
ಕಲಬುರಗಿ,ಫೆ.7-ಕಾರಾಗೃಹದ ಬಂಧಿ ನಿವಾಸಿಗಳಿಗೆ ಹೊನ್ನಕಿರಣಗಿ ಆಸ್ಪತ್ರೆ ವತಿಯಿಂದ ಶುಕ್ರವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿ ಕೊಳ್ಳಲಾಯಿತು.
ಶಿಬಿರದಲ್ಲಿ ಚರ್ಮ ರೋಗ, ಬಿಪಿ, ಶುಗರ್ ಹಾಗೂ ಇನ್ನೀತರೆ ಸಾಮಾನ್ಯ ರೋಗಗಳಿಗೆ ಸೇರಿದಂತೆ ಸುಮಾರು 80 ಜನ ಬಂಧಿಗಳಿಗೆ ಡಾ.ಗೀತಾ ಹಾಗೂ ಸಿಬ್ಬಂದಿಗಳಿಂದ ಚಿಕಿತ್ಸೆ ಕೊಡಿಸಿ, ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ಶಿಬಿರದಲ್ಲಿ ಪ್ರಭಾರಿ ಕಾರಾಗೃಹದ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ, ಸಹಾಯಕ ಅಧೀಕ್ಷಕ ಬಿ. ಸುರೇಶ್ ಮತ್ತು ಚನ್ನಪ್ಪ ಯಟಗಲ್, ಕಾರಾಗೃಹದ ವೈದ್ಯಾಧಿಕಾರಿಗಳಾದ ಡಾ. ಆನಂದ ಅಡಕಿ ಡಾ. ರವಿಂದ್ರ ಬನ್ನೇರ, ಹಾಗೂ ಜೈಲರ್‍ಗಳಾದ ಸುನಂದ, ಸಾಗರ ಪಾಟೀಲ, ಪುಂಡಲಿಕ ಟಿ.ಕೆ, ಶಾಮ ಬಿದ್ರಿ, ಸಹಾಯಕ ಜೈಲರ್‍ಗಳಾದ ರಾಮು ಎಲ್. ರಾಠೋಡ್, ನಾಗರಾಜ ಮುಲಗೆ, ಶಿಕ್ಷಕರು ಹಾಗೂ ಕಾರಾಗೃಹದ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.























