
ಇಂಡಿ :ಜು.೨: ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ ಗೌರವಾನ್ವಿತ ಶಿಕ್ಷಕ ಶ್ರೀ ಶಿವಪುತ್ರ ತಂದೆ ಗಿರಿಜಪ್ಪ ಮಂಗಳೂರು ಅವರು ನಿವೃತ್ತಿ ಹೊಂದಿ ನಿರ್ಗಮನಿಸುತ್ತಿರುವ ಹಿನ್ನಲೆ ಲೋಣಿ ಗ್ರಾಮದ ಸಮಸ್ತ ನಾಗರಿಕರು ಹಾಗೂ ಶಾಲೆಯ ಸಿಬ್ಬಂದಿಗಳು ಮತ್ತು ಲಚ್ಯಾಣ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಸೇರಿ ತಾಲೂಕಿನ ಲೋಣಿ ಗ್ರಾಮದಲ್ಲಿ ಶ್ರೀ ಶಿವಪುತ್ರ ಮಂಗಳೂರು ದಂಪತಿಗಳಿಗೆ ಗೌರವ ಸಮರ್ಪಣೆ ಮಾಡಿ ಗೌರವ ಸಲ್ಲಿಸಿದರು. ೧೬ ಪೆಬ್ರುವರಿ ೧೯೯೬ರಂದು ಚಿಕ್ಕಮಂಗಳೂರು ಜಿಲ್ಲೆಯ ಮೋಡಿಗೇರಿ ತಾಲೂಕಿನ ಹೊರನಾಡು ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕನಗೋಡೆಯಲ್ಲಿ ಪವಿತ್ರವಾದ ಶಿಕ್ಷಣ ವೃತ್ತಿ ಜೀವನವನ್ನು ಆರಂಬಿಸಿ ಲಚ್ಯಾಣ, ಬರಗೂಡಿ, ಲೋಣಿ ಕೆ ಡಿ ಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ೨೦೨೩ರಿಂದ ಪ್ರಭಾರ ಮುಖೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಹೀಗೆ ಒಟ್ಟು ೨೯ವರ್ಷ್ ೪ತಿಂಗಳು ೧೪ದಿನಗಳು ಸಾರ್ಥಕವಾಗಿ ಅನುಫಮ ಸೇವೆ ಸಲ್ಲಿಸಿ ದಿನಾಂಕ ೩೦/೦೬/೨೦೨೫ರಂದು ಶಿಕ್ಷಕ ವೃತ್ತಿಯಿಂದ ವಿಧಾಯ ಹೇಳಿದರು. ಈ ಕಾರ್ಯಕ್ರಮ ದ ಸಾನಿಧ್ಯ ವಹಿಸಿದ ರಾಚಯ್ಯ ಸ್ವಾಮಿ ಲೋಣಿ ಕೆ ಡಿ, ಈ ಸಭೆಯ ಉದ್ಘಾಟನೆ ಯನ್ನು ಮೋಹನ್ ಬೀಸೆ, ಹಾಗೂ ಸುರೇಶ ಜಾಧವ ಅಧ್ಯಕ್ಷರು ಗ್ರಾಮ ಪಂಚಾಯತಿ ಲಚ್ಯಾಣ, ಅಭಿಮನ್ಯ ಖಾರತ್, ಅಶೋಕಗೌಡ ಪಾಟೀಲ, ಭೀಮರಾವ ಬನಸೋಡೆ, ರಮೇಶ ದ್ಯಾಮಗೊಂಡ, ಸಿದ್ದರಾಮ ಭೀಸೆ, ರತಿಲಾಲ್ ಪಾಟೀಲ, ಎಸ್ ಜಿ ಚೋರಗಿ ಸಿ ಆರ್ ಸಿ, ರಾಜ್ಯಸಾಬ್ ನದಾಫ್, ಪ್ರಕಾಶ ಮಸಳಿ, ವೀರಭದ್ರ ವಾಘಮೋರೆ, ವಿನೋದ ಬನಸೋಡೆ, ಶಿವಾನಂದ ಸಿಂಗೆ ಲಚ್ಯಾಣ ಸೇರಿದಂತೆ ಅನೇಕ ಜನರು ಬಾಗವಹುಸಿದರು ಇದ್ದರು.