Home ಕ್ರೈಂ ಸುದ್ದಿಗಳು ಅಂಗಡಿಗಳಿಗೆ ಬೆಂಕಿ: ಆಪಾರ ಹಾನಿ

ಅಂಗಡಿಗಳಿಗೆ ಬೆಂಕಿ: ಆಪಾರ ಹಾನಿ

ಬೀದರ್: ಮೇ.13: ತಾಲ್ಲೂಕಿನ ಬೆನಕನಳ್ಳಿ ಗ್ರಾಮದಲ್ಲಿ ನಾಲ್ಕು ಅಂಗಡಿಗಳಿಗೆ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.
ಭವಾನಿ ಮಾತೆ ಮಂದಿರದ ಹಿಂಭಾಗದಲ್ಲಿ ಇರುವ ತಮ್ಮ ಜನರಲ್ ಸ್ಟೋರ್, ಕಿರಾಣಾ, ಶುದ್ಧ ನೀರಿನ ಘಟಕ ಹಾಗೂ ಐಸ್‍ಕ್ರೀಂ ಆಯಿಂಡ್ ಜೂಸ್ ಅಂಗಡಿಗಳು ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದಾಗಿ ಹೊತ್ತಿಕೊಂಡ ಬೆಂಕಿಗೆ ಆಹುತಿಯಾಗಿವೆ ಎಂದು ಅಂಗಡಿಗಳ ಮಾಲೀಕ ಅಜಯಸಿಂಗ್ ಜಯಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅನಾಹುತದಿಂದ ತಮಗೆ ಸುಮಾರು ರೂ. 30 ಲಕ್ಷದಿಂದ ರೂ. 35 ಲಕ್ಷ ನಷ್ಟವಾಗಿದೆ ಎಂದು ಹೇಳಿದ್ದಾರೆ.
ತಹಶೀಲ್ದಾರ್ ರವೀಂದ್ರ ದಾಮಾ ಹಾಗೂ ಗ್ರಾಮ ಆಡಳಿತಾಧಿಕಾರಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪರಿಹಾರಕ್ಕೆ ಆಗ್ರಹ: ಅಗ್ನಿ ಅವಘಡದಿಂದ ಹಾನಿಗೊಳಗಾದ ಅಜಯಸಿಂಗ್ ಚೌಹಾಣ್ ಅವರಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒಬಿಸಿ ಆರ್ಮಿ ಜಿಲ್ಲಾ ಘಟಕದ ಅಧ್ಯಕ್ಷ ತಾನಾಜಿ ಸಗರ್ ಹಾಗೂ ಕಾರ್ಯಾಧ್ಯಕ್ಷ ರಾಜಕುಮಾರ ಟಿಳ್ಳೆಕರ್ ಒತ್ತಾಯಿಸಿದ್ದಾರೆ.