
ಚಿಂಚೋಳಿ: ತಾಲೂಕಿನ ಕನಕಪುರ ಗ್ರಾಮದ ರೈತ ಅನಿಲಕುಮಾರ ತಂದೆ ಶಿವುರಾಯ (38) ಅವರು ಕೃಷಿ ನಷ್ಟ ಹಾಗೂ ಸಾಲದ ಹೊರೆ ಹಿನ್ನೆಲೆಯಲ್ಲಿ ಮೃತಪಟ್ಟಿರುವ ಘಟನೆ ಕುಟುಂಬಕ್ಕೆ ತೀವ್ರ ಸಂಕಷ್ಟ ತಂದಿದೆ. ಮೃತ ರೈತನ ಕುಟುಂಬಕ್ಕೆ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕು. ಕುಟುಂಬದ ಮೇಲಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಮೃತ ಅನಿಲಕುಮಾರ ಅವರು ಕನಕಪುರ ಗ್ರಾಮದ ನಿವಾಸಿಯಾಗಿದ್ದು, ಒಕ್ಕಲುತನವನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಅವರ ಹೆಸರಿನಲ್ಲಿ ಸರ್ವೆ ನಂ. 194/4ರಲ್ಲಿ 3 ಎಕರೆ 20 ಗುಂಟೆ ಜಮೀನು ಇದೆ. ಈ ಜಮೀನಿನಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಸತತ ಬಿಸಿಲಿನ ತಾಪಮಾನ ಹಾಗೂ ಮಳೆ ಕೊರತೆಯಿಂದ ತೊಗರಿ ಬೆಳೆ ಒಣಗುವ ಸ್ಥಿತಿಗೆ ತಲುಪಿದ್ದು, ಕೃಷಿಗಾಗಿ ಮಾಡಿದ ಖರ್ಚು ಕೂಡ ಕೈಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅನಿಲಕುಮಾರ ಅವರು ಕನಕಪೂರ ವಿಎಸ್ಎಸ್ ಎನ್ (ಗಿSSಓ) ಬ್ಯಾಂಕಿನಲ್ಲಿ 30 ಸಾವಿರ ಬೆಳೆ ಸಾಲ ಪಡೆದಿದ್ದು, ಖಾಸಗಿಯಾಗಿ ಸುಮಾರು 3.50 ಲಕ್ಷ ಸಾಲ ಹೊಂದಿದ್ದರು. ಒಟ್ಟು ಸಾಲದ ಹೊರೆ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು.
ಮೃತ ಅನಿಲಕುಮಾರ ಅವರ ಪತ್ನಿ ಸವಿತಾ (35) ಆಗಿದ್ದು, ಕುಟುಂಬದಲ್ಲಿ ಐವರು ಮಕ್ಕಳು ಇದ್ದಾರೆ. ಹೀಗಿದೆ:
ಕಾಂಚನಾ – 19 ವರ್ಷ,ಸಂಚನಾ – 15 ವರ್ಷ, ಅರ್ಚನಾ – 14 ವರ್ಷ,ಶಾಂತಾ – 11 ವರ್ಷ,
ಶಿವುರಾಯ – 8 ವರ್ಷ
ಕುಟುಂಬದ ಆಧಾರವಾಗಿದ್ದ ತಂದೆಯನ್ನು ಕಳೆದುಕೊಂಡಿರುವ ಪತ್ನಿ ಹಾಗೂ ಐವರು ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಮಾನವೀಯ ದೃಷ್ಟಿಯಿಂದ ಕೂಡಲೇ ಕುಟುಂಬಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು
ಮೃತ ರೈತ ಅನಿಲಕುಮಾರ ಅವರ ಕುಟುಂಬದ ಮೇಲಿರುವ ಬ್ಯಾಂಕ್ ಹಾಗೂ ಖಾಸಗಿ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಆರ್ಥಿಕ ಪರಿಹಾರ ನೀಡಬೇಕು ಪತ್ನಿ ಹಾಗೂ ಐವರು ಮಕ್ಕಳ ಜೀವನೋಪಾಯ ಮತ್ತು ಶಿಕ್ಷಣಕ್ಕೆ ವಿಶೇಷ ನೆರವು ನೀಡಬೇಕು ಬೆಳೆ ನಷ್ಟದ ಕುರಿತು ಸಮಗ್ರ ಸಮೀಕ್ಷೆ ನಡೆಸಿ ಅರ್ಹ ಪರಿಹಾರ ಒದಗಿಸಬೇಕು ರಾಜ್ಯದಲ್ಲಿ ರೈತರಿಗೆ ಸಂಪೂರ್ಣ ಬೆಳೆ ವಿಮೆ ಸೌಲಭ್ಯ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ತಕ್ಷಣ ನೆರವು ನೀಡುವ ವಿಶೇಷ ಯೋಜನೆ ರೂಪಿಸಬೇಕು
ರೈತರು ಕೃಷಿಯನ್ನೇ ನಂಬಿ ಬದುಕುವ ಪರಿಸ್ಥಿತಿಯಲ್ಲಿ ಬೆಳೆ ನಷ್ಟ ಹಾಗೂ ಸಾಲದ ಹೊರೆ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಮೃತ ರೈತನ ಕುಟುಂಬಕ್ಕೆ ನ್ಯಾಯ ಹಾಗೂ ಆರ್ಥಿಕ ಭದ್ರತೆ ಒದಗಿಸಬೇಕು ಕನಕಪೂರ ಗ್ರಾಮದ ಮುಖಂಡರಾದ ರವೀಂದ್ರ ಪಾಟೀಲ ಅವರು ಸರ್ಕಾರಕ್ಕೆ ಆಗಮಿಸಿದ್ದಾರೆ





















