Home ಜಿಲ್ಲೆ ಕಾಗದದಲ್ಲಿ ಭರ್ಜರಿ ಯೋಜನೆ – ನೆಲದಲ್ಲಿ ಕಳಪೆ ಕಾಮಗಾರಿ

ಕಾಗದದಲ್ಲಿ ಭರ್ಜರಿ ಯೋಜನೆ – ನೆಲದಲ್ಲಿ ಕಳಪೆ ಕಾಮಗಾರಿ

ಸುಧೀರ್ ಕೋಟೆ ಎಸ್.ಕೆ.
ಯಾದಗಿರಿ:ಮಾ.೧೮: ಶಹಾಪುರ ತಾಲೂಕಿನ ದೊರನಹಳ್ಳಿ ಪಟ್ಟಣದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿ ಇದೀಗ ಗಂಭೀರ ಪ್ರಶ್ನೆಗಳನ್ನು ಹುಟ್ಟಿಸಿದೆ. ಕಾಗದದಲ್ಲಿ ಭರ್ಜರಿ ಯೋಜನೆಯಾಗಿ ಘೋಷಿಸಲ್ಪಟ್ಟ ಈ ಆಸ್ಪತ್ರೆ ಕಟ್ಟಡ, ನೆಲಮಟ್ಟದಲ್ಲಿ ಕಳಪೆ ಕಾಮಗಾರಿಯ ಉದಾಹರಣೆಯಾಗಿ ಪರಿಣಮಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಗ್ರಾಮೀಣ ಪ್ರದೇಶದ ಜನತೆಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ?೬.೫೦ ಕೋಟಿ ವೆಚ್ಚದಲ್ಲಿ ಈ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಯೋಜನೆಯ ಪ್ರಕಾರ, ೩೦ರಿಂದ ೫೦ ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ, ಪ್ರಸೂತಿ ವಿಭಾಗ, ಸಾಮಾನ್ಯ ಚಿಕಿತ್ಸಾ ವಿಭಾಗ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿತ್ತು.

ಆದರೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯರು ಮತ್ತು ಸಾರ್ವಜನಿಕರು, ನಿರ್ಮಾಣದ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿರುವುದು, ಸಿಮೆಂಟ್ ಮಿಶ್ರಣ ಸಮರ್ಪಕವಾಗಿಲ್ಲದಿರುವುದು, ಕಂಬಗಳು ಮತ್ತು ಸ್ಲ್ಯಾಬ್ ನಿರ್ಮಾಣದಲ್ಲಿ ತಾಂತ್ರಿಕ ಮಾನದಂಡಗಳನ್ನು ಪಾಲಿಸದಿರುವುದು ಕಂಡುಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯ ನಿವಾಸಿ ಭೀಮು ಸಾವೂರು ಮಾತನಾಡಿ, “ಈ ಕಟ್ಟಡ ಸಂಪೂರ್ಣವಾಗಿ ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಗಾತ್ರದ ಪ್ರಮಾಣವೂ ಸರಿಯಾಗಿ ಇಲ್ಲ. ಇಂತಹ ನಿರ್ಲಕ್ಷ್ಯದಿಂದ ನಿರ್ಮಾಣವಾಗುತ್ತಿರುವ ಕಟ್ಟಡ ಭವಿಷ್ಯದಲ್ಲಿ ಅಪಾಯಕಾರಿಯಾಗಬಹುದು. ತಕ್ಷಣ ಜಿಲ್ಲಾಡಳಿತ ಹಸ್ತಕ್ಷೇಪ ಮಾಡಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ತಾಂತ್ರಿಕ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

ಇನ್ನಿತರ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿ, “ಜನರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ಈ ಯೋಜನೆಯಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಕಾಮಗಾರಿಯ ಎಸ್ಟಿಮೇಟ್ ಕಾಫಿ ಕೇಳಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದು ಸಂಶಯಗಳಿಗೆ ಕಾರಣವಾಗಿದೆ” ಎಂದು ಆರೋಪಿಸಿದ್ದಾರೆ.

ತಜ್ಞರ ಅಭಿಪ್ರಾಯದ ಪ್ರಕಾರ, ಆರೋಗ್ಯ ಕೇಂದ್ರಗಳAತಹ ಸಾರ್ವಜನಿಕ ಕಟ್ಟಡಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಭವಿಷ್ಯದಲ್ಲಿ ದೊಡ್ಡ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಮಳೆಗಾಲ ಅಥವಾ ಭೂಕಂಪದAತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಇಂತಹ ಕಟ್ಟಡಗಳು ದುರ್ಬಲಗೊಳ್ಳುವ ಅಪಾಯ ಹೆಚ್ಚಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯರು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ, ಕಾಮಗಾರಿಯ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಕಳಪೆ ಕಾಮಗಾರಿ ದೃಢಪಟ್ಟಲ್ಲಿ ಗುತ್ತಿಗೆದಾರರು ಹಾಗೂ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

“ಆಸ್ಪತ್ರೆ ಕಟ್ಟಡ ಎಂದರೆ ಕೇವಲ ಇಟ್ಟಿಗೆ-ಸಿಮೆಂಟ್ ಅಲ್ಲ, ಅದು ಜನರ ಜೀವ ಉಳಿಸುವ ಕೇಂದ್ರ. ಇಂತಹ ಮೂಲಸೌಕರ್ಯಗಳಲ್ಲಿ ಗುಣಮಟ್ಟದ ಮೇಲೆ ಯಾವುದೇ ರೀತಿಯ ರಾಜಿ ಆಗಬಾರದು” ಎಂದು ಸಾರ್ವಜನಿಕರು ಒತ್ತಿ ಹೇಳಿದ್ದಾರೆ.

ಈ ಕುರಿತು ಇಂಜಿನಿಯರ್ ರವಿ ಯಾದವ್ ಹಾಗೂ ಆಡಳಿತಾಧಿಕಾರಿ ಡಾ. ಗಂಗಾಧರ್ ಶೆಟ್ರಿಕಿ ಅವರ ಗಮನಕ್ಕೆ ವಿಷಯವನ್ನು ತರಲಾಗಿದ್ದು, ಸಂಬAಧಪಟ್ಟ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆಗಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ.