
ಅಥಣಿ : ಮಾ.೧೮:ಹಲವಾರು ದೈವಿಕ ಶಕ್ತಿಗಳಿಂದ ಕೂಡಿದ ಈ ನಮ್ಮ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪರಿಶುದ್ಧತೆಯಿಂದ ಪ್ರಜ್ವಲಿಸುವ ಭೂತಾಯಿ ಜ್ಯೋತಿರ್ಮಯಶಕ್ತಿಯಾಗಿ ಕಂಗೊಳಿಸಿ ತನ್ನೆಲ್ಲ ಮಕ್ಕಳನ್ನು ಸಲಹುತ್ತಾಳೆ ಎಂಬ ನಂಬಿಕೆ ಹಾಗಾಗಿ ಪ್ರತಿಯೊಬ್ಬರೂ ಗಿಡಮರಗಳನ್ನು ನೆಟ್ಟು ಪೋಷಿಸಬೇಕು ಎಂದು ಸಮಾಜ ಸೇವಕ ಆನಂದ ಟೋಣಪಿ ಹೇಳಿದರು.
ಅವರು ತಮ್ಮ ಹುಟ್ಟು ಹಬ್ಬದಂದು ಮನೆಗೊಂದು ಸಸಿ ವಿತರಿಸಿ ಮಾತನಾಡುತ್ತಿದ್ದರು. ಆಮ್ಲಜನಕದ ಕೊರತೆಯಿಂದ ಏನಾಗುತ್ತದೆ ಎಂಬುದನ್ನು ನಾವು ಕರೋನಾ ಸಮಯದಲ್ಲಿ ಕಣ್ಣಾರೆ ಕಂಡವರಿದ್ದೇವೆ.
ನಮಗೆ ಮುಖ್ಯವಾಗಿ ಶುದ್ಧಗಾಳಿ ಬೆಳಕು, ಉತ್ತಮ ಪರಿಸರಕ್ಕಾಗಿ ಗಿಡಮರಗಳನ್ನು ಬೆಳೆಸಿ ಎಂದು ಮನವಿ ಮಾಡಿದ ಅವರು ನನ್ನ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ಮನೆಗೊಂದು ಮರ ನೀಡುವ ಮೂಲಕ ಇಂದು ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಲು ಸಹಕರಿಸಿದ ಎಲ್ಲ ನನ್ನ ಆತ್ಮೀಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಎಂದ ಅವರು ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಹುಟ್ಟು ಹಬ್ಬ ನೆನಪಿನಲ್ಲಿ ಸಸಿಗಳನ್ನು ವಿತರಿಸಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಪರಿಸರ ಸ್ನೇಹಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದರು
ಆನAತರ ಕಾರ್ಯನಿರತ ಪತ್ರಕರ್ತರ ಸಂಘದ ಅಥಣಿ ತಾಲೂಕಾ ಅಧ್ಯಕ್ಷ ರಾಕೇಶ ಮೈಗೊರ. ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸಮಾಜಸೇವೆಯನ್ನೆ ತನ್ನ ಧ್ಯೇಯ ಮಾಡಿಕೊಂಡಿರುವ ಆನಂದ ಟೋಣಪಿ ಇವರು ಸಾಕಷ್ಟು ಬಡ ಕುಟುಂಬಗಳಿಗೆ ಸಹಾಯ ಸಹಕಾರ ಮಾಡುತ್ತಾ ಹಾಗೂ ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇಂದು ತಮ್ಮ ಹುಟ್ಟು ಹಬ್ಬದಂದು ಪ್ರತಿ ಮನೆಗೆ ಸಸಿ ವಿತರಿಸುವ ಮೂಲಕ ಪರಿಸರ ಕಾಳಜಿಯನ್ನು ತೋರಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಅಂಬೇಡ್ಕರ್ ಬ್ರೀಗೆಡ್ ತಾಲೂಕಾ ಅಧ್ಯಕ್ಷ ಮಹಾಂತೇಶ ಬಾಡಗಿ ಮಾತನಾಡಿ ಆನಂದ ಟೋಣಪಿ ಇವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಹುಟ್ಟು ಹಬ್ಬದಂದು ಪ್ರತಿ ಮನೆಗೆ ಸಸಿ ವಿತರಿಸಿದ್ದು ನೋಡಿದರೆ ಪರಿಸರದ ಬಗ್ಗೆ ಅವರಿಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ. ಅವರ ಈ ಮಾದರಿ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು
ಅದ್ದೂರಿ ಆಡಂಬರವಿಲ್ಲ, ಪಟಾಕಿ ಸಿಡಿಸಲಿಲ್ಲ, ಕಟೌಟ್ ಪ್ಲೆಕ್ಸ್ ಹಾಕಲಿಲ್ಲ, ಅಚ್ಚಹಸಿರಿನ ಸುಂದರ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಮಾಜ ಸೇವಕ ಆನಂದ ಟೋಣಪಿ ಅವರು ಹುಟ್ಟು ಹಬ್ಬದ ನಿಮಿತ್ತವಾಗಿ ಪ್ರತಿ ಮನೆಗೊಂದು ಸಸಿ ವಿತರಿಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ವಿಶಿಷ್ಟ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು
ಈ ಸಂದರ್ಭದಲ್ಲಿ ರಮೇಶ ಬಾದವಾಡಗಿ, ಅಜೀತ ಇನಾಮದಾರ, ಕಿರಣ ದೇಶಪಾಂಡೆ, ಸಂದೀಪ ಅಳತೇಕರ, ಶ್ರೀನಾಥ್ ದೇಶಪಾಂಡೆ, ದಿಗ್ವಿಜಯ ದೇಸಾಯಿ, ಸುಶಾಂತ್ ಪಟ್ಟಣ, ಪರಸರಾಮ ಕಾವೇರಿ, ಅಭಯ ಪಾಟೀಲ, ಸಂತೋಷ ಲಠ್ಠೆ, ರಾಕೇಶ ಲಗೋಟಿ, ವಿನಾಯಕ ಮಡಿವಾಳ, ದಾನೇಶ ಪಾಟೀಲ, ಅನೀಲ ಕುಲಕರ್ಣಿ, ಸುಶಾಂತ ಬೋಜನಿ, ರವಿ ಬಾಸಿಂಗಿ, ಬಸವರಾಜ ಕಾಂಬಳೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು

























