ಚನ್ನಮ್ಮನ ಕಿತ್ತೂರು,ಜು.೧: ೩೭ ವರ್ಷ ಕಿತ್ತೂರು ನಾಡ ವಿದ್ಯಾರ್ಥಿಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ಪ್ರಾಧ್ಯಾಪಕರಾಗಿ ಪದೋನ್ನತಿ ಪಡೆದು ಸೇವಾ ವಯೋನಿವೃತ್ತಿ ಹೊಂದಿರುವ ಡಾ.ಕೆ.ಆರ್. ಮೆಳವಂಕಿ ಇವರ ಶಿಕ್ಷಕ ವೃತ್ತಿ ಪಯಣ ಅನುಪಮವಾದ್ದು ಎಂದು ಕಸಾಪ ಅಧ್ಯಕ್ಷ ಡಾ. ಎಸ್,ಬಿ. ದಳವಾಯಿ ಹೇಳಿದರು.
ಕೋಟೆ ಆವರಣದಲ್ಲಿ ಕಸಾಪ ಸಂಯುಕ್ತ ಆಶ್ರಯದಲ್ಲಿ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಮೆಳವಂಕಿಯವರು ಕೇವಲ ಬೋಧನೆಯಲ್ಲಿ ನಿರತರಾಗದೆ ಇತರ ಚಟುವಟಿಕೆಗಳಲ್ಲಿ ತೊಡಗಿ ಸಾವಿರಾರು ವಿದ್ಯಾರ್ಥಿಗಳ ವೈಕತಿತ್ವ ವಿಕಸನಕ್ಕೆ ಸಾಕ್ಷಿಯಾಗಿದ್ದಾರೆ. ಎನ್‌ಸಿಸಿ ಅಧಿಕಾರಿಯಾಗಿ ವಿಶ್ವವಿದ್ಯಾಲಯ ಬಿಓಎಸ್ ಸದಸ್ಯರಾಗಿ, ಪರಿಕ್ಷಾ ವಿಚಕ್ಷಕ ಚೇರಮನ್‌ರಾಗಿ ಮೌಲ್ಯಮಾಪನ ಹಾಗೂ ಕಸಾಪ ನಿರ್ದೇಕರಾಗಿ ಬಹುಮುಖ ಪ್ರತಿಭೆ ಹೊಂದಿದ ಇವರು. ತಮ್ಮೋಂದಿಗೆ ಕಾರ್ಯನಿರ್ವಹಿಸಿದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಅವರ ವಿಶ್ರಾಂತಿ ಜೀವನಕ್ಕೆ ಶುಭ ಕೋರಿದರು.
ಸನ್ಮಾನ ಸ್ವಿಕರಿಸಿ ಮಾತನಾಡಿದ ಡಾ. ಆರ್.ಕೆ.ಮೆಳವಂಕಿ ಐತಿಹಾಸಿಕ ಕಿತ್ತೂರಿನಲ್ಲಿ ನನ್ನ ಸುಧೀರ್ಘ ಅವಧಿಯ ಶಿಕ್ಷಕ ವೃತ್ತಿ ಸಂತಸ ತಂದಿದೆ ಎಂದರು.
ಕ್ಯೂರೇಟರ್ ರಾಘವೇಂದ್ರ, ಮಂಜುನಾಥ ಕಳಸನ್ನನವರ ನಾಗಯ್ಯ ಹುಲೇಪ್ಪನವರಮಠ, ಮಹೇಶ ಹೊಂಗಲ, ಬಸವರಾಜ ಬಿದರಿ, ರಗಟಿ ರಾಜಶೇಖರ, ಪ್ರಕಾಶ ಹೊನ್ನಪ್ಪನವರ ಇನ್ನಿತರರಿದ್ದರು.