Home ಜಿಲ್ಲೆ ಕಲಬುರಗಿ ಮಾನವೀಯತೆ ಮೆರೆದ ಗುಲಬರ್ಗಾ ಯುತ್ ವೆಲ್ಫೇರ್ ಸೊಸೈಟಿ

ಮಾನವೀಯತೆ ಮೆರೆದ ಗುಲಬರ್ಗಾ ಯುತ್ ವೆಲ್ಫೇರ್ ಸೊಸೈಟಿ

ಕಲಬುರಗಿ,ಮಾ.18-ನಗರ ಹೊರವಲಯದ ಕೇಂದ್ರ ಕಾರಾಗೃಹದ 4 ಜನ ಶಿಕ್ಷಾ ಬಂದಿಗಳು ಆರ್ಥಿಕವಾಗಿ ದುರ್ಬಲರಾದ ಕಾರಣ ದಂಡ ಪಾವತಿಸದೇ ಕಾರಾಗೃಹದಲ್ಲಿಯೇ ಉಳಿದಿದನ್ನು ಗಮನಿ ಕಾರಾಗೃಹದ ಮುಖ್ಯಸ್ಥರಾದ ಕೆ.ಸುರೇಶ್ ಅವರು ಸ್ಥಳೀಯ ಸಂಸ್ಥೆಗಳಾದ ಗುಲಬರ್ಗಾ ಯುತ್ ವೆಲ್‍ಫರ್ ಸೊಸೈಟಿ ಅವರನ್ನು ಸಂಪರ್ಕಿಸಿ ಸದರಿ ಬಂದಿಗಳಾದ ದತ್ತಾತ್ರಿ ತಂದೆ ಸುಭಾಷ ಈತನ ದಂಡ ಮೊತ್ತ ರೂ. 13,000.00, ತಾಜೋದ್ದೀನ್ ಮುಲ್ಲಾ ತಂದೆ ಸಾಧಿಕ್ ಹುಸೇನಿ ಮುಲ್ಲಾ ಈತನ ದಂಡ ಮೊತ್ತ ರೂ. 26,000.00, ಸಾಯಿಬಣ್ಣ ತಂದೆ ಲಕ್ಕಪ್ಪ ತಳವಾರ ಈತನ ದಂಡ ಮೊತ್ತ ರೂ. 5,000.00 ಮತ್ತು ಶಿಕ್ಷಾ ಬಂದಿ ಶಮಶೀರ್ ಖಾನ್ ತಂದೆ ಗಪೂರ್‍ಖಾನ್ ಈತನ ದಂಡ ಮೊತ್ತ ರೂ. 10,000.00, ಒಟ್ಟು 54,000.00 ಮೊತ್ತವನ್ನು ಪಾವತಿಸಲು ಕೋರಿದ್ದರು. ಅದರಂತೆ ಗುಲಬರ್ಗಾ ಯುತ್ ವೆಲೆಫರ್ ಸೊಸೈಟಿ ಅರ್ಥಿಕವಾಗಿ ದುರ್ಬಲರಾದ ಬಂದಿಗಳ ದಂಡದ ಹಣ ಪಾವತಿಸಿ ಬಂದಿಗಳು ಬಿಡುಗಡೆಯಾಗಲು ಸಹಕರಿಸುವುದರ ಮೂಲಕ ಮಾನವೀಯತೆಯನ್ನು ಮೆರೆದಿದೆ.
ಇನ್ನೋಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಕೆಲಸವನ್ನು ಮಾಡಿದ ಗುಲಬರ್ಗಾ ಯುತ್ ವೆಲ್‍ಫರ್ ಸೊಸೈಟಿಗೆ ಕಾರಾಗೃಹದ ಮುಖ್ಯಸ್ಥರಾದ ಕೆ. ಸುರೇಶ್ ರವರು ಇಲಾಖೆಯ ವತಿಯಿಂದ ಅವರಿಗೆ ತುಂಬು ಹೃದಯದಅಭಿನಂದನೆಗಳನ್ನು ಸಲ್ಲಿಸಿದರು.
ಹಣ ಪಾವತಿಸುವ ಸಂದರ್ಭದಲ್ಲಿ ಈ ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬಳೆ, ಸಹಾಯಕ ಅಧೀಕ್ಷಕರುಗಳಾದ ಬಿ. ಸುರೇಶ್ ಮತ್ತು ಚನ್ನಪ್ಪ ಯಟಗಾರ್, ಸಂಸ್ಥೆಯ ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್ ಹಾಗೂ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ಇವರು ಭಾಗವಹಿಸಿದರು.