Home ಜಿಲ್ಲೆ ಭಾವೈಕ್ಯತೆಯಿಂದ ಸಮಾಜದಲ್ಲಿ ಸಾಮರಸ್ಯ: ಶಿವಲಿಂಗಯ್ಯ ಸ್ವಾಮಿ

ಭಾವೈಕ್ಯತೆಯಿಂದ ಸಮಾಜದಲ್ಲಿ ಸಾಮರಸ್ಯ: ಶಿವಲಿಂಗಯ್ಯ ಸ್ವಾಮಿ

ಔರಾದ್: ಮಾ.17:ಪರಸ್ಪರ ಪ್ರೀತಿ, ಪ್ರೇಮ, ಸೌಹಾರ್ದತೆಯಿಂದ ಬದುಕಿ ಬಾಳಬೇಕಾದರೆ ಭಾವೈಕ್ಯತೆಯಿಂದ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ ಎಂದು ಶಿವಲಿಂಗಯ್ಯ ಸ್ವಾಮಿ ಹೇಳಿದರು.

ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ರವಿವಾರ ಸಾಯಂಕಾಲ ನಡೆದ ಭಾವೈಕ್ಯತೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜೀವನದಲ್ಲಿ ಪರೋಪಕಾರ ಮಾಡುವ ಜತೆಗೆ ಸಾಮರಸ್ಯ ಇದ್ದರೆ ಮಾತ್ರ ಶಾಂತಿಯಿಂದ ನೆಲೆಸಲು ಸಾಧ್ಯ ಎಂದು ಹೇಳಿದರು.

ಬಸವರಾಜ ಹೋನ್ನಶಟ್ಟೆ ಮಾತನಾಡಿ, ಬಸವಾದಿ ಶರಣರ ಕಾಲದಿಂದಲೂ ಸಮಾನತೆ ಕುರಿತು ಪ್ರತಿಪಾದನೆಯಾಗುತ್ತಿದೆ. ಇಂತಹ ಭಾವೈಕ್ಯತೆ ಇಫ್ತಾರ್ ಕೂಟದಿಂದ ಪರಸ್ಪರ ಸಂಬಂಧ ವೃದ್ಧಿಯಾಗುವುದರ ಜತೆಗೆ ಸೌಹಾರ್ದತೆ ಹೆಚ್ಚುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಫಿಜ್ ರೈಹಾನ ಅನ್ಸಾರಿ, ಬಾಬುಮಿಯ್ಯಾ, ಘುಡುಸಾಬ, ಖಂಡೆರಾವ ಪಾಟೀಲ, ಬಂಡೆಪ್ಪ ದೇಗಲವಾಡೆ, ಹುಸೇನಸಾಬ್, ಪ್ರಕಾಶ ನಾಗಶಟ್ಟೆ, ಬಸವರಾಜ ದೇಗಲವಾಡೆ, ಶೇಖ್ ಅಹಮ್ಮದ್, ಅಜಿಮುದ್ದಿನ್, ಫತ್ರುಸಾಬ, ನಿಸಾರ್ ಅಹ್ಮದ್, ವಿಜಯಕುಮಾರ ಇಬಿತವಾರ್, ಮಲ್ಲಿಕಾರ್ಜುನ್ ದೇಗಲವಾಡೆ, ಸಲಿಮಪಾಶಾ, ಬಿಲಾಲ್, ಆಯಾಜಪಾಷಾ, ಆಫೆÇ್ರೀಜ್, ಅತಿಕ್, ಅವೇಸ್, ಅಕ್ಬರ್, ಲತೀಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.