
ನವಲಗುಂದ, ಜೂ28 : ಪಟ್ಟಣದ ಹೊರವಲಯದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಿತ ನಿಗಮದ 110 ಕೆ ವಿ ವಿದ್ಯುತ್ ವಿತರಣಾ ಕೇಂದ್ರದ ಅವರಣದಲ್ಲಿ ನೀರು ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಯನ್ನು ಹಾನಿ ಮಾಡಿದೆ ಎಂದು ರೈತ ಪ್ರಕಾಶ ಶಿಗ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು
ವಿದ್ಯುತ್ ವಿತರಣಾ ಕೇಂದ್ರದ ಅವರಣದುದ್ದಕ್ಕೂ ಜಾಲಿ ಕಂಠೀಗಳು ಬೆಳೆದಿದ್ದು ಮಳೆ ಬಂದ ಸಂದರ್ಭದಲ್ಲಿ ನೀರು ಹೊರ ಹೋಗದೆ ಅಪಾರ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದ್ದು ನೀರು ಹೊರ ಹೋಗದ ಕಾರಣ ಪಕ್ಕದಲ್ಲಿಯೇ ಇರುವ ನಮ್ಮ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಪ್ರತಿ ಮಳೆಗಾಲಕ್ಕೂ ಬೆಳೆಗಳನ್ನು ಹಾನಿ ಪಡೆಸುತ್ತಿದ್ದು ಲಕ್ಷಾಂತರ ರೂ ನಷ್ಟ ವಾಗುತ್ತಿದೆ ಈ ಕುರಿತು ಹಲವಾರು ಬಾರಿ ವಿತರಣಾ ಕೇಂದ್ರದ ಅಭಿಯಂತರರಿಗೆ ಮನವಿ ಮಾಡಿದರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಹಾಗಾಗಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವದಿಲ್ಲವೆಂದು ಪಟ್ಟು ಹಿಡಿದರು
ಸ್ಥಳದಲ್ಲಿದ್ದ ವಿತರಣಾ ಕೇಂದ್ರದ ಕಿರಿಯ ಅಭಿಯಂತರರಾದ ಶ್ರೀಶೈಲ ಗಾಜರೇ ಯವರೊಂದಿಗೆ ಗ್ರಾಮದ ಹಿರಿಯರು ಪ್ರತಿಭಟನಾ ನಿರತ ರೈತನೊಂದಿಗೆ ಮಾತನಾಡಿ ಮನವಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಶ್ರೀಶೈಲ ಗಾಜರೇ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ ಇದು ಸಿವಿಲ್ ಕಾಮಗಾರಿಯಾಗಿರುವುದರಿಂದ ಸಂಬಂದಿಸಿದ ಅಭಿಯಂತರರು ಸ್ಥಳಕ್ಕೆ ಆಗಮಿಸಿ ಶಾಶ್ವತ ಕಾಮಗಾರಿ ಮಾಡುವುದಾಗಿ ತಿಳಿಸಿದ್ದಾರೆ. ಈಗ ಸದ್ಯ ಆವರಣದಲ್ಲಿ ನಿಂತಿರುವನೀರನ್ನು ಪಕ್ಕದ ಜಮೀನಿಗೆ ಹೋಗದಂತೆ ಎರಡು ದಿನದಲ್ಲಿ ನೀರನ್ನು ಹೊರ ಹಾಕಲು ಕ್ರಮ ಜರುಗಿಸಲಾಗುವುದು ಎಂದರು.
ಅಶೋಕ ಮಜ್ಜಿಗುಡ್ಡ, ಶಂಕರ ಧಾರವಾಡ, ಎನ್ ಪಿ ಕುಲಕರ್ಣಿ, ನಿಂಗಪ್ಪ ಬಾರಕೇರ, ಬಸವರಾಜ ಅಕ್ಕಿ ಚರಂತಯ್ಯ ಹಿರೇಮಠ್, ಹನುಮಂತ ಗಡ್ಡಿ, ಕೆ ಪಿ ಟಿ ಸಿ ಎಲ್ ಮೆಕಾನಿಕ್‍ಗಳಾದ ಎಂ. ಜಿ. ಬಾವಿಮನಿ, ಬಿ ವಿ ಹೆಬ್ಬಾಳ, ರವಿ ಬನ್ನಿಗಿಡದ, ಬಿ. ವಿ. ಮಾಳವಾಡ ಇತರರು ಇದ್ದರು.