ಗಂಟಲು ಬೇನೆಯ ಕಿರಿಕಿರಿಗೆ ಮನೆಮದ್ದು

ವಾತಾವರಣದಲ್ಲಿ ಆಗುತ್ತಿರುವ

ಬದಲಾವಣೆಗಳಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವು ಸಹ ಬದಲಾಗುತ್ತದೆ.ಅದರಲ್ಲಿಶೀತ, ಗಂಟಲು ನೋವು, ಕೆಮ್ಮು ಮತ್ತುಒಮ್ಮೊಮ್ಮೆಜ್ವರವು ಸಹ ನಮ್ಮನ್ನು ಭಾದಿಸಬಹುದು. ಅದರಲ್ಲಿ ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ. ಏಕೆ-ಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಏನಾದರು ಆಹಾರ ಸೇವಿಸಲು ಸಹ ಕಷ್ಟವಾಗುತ್ತದೆ.ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮಮಾತುಗಳು ಕೇಳಿಸುವುದೆ ಇಲ್ಲ ಆ ಮಟ್ಟಿಗೆ ನಮ್ಮ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ. ಗಂಟಲು ನೋವು ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆಯಾಗಿರುವುದರಿಂದಾಗಿ ಅದರ ಕುರಿತು ಭಯಪಡುವ ಅಗತ್ಯವಿರುವುದಿಲ್ಲ.ಆದರೂ ಇದರ ನೋವನ್ನು ಮತ್ತು ಇದು ಉಂಟು ಮಾಡುವ ಅಸೌಕರ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ವೈದ್ಯರ ಬಳಿ ಹೋಗುವ ಬದಲಿಗೆ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ನಿವಾರಿಸಿಕೊಳ್ಳಿ?..

ಮೆಂತೆಯನೀರು:ಮೆಂತೆಯಲ್ಲಿಯೂ

ಬ್ಯಾಕ್ಟಿರಿಯಾ ನಿವಾರಕ ಮತ್ತು ಉರಿಯೂತನಿವಾರಕಗುಣಗಳಿದ್ದು ಗಂಟಲಸೋಂಕು ನಿವಾರಿಸಲು ಶಕ್ತವಾಗಿವೆ. ಒಂದು ಲೀಟರ್ ನೀರಿಗೆ ಎರಡು ದೊಡ್ಡಚಮಚ ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ನೀರಿನ ಬಣ್ಣವನ್ನು ಗಮನಿಸಿ. ಯಾವಾಗ ನೀರಿನಲ್ಲಿ ಮೆಂತೆ ಬಣ್ಣಬಿಡತೊಡಗುತ್ತದೆಯೋ ಆಗತಕ್ಷಣ ಉರಿಆರಿಸಿನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು

ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಮುಕ್ಕಳಿಸುತ್ತಿರಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ದಾಳಿಂಬೆಯ ಸಿಪ್ಪೆ:ದಾಳಿಂಬೆಯ

ಸಿಪ್ಪೆಯಲ್ಲಿಯೂ ಬ್ಯಾಕ್ಟಿ-ರಿಯಾ ನಿವಾರಕ ಗುಣವಿದೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳುರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಂಟಲಿನ ಒಳಭಾಗದಸೋಂಕು ಶೀಘ್ರವಾಗಿ ಕಡಿಮೆಯಾಗಲು ನೆರವಾಗುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಕಫ ಸಡಿಲವಾಗಿ ಹೊರಬರಲೂ ನೆರವಾಗುತ್ತದೆ. ಇದಕ್ಕೆ ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಕೆಮ್ಮು ಇದ್ದಾಗ ಒಂದು ದೊಡ್ಡ ಚಮಚ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಸುಮಾರು ಐದು ನಿಮಿಷಗಳವರೆಗೆ ಕುದಿಸಿ ತಣಿಸಿ ಬಳಿಕ ದಿನಕ್ಕೆರಡು ಬಾರಿ ಬಾಯಿಯನ್ನು ಮುಕ್ಕಳಿಸಿ. ಇದ-ರಿಂದ ಗಂಟಲು ಕೆರೆತ, ಕಫ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ ಹಾಗೂ ಕೆಮ್ಮು ಕಡಿಮೆಯಾಗುತ್ತದೆ.

ಲವಂಗ ಮತ್ತು ಜೇನು: ಜೇನು

ಮತ್ತುಲವಂಗದಲ್ಲಿರುವಬ್ಯಾಕ್ಟಿ? ರಿಯಾ ನಿವಾರಕಗುಣಗಂಟಲ ಕೆರೆತಕ್ಕೆ ಅತ್ಯಂತ ಸಮರ್ಥವಾದ ಮನೆಮದ್ದಾಗಿದೆ. ಸೋಂಕು ಹೆಚ್ಚಾಗಿ ಗಂಟಲಿಗೆ ಆಗಿರುವ ನೋವನ್ನು ಶಮನಗೊಳಿಸಲು, ಕಟ್ಟಿಕೊಂಡಿದ್ದ ಕಫವನ್ನು ಸಡಿಲಗೊಳಿಸಿ ನಿವಾರಿಸಲು ಶಕ್ತವಾಗಿದೆ.ಅಲ್ಲದೇ ಮುಂದೆ ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ರೋಗನಿರೋಧಕಶಕ್ತಿಯನ್ನೂ ಬಲಪಡಿಸುತ್ತದೆ. ಒಂದು ಚಮಚ ಜೇನಿನಲ್ಲಿ ಒಂದು ಲವಂಗವನ್ನು ಮುಳುಗಿಸಿ ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನಬೆಳಿಗ್ಗೆಲವಂಗವನ್ನು ಜೇನಿನೊಳಗೇ ಪುಡಿಯಾಗಿಸಿ ಹಾಗೇ ನೇರವಾಗಿ ಸೇವಿಸಿ.