Home ಜಿಲ್ಲೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೈಜ ಅನುಭವ ನೀಡಿದ ಕ್ಷೇತ್ರ ಭೇಟಿ

ವಿದ್ಯಾರ್ಥಿಗಳ ಅಧ್ಯಯನಕ್ಕೆ ನೈಜ ಅನುಭವ ನೀಡಿದ ಕ್ಷೇತ್ರ ಭೇಟಿ

ಗುರುಮಠಕಲ್:ಮಾ.೧೮:ಪಿಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆ ಮಿನಾಸಪುರ ವತಿಯಿಂದ ಒಂದು ದಿನದ ಕ್ಷೇತ್ರ ಭೇಟಿಯನ್ನು ದಿನಾಂಕ ೧೭-೦೩-೨೦೨೬ ರಂದು ಹಮ್ಮಿಕೊಳ್ಳಲಾಗಿತ್ತು. ಸದರಿ ಕ್ಷೇತ್ರ ಭೇಟಿಯನ್ನು ಬೀದರ್ ಜಿಲ್ಲೆಯ ಚಂದ್ರAಪಳ್ಳಿ ಡ್ಯಾಮ್, ತೋಟಗಾರಿಕೆ ಇಲಾಖೆ ಮತ್ತು ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಾಗಿ ಅಲ್ಲಿನ ಉಪನ್ಯಾಸಕರಾದ ಅಭಿಷೇಕ್ ಅವರೊಂದಿಗೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳನ್ನು ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. ಅದರಲ್ಲಿ ಪ್ರಾಣಿ ಜೀವಶಾಸ್ತ್ರ, ಪ್ರಾಣಿಗಳ ಶಸ್ತ್ರ ಚಿಕಿತ್ಸೆ, ಪ್ರಾಣಿ ಸಾಕಾಣಿಕೆಯ ಕ್ರಮಗಳು ಮುಂತಾದ ವಿಷಯಗಳನ್ನು ಸಾವಿವರವಾಗಿ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು. ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ ಈ ಕ್ಷೇತ್ರ ಭೇಟಿಯು ವಿದ್ಯಾರ್ಥಿಗಳ ಜೀವನದಲ್ಲಿ ಬಹಳಷ್ಟು ಪ್ರಭಾವ ಬೀರುತ್ತದೆ ಎಂದು ಕೊನೆಯಲ್ಲಿ ಮುಖ್ಯ ಗುರುಗಳು ಲಕ್ಮಣ್ಣ ಬಾವೂರು ಹಾಗೂ ಶಿಕ್ಷಕರು ತಮ್ಮ ಅನಿಸಿಕೆಯನ್ನು ಹಂಚಿಕೊAಡು ಭೇಟಿಯನ್ನು ಅರ್ಥಪೂರ್ಣಗೊಳಿಸಲಾಯಿತು.