಲ್ಲಿಯವರೆಗೆ ವಾಡಿಕೆ ಮಳೆಯ 98.8 ಆಗಬೇಕಾಗಿತ್ತು. ಅದರಲ್ಲಿ 65.1 ಮಳೆಯಾಗಿರುತ್ತದೆ. ಶೇ.-34 ಪ್ರತಿಶತ ಕಡಿಮೆಯಾಗಿರುತ್ತದೆ. ಎಂದು ಸಭೆಯ ಗಮನಕ್ಕೆ ತಂದರು.
ಮುಂಗಾರು, 2025ರ ಬಿತ್ತನೆ ಬೀಜಗಳ ಸರಬರಾಜು ಹಾಗೂ ಬೀಜಗಳ ವಿತರಣೆ ಸಂಪೂರ್ಣ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಂದಾರ ಮಾತನಾಡಿ, ಕೃಷಿ ಸಂಜೀವಿನಿ ಅಡ್ಡಿಯಲ್ಲಿ ಕೃಷಿ ಇಲಾಖೆ ವಾಹನಗಳಿಂದ ಎಲ್ಲ ಪ್ರದೇಶಗಳಿಗೆ ಹೋಗಿ ರೈತರಿಗೆ ಕೃಷಿ ಚಟುವಟಿಕೆಗಳು ಬೀಜ ಗೊಬ್ಬರಗಳು ಕೃಷಿ ಬೇಕಾದ ಅಗತ್ಯ ಉಪಕರಣಗಳ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು. ಒಂದು ಸಾವಿರ ಕ್ವಿಂಟಲ್ ಸೋಯಿಬಿನ್ ಬೀಜಗಳ ಸಂಗ್ರಹವಿದೆ ಜಿಲ್ಲೆಯಲ್ಲಿ ಶೇ. 45 ಪ್ರತಿಶತ ಬಿತ್ತನೆಯಾಗಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಅಮರ್ಜಾ ಜಲಾಶಯದಲ್ಲಿ ನೀರಿನ ಮಟ್ಟ 461.50 ಮೀಟರನಷ್ಟು ಸಂಗ್ರಹ ಸಾಮಾಥ್ರ್ಯ ಇದ್ದು. 458.57 ನೀರಿನ ಸಂಗ್ರಹಣೆಯಾಗಿದೆ ಬೆಣ್ಣೆ ತೋರಾ ಜಲಾಶಯದಲ್ಲಿ 438.89 ಸಂಗ್ರಹ ಸಾಮಾಥ್ರ್ಯವಿದ್ದು, ಪ್ರಸುತ್ತ 437.80 ನೀರಿನ ಸಂಗ್ರಹಣ ಸಾಮಾಥ್ರ್ಯವಿದೆ. ಭೀಮಾ ಜಲಾಶಯದಲ್ಲಿ 406.40 ರಷ್ಟು ನೀರಿನ ಸಂಗ್ರಹ ಸಾಮಾಥ್ರ್ಯವಿದೆ ಪ್ರಸುತ್ತ 404.60 ನೀರು ಸಂಗ್ರಹವಿದೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಪೂರ್ವ ಮುಂಗಾರನಲ್ಲಿ ಬಾರಿ ಮಳೆಯಿಂದ ಹಾಗೂ ಸಿಡಿಲಿನಿಂದ ಹಾನಿಯಾದ 4 ಮಂದಿ ಕುಟುಂಬದವರಿಗೆ ಸರ್ಕಾರದ ಪರಿಹಾರ ಧನವನ್ನು ವಿತರಿಸಲಾಗಿದೆ. ಅಲ್ಲದೇ 36 ದೊಡ್ಡ ಪ್ರಾಣಿಗಳು, 94 ಅರ್ಧದಷ್ಟು ಹಾನಿಯಾದ ಮನೆಗಳಿಗೆ ಹಾಗೂ ತೋಟಗಾರಿಕೆ ಇಲಾಖೆ 123.16 ಹೆಕ್ಟರ್ ಪ್ರದೇಶದ ಬೇಳೆ ಹಾನಿಗಳಿಗೆ ಭೇಟಿ ನೀಡಿ ಪರಿಹಾರ ಧನ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸಭೆಗೆ ಮಾಹಿತಿ ನೀಡಿದರು.
ಕೃಷಿ ಪ್ರದೇಶ ಗೋಶಾಲೆಗಳು ಮತ್ತು ಹಾನಿಯಾಗುವ ಸ್ಥಳಗಳನ್ನು ಗುರುತಿಸಿ ವಿಪತ್ತು ನಿರ್ವಹಣಾ ತಂಡದಿಂದ ಪರಿಣಿತ ತಂಡದಿಂದ ಯಾವುದೇ ಅಹಿತಕರ ಘಟನೆಗಳು ಮತ್ತು ಹಾನಿ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ಏನಾದರೂ ಅನಾಹುತ ಸಂಭವಿಸಿದರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನ ಮತ್ತು ಜಾನವಾರುಗಳಿಗೆ ಸಮಸ್ಯೆಯಾಗದ್ಯಂತೆ ಕಾಳಜಿ ಕೇಂದ್ರ ಸ್ಥಾಪಿಸಿ ಮೂಲಮೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಕಾರ್ಯದರ್ಶಿಯವರು ವೀಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿ, ಅಫಜಲಪೂರ, ಮತ್ತು ಜೇವರ್ಗಿ ತಹಶೀಲ್ದಾರ ಇ.ಓ.ಗಳೊಂದಿಗೆ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.
ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲ್ಲಗೋಡ್ ಈಗಾಗಲೇ ಜೇವರ್ಗಿ ತಾಲೂಕಿನ 44 ಗ್ರಾಮಗಳು ಪ್ರವಾಹ ಸಂಭವಿಸುವ ಸಂದರ್ಭವಿದ್ದು, 22 ಕಾಳಜಿ ಕೇಂದ್ರ ಸ್ಥಳ ಗುರುತಿಸಿ 9 ಗೋಶಾಲೆಗಳನ್ನು ಗುರುತಿಸಲಾಗಿದೆ. ಯಾವುದೇ ರೀತಿ ಪ್ರಕೃತಿ ವಿಕೋಪಗಳು ಮತ್ತು ಮಳೆಯಿಂದ ಹಾನಿಯಿಂದ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ಮತ್ತು ಅಧಿಕಾರಿಗಳೊಂದಿಗೆ ಸ್ಥಳಗಳ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ವಿದ್ಯುಚ್ಫಕ್ತಿ ಸರಬರಾಜು ಕಂಪನಿಯ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಕರಲಿಂಗಣ್ಣನವರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸೇರಿದಂತೆ ಸಹಾಯಕ ಆಯುಕ್ರರುಗಳಾದ ಸಾಹಿತ್ಯ, ಪ್ರಭುರೆಡ್ಡಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ, ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಇ.ಓ.ಗಳು ಸಭೆಯಲ್ಲಿ ಉಪಸ್ಥಿತರಿದ್ದರು.