ಜಾನಪದಕ್ಕೆ ಜಾತಿ ಬೇಧವಿಲ್ಲ : ಡಾ. ಎಸ್. ಬಾಲಾಜಿ

ಚಿಂಚೋಳಿ,ಫೆ.7: ಮಾನವ ಜೀವನವು ಹುಟ್ಟಿನಿಂದ ಸಾಯುವ ತನಕ ಜಾನಪದ ಸಂಸ್ಕøತಿಯಿಂದ ಆವರಿಸಿಕೊಂಡಿದೆ. ತಾಯಿ ಗರ್ಭದಿಂದ ಭೂಗರ್ಭದವರೆಗೆ ಜಾನಪದವೇ ಮಾನವನ ಜೊತೆ ಸಾಗುತ್ತದೆ. ಜಾನಪದದಲ್ಲಿ ಸುಳ್ಳಿಲ್ಲ, ಮೋಸವಿಲ್ಲ. ಜಾನಪದಕ್ಕೆ ಜಾತಿಯ ಬೇಧವಿಲ್ಲ; ಅದು ಎಂದಿಗೂ ಸಾಯುವುದಿಲ್ಲ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.
ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ತಾಲೂಕಾ ಘಟಕ ಚಿಂಚೋಳಿ ಸಂಯುಕ್ತಾಶ್ರಯದಲ್ಲಿ ಸುಲೇಪೇಟ ಖಟ್ವಾಂಗೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಹಾಗೂ ದಶಮಾನೋತ್ಸವ ಸಂಭ್ರಮಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಳ್ಳಿಗಳಲ್ಲೇ ಅಪಾರ ಜಾನಪದ ಪ್ರತಿಭೆಗಳು ಅಡಗಿಕೊಂಡಿವೆ. ಜಾನಪದವು ಹಳ್ಳಿಜೀವನದ ಅವಿಭಾಜ್ಯ ಅಂಗವಾಗಿದ್ದು, ಸಮಾಜದ ಮೌಲ್ಯಗಳನ್ನು ತಲೆಮಾರಿಗೆ ತಲೆಮಾರಿಗೆ ಸಾಗಿಸುವ ಶಕ್ತಿಯಾಗಿದೆ ಎಂದರುಇದೇ ಸಂದರ್ಭದಲ್ಲಿ ದಶಮಾನೋತ್ಸವ ಪ್ರಶಸ್ತಿ ಪ್ರದಾನ, ಪದಾಧಿಕಾರಿಗಳ ಪದಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಸಾನಿಧ್ಯ ವಹಿಸಿದ್ದ ಖಟ್ವಾಂಗೇಶ್ವರ ಮಠದ ಪ್ರಭುದೇವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಕ.ಜಾ.ಪ. ತಾಲೂಕಾಧ್ಯಕ್ಷ ಮಹಾದೇವಸ್ವಾಮಿ, ಸುರೇಶ್ ಎಸ್.ಎನ್. ವೈದ್ಯರಾಜ, ಮಹಾರುದ್ರಪ್ಪ ದೇಸಾಯಿ, ಸಿದ್ದಯ್ಯ ಕಪೂರ, ಮುರಗೇಶ್ ಕುಕಡಿ, ಶರಣು ಸ್ವಂತ, ಶಿವಕುಮಾರ ಕೊತಪೇಟ, ನಾಮದೇವ ಪಾಟೀಲ್, ನಾಗಶೆಟ್ಟಿ, ಧರ್ಮರಾಯ ಭದ್ರಗೊಂಡ, ಬಾಬು ಕುಂಬಾರ, ಪರಮೇಶ್ವರ, ರವಿ ಪಾಟೀಲ್, ದತ್ತಾತ್ರೇಯ ಕಳಸಕರ್, ರಾಮಯ್ಯಸ್ವಾಮಿ, ಚನ್ನಯ್ಯಸ್ವಾಮಿ ಸ್ಥಾವರ, ಚೆನ್ನವೀರ ಬಿ. ಕಣ್ಣಗಿ, ಸಂಜೀವಕುಮಾರ ಪಾಟೀಲ್, ಸಂತೋಷ್ ಮಠಪತಿ, ಶಿವಕುಮಾರ ಸ್ವಾಮಿ, ಮಾಣಿಕರಾವ್ ವಿಶ್ವಕರ್ಮ, ಮಾದೇವಯ್ಯ ಮಠಪತಿ, ಎಂ.ಬಿ. ನಿಂಗಪ್ಪ, ಶಿವಕುಮಾರಸ್ವಾಮಿ ಆರ್, ಹೆಚ್.ಬಿ. ಪಾಟೀಲ್, ಕೆ.ಎಸ್. ಕೌಜಲಗಿ, ಅಣವೀರಪ್ಪ ಎಸ್, ಕರಬಸಯ್ಯ ಮಠಪತಿ, ಮಡಿವಾಳ ಕಳಸ್ಕರ್, ಶರಣಪ್ಪ ಮನ್ನಳ್ಳಿ, ಗುರುರಾಜ್ ಜೋಶಿ, ಶರಣಯ್ಯ ಮಠಪತಿ, ಸಿದ್ದಯ್ಯ ಚೌಕಿಮಠ, ಸೇರಿದಂತೆ ಹಲವರು ಉಪಸ್ಥಿತರಿದ್ದರು.