
ಚನ್ನಮ್ಮನ ಕಿತ್ತೂರ,ಅ೨೭: ಜ್ಞಾನವಿದ್ದರೆ ಎಲ್ಲಿಯೂ ಬದುಕಬಹುದು. ನಾವು ಸತ್ಯದ ಹಾದಿಯಲ್ಲಿ ನಡೆಯಬೇಕು. ಅಂದಾಗ ಮಾತ್ರ ಈ ದೇಶ ಮುಂದೆ ಬರಲು ಸಾಧ್ಯ. ಯಾರು ಯಾರಿಗೂ ಹಿಂಸೆ ಮಾಡಬಾರದು. ಆಡಬರ ಜೀವನಬೇಡ ಸತ್ಯದಿಂದ ಬದುಕುವ ಜೀವನ ಬೇಕು. ಎಂದು ಸಹಾಯಕ ಪ್ರಾಧ್ಯಾಪಕ ಬಿ.ಡಿ.ಜಿ.ಕಲೆ, ಬಿ.ಎಮ್.ಪಿ. ವಾಣಿಜ್ಯ ಹಾಗೂ ಎಲ್.ವ್ಹಿ.ಎಸ್. ವಿಜ್ಞಾನ ಪಧವಿ ಮಹಾವಿದ್ಯಾಲಯ ಬೈಲಹೊಂಗಲದ ಡಾ.ಹೆಚ್.ಹೆಚ್ ಕಡೇನಾಯ್ಕನಹಳ್ಳಿ ಹೇಳಿದರು.
ತಾಪಂ ಆಡಳಿತ, ಪಪಂ ಕಿತ್ತೂರ-ಎಂ.ಕೆ.ಹುಬ್ಬಳ್ಳಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಹಶೀಲ್ದಾರ ಕಛೇರಿ ಸಭಾಭವನದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನಗೈದು ಅವರು ಮಾತನಾಡಿದರು.
ಪ್ರತಿಯೊಬ್ಬರೂ ಶಿಕ್ಷಣ ಕಲಿಯಲೇಬೇಕು. ಅಂದಾಗ ಮಾತ್ರ ಸಮಾಜ ಸುಧಾರಣೆಯಾಗಲಿಕ್ಕೆ ಜಾತಿ-ಜಾತಿ ಎಂಬ ಹೊಡೆದಾಟ ಶಿಕ್ಷಣವಿದ್ದರೆ ಮಾತ್ರ ಕಡಿಮೆಯಾಗುತ್ತದೆ. ಇದು ಎಲ್ಲಿಯವರೆಗೆ ಅರಿವು ಮೂಡುವುದಿಲ್ಲ ಅಲ್ಲಿಯವರೆಗೆ ಈ ಸಮಸ್ಯೆ ತೊಲಗುವುದಿಲ್ಲ ಎಂದರು.
ಸಮಾಜ ಮುಖಂಡ ನ್ಯಾಯವಾದಿ ಮಲ್ಲಿಕಾರ್ಜುನ ತಳವಾರ, ಭೀಮಶೆಪ್ಪ ದುರಗಣ್ಣವರ, ಅಜ್ಜಪ್ಪ ತಳವಾರ, ಪುಂಡಲೀಕ ನೀರಲಕಟ್ಟಿ ಮಾತನಾಡಿ, ವಾಲ್ಮೀಕಿಯವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.ಇದಕ್ಕೂ ಪೂರ್ವ ರಾಷ್ಟಿçÃಯ ಹೆದ್ದಾರ ೪ರ ಚನ್ನಮ್ಮನ ವೃತ್ತದಿಂದ ವಾಲ್ಮೀಕಿ ಹಾಗೂ ವಿವಿಧ ರೂಪಕಗಳ ಭಾವಚಿತ್ರದ ಮೆರವಣಿಗೆ ಅದ್ದೂರಿಯಿಂದ ಗುರುವಾರ ಪೇಟೆ ಅರಳಿಕಟ್ಟಿ ಮಾರ್ಗವಾಗಿ ಸಾಗಿತು. ಎಸ್.ಎಸ.ಎಲ್.ಸಿ-ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸತ್ಕರಿಸಲಾಯಿತು.
ಸಭೆಯಲ್ಲಿ ಸೋ.ಸ.ಸ.ಕಾ. ನಿರ್ದೇಶಕ ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಪ್ರಭಾರಿ ವಿಶೇಷ ತಹಶೀಲ್ದಾರ ಪ್ರಕಾಶ ಕೋರೆ, ಸ.ಕ.ಇ. ಕಛೇರಿಯ ಅಧೀಕ್ಷಕಿ ಕಲಾವತಿ ಯಲಗುದ್ರಿ, ಸಂಜೀವ ಲೋಕಾಪೂರ, ಸಾವಂತ ಕಿರಬನವರ, ನಾಗಪ್ಪ ಅಸಲನ್ನವರ, ಎಸಿಡಿಪಿಓ ಶ್ರೀದೇವಿ ಕುಂತೋಜಿ, ಸವಿತಾ ಪಡಿಪಾಟೀಲ, ರಮೇಶ ತುರಮಂದಿ, ಲಕ್ಷಿö್ಮÃ ಲಮಾಣಿ, ಶ್ರೀಕಾಂತ ಶೀಗಿಹಳ್ಳಿ, ರಶ್ಮಿ ಕಾಜಗಾರ, ಮಂಜುನಾಥ ತೊಟಗಿ ನಿರೂಪಿಸಿ ಸ್ವಾಗತಿಸಿದರು. ಬಸವರಾಜ ಲಂಗೋಟಿ, ಸಮಾಜದ ಮುಖಂಡರು ಇತರರಿದ್ದರು.





















