
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೧೮ : ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದಿಂದ ಇದ್ದರೆ ಮಾತ್ರ ತಾವು ಸಂಪಾದಿಸಿದ ಐಶ್ವರ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರೂ ಬೆಳಗಿನ ಸಮಯದಲ್ಲಿ ವಾಯುವಿಹಾರ, ಯೋಗ,ಧ್ಯಾನ, ಪ್ರಾಣಾಯಾಮ ಮಾಡುವುದರ ಮೂಲಕ ಆರೋಗ್ಯ ಭಾಗ್ಯವನ್ನು ಹೊಂದಬೇಕೆAದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ನ ಡಾ. ಬಿ.ಎಂ ಪಾಟೀಲ್ ಗುರೂಜಿ ಹೇಳಿದರು.
ಮಂಗಳವಾರ ನಗರದ ಐತಿಹಾಸಿಕ ಸ್ಮಾರಕ ಗೋಲಗುಂಬಜ್ ವಾಯುವಿಹಾರಿಗಳನ್ನು ಉದ್ದೇಶಿಸಿ ಆರೋಗ್ಯ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಬ್ಯಾಂಕಿನ ಹಿಂದಿನ ಅಧ್ಯಕ್ಷ ವಿಜಯಕುಮಾರ ಇಜೇರಿ, ಮಾಜಿ ಉಪ ಮಹಾಪೌರ ದಿನೇಶ್ ಹಳ್ಳಿ, ಬಾಪುಗೌಡ ಪಾಟೀಲ, ಡಾ. ರವೀಂದ್ರ ಬೆಳ್ಳಿ, ಡಾ. ಎಸ್.ಜಿ . ಅಸ್ಕಿ ,ಎನ್ .ಡಿ .ಮಸೂತಿ ಚಂದ್ರಶೇಖರ ಸಿಂಧೂರ, ಶಿವಾನಂದ ಮಾಳಗೊಂಡ, ಮಾಂತೇಶ ಪಟ್ಟಣಶೆಟ್ಟಿ ಸೇರಿದಂತೆ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

























