
ಕಲಬುರಗಿ,ಜು.13: ಅಫಜಲಪುರ ತಾಲೂಕಿನ ಗೊಬ್ಬೂರ ( ಬಿ) ಗ್ರಾಮದ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸಾಂಸ್ಕøತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಡತೆಗನೂರು ಗ್ರಾಮದಲ್ಲಿ ಆಯೋಜಿಸಿದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಗುರುನಾಥ್ ಹೂಗಾರ್ ಉದ್ಘಾಟಿಸಿದರು
ಅಧ್ಯಕ್ಷತೆಯನ್ನು ಗುರು ನರಣಿ ವಹಿಸಿದರು ಅತಿಥಿಗಳಾದ ಶಿವಕುಮಾರ್ ಸಾಗನೂರು ಮಾತನಾಡಿ ಸಂಗೀತ ಸರ್ವರನ್ನ ಸೆಳೆಯುವ ಶಕ್ತಿ ಇದೆ ಎಂದರು. ಗ್ರಾಮದ ಪ್ರಮುಖರಾದ ಬಂಡೆಣ್ಣ ಶಿರವಾಳ ಶರಣಬಸಪ್ಪ ಸಿರವಾಳ ಬಸವರಾಜ್ ಕೆಸರಟಗಿ ಉದಯಕುಮಾರ್ ಹಿಪ್ಪರಗಿ ಸಿದ್ದರಾಮ ಅಪ್ಪಾಸಾಬ್ ಪಾಟೀಲ್ ನಿರೂಪಣೆ ಶರಣಬಸಪ್ಪ ನರೋಣಿ ಸಂಸ್ಥೆಯ ಅಧ್ಯಕ್ಷರಾದ ಶಿವಲಿಂಗ ಶಾಸ್ತ್ರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಕಥಾ ಕೀರ್ತನೆ ತೋಟಯ್ಯ ಶಾಸ್ತ್ರಿಗಳು ಅಬ್ಬೆ ತುಮಕೂರ್, ಜಾನಪದ ಗೀತೆ ಶ್ರೀಶೈಲ್ ಗವಾಯಿಗಳು ಗೌಡ್ಗಾವ್, ಸುಗಮ ಸಂಗೀತ ಚೇತನ್ ಕುಮಾರ್ ಬೀದಿಮನಿ, ತತ್ವಪದ ಗಾಯನ ವಿರುಪಾಕ್ಷಯ್ಯ ಗೌಡಗಾಂವ, ಜಾನಪದ ಗೀತೆ ಮೋನೇಶ್ ಕುಮಾರ್ ಪರ್ತಾಬಾದ್, ಹಾರ್ಮೋನಿಯಂ ಸಾಥ್ ಸಂತೋಷ್ ಸಿಂದಗಿ, ತಬಲಾಸಾಥ್ ಯೋಗಿ ರಾಜೇಂದ್ರ ಕಡಣಿ .ವೀರೇಶ್ ದನ್ನೂರ್ ರಿದಂ ಪ್ಯಾಡ್ ಸುರೇಶ್ ಆಳಂದ್ ತೆಗನೂರು ಅವರು ನಡೆಸಿಕೊಟ್ಟರು.ಗ್ರಾಮದ ಸಮಸ್ತ ಜನಗಳ ಮಧ್ಯೆ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರೆಂದು ಬಸವರಾಜ್ ಶೀಲವಂತ್ ತಿಳಿಸಿದ್ದಾರೆ.




























