ಬೀಳ್ಕೊಡುವ ಸಮಾರಂಭ


ಬಾಗಲಕೋಟೆ,ಜು.೧:
ಬಾಗಲಕೋಟೆಯಲ್ಲಿ ಕಳೆದ ೨೨ ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ, ಎಲ್ಲ ಅಧಿಕಾರಿಗಳ ಮನ ಗೆದ್ದ ವಿ.ಗಿರಿಯಾಚಾರರ ಸೇವೆ ಅವಿಸ್ಮರಣೀಯವೆಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.


ಜಿಲ್ಲಾ ಪಂಚಾಯತ ಸಭಾಭವನದಲ್ಲಿ ರಾಷ್ಟಿçÃಯ ಸೂಚನಾ ವಿಜ್ಞಾನ ಕೇಂದ್ರ (ಎನ್.ಐ.ಸಿ)ದ ಹಿರಿಯ ತಾಂತ್ರಿಕ ನಿರ್ದೇಶಕ ವಿ.ಗಿರಿಯಾಚಾರ ಅವರ ವಯೋನಿವೃತ್ತಿ ಹೊಂದಿದ ನಿಮಿತ್ಯ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಿರಯಾಚಾರ ಅಧಿಕಾರ ಅವಧಿಯಲ್ಲಿ ಹಲವಾರು ಚುನಾವಣಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದು, ಯಾವುದೇ ಚುನಾವಣಾ ಕಾರ್ಯದಲ್ಲಿ ದೋಷವಾಗದಂತೆ, ತಾಂತ್ರಿಕ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ ಯಶಸ್ಸು ಪಡೆದವರು ಎಂದರು.


ಇವರ ಸುದೀರ್ಘ ಸೇವೆಯಲ್ಲಿ ಅನೇಕ ಐ.ಎ.ಎಸ್ ಅಧಿಕಾರಿಗಳು ಆಗಿ ಹೋಗಿದ್ದು, ಆ ಎಲ್ಲ ಅಧಿಕಾರಿಗಳು ಗಿರಿಯಾಚಾರವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿನ ವರ್ಗಾವಣೆಗೆ ಸಂಬAಧಿಸಿದ ಸಮಸ್ಯೆಯಲ್ಲಿ ಯಾವುದೇ ತೊಂದರೆಯಾಗದAತೆ ತಾಂತ್ರಿಕ ಸಲಹೆ ನೀಡಿದ್ದಾರೆ. ಅಧಿಕಾರಿಗಳಾಗಿ ಇಲ್ಲವೇ ಸಿಬ್ಬಂದಿಗಳಾಗಲಿ ಕೀಳರಿಮೆ ಇರಬಾರದು. ತಮಗೆ ಒದಗಿ ಬಂದ ಅಧಿಕಾರವನ್ನು ಜವಾಬ್ದಾರಿಯಿಂದ ನಿರ್ವಹಿಸಿದಾಗ ಯಶಸ್ಸು ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಗಿರಿಯಾಚಾರ ವಯೋ ನಿವೃತ್ತಿ ಹೊಂದಿದ್ದರು ಕೂಡಾ ಸದೃಡವಾಗಿದ್ದು, ಮುಂಬರುವ ದಿನಗಳಲ್ಲಿ ನಿವೃತ್ತರಾದರು ಕೂಡಾ ಜಿಲ್ಲಾಡಳಿತಕ್ಕೆ ತಮ್ಮ ಸಲಹೆಗಳನ್ನು ನೀಡಬೇಕೆಂದು ಆಶಿಸುತ್ತೇವೆ ಎಂದರು.


ಗಿರಿಯಾಚಾರ ಕೇವಲ ದಕ್ಷ ಅಧಿಕಾರಿ ಅಲ್ಲದೇ ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಪ್ರೀತಿಯಿಂದ ಕಂಡವರಾಗಿದ್ದು, ತಮ್ಮ ಮಕ್ಕಳನ್ನು ಸಹ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಮನೆ ಗೆದ್ದು, ಮಾರ ಗೆದ್ದವರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಆಶಿಸಿದರು.


ವಯೋನಿವೃತ್ತಿ ಹೊಂದಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಗಿರಿಯಾಚಾರ ಅವರು ಗದಗದಲ್ಲಿ ಭೂಮಿ ಕೇಂದ್ರದ ಸಿಇಓ ಆಗಿ, ತದನಂತರ ಬಾಗಲಕೋಟೆಗೆ ಬಂದಾಗ ಯುವಕನಾಗಿದ್ದೆ. ಆ ಸಮಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಅವರ ಮಾರ್ಗದರ್ಶನದಲ್ಲಿ ಉತ್ತಮ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಒಟ್ಟಿನಲ್ಲಿ ಧನಾತ್ಮಕ ಚಿಂತನೆಯಿAದ ಕಾರ್ಯ ನಿರ್ವಹಿಸಿದಲ್ಲಿ ಎಲ್ಲವೂ ಒಳಿತಾಗುತ್ತವೆ ಎಂಬುದನ್ನು ನನ್ನ ಅಧಿಕಾರ ಅವಧಿಯಲ್ಲಿ ತಿಳಿದುಕೊಳ್ಳಲಾಗಿದ್ದು, ನನ್ನ ಅವಧಿಯಲ್ಲಿ ಮೇಲಾಧಿಕಾರಿಗಳಿಂದ ಹಿಡಿದು ಎಲ್ಲ ಸಿಬ್ಬಂದಿಗಳಿಗೆ ಚಿರಋಣಿಯಾಗಿರುತ್ತೇನೆ ಎಂದರು.


ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ ಗಿರಿಯಾಚಾರ ನಿವೃತ್ತಿಯಾದರು ಕೂಡಾ ಯುವಕರನ್ನು ಮೀರಿಸುವಂತ ಉತ್ಸಾಹ ಹೊಂದಿದ್ದು, ಅವರು ನಮಗೆಲ್ಲರಿಗಳು ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ನೂತನ ಎನ್.ಐಸಿಯ ಅಧಿಕಾರಿ ಪಿ.ಜೈಕುಮಾರ, ಆಧಾರ ಜಿಲ್ಲಾ ಸಂಯೋಜಕ ಸಿದ್ದಪ್ಪ ಅನಿಸಿಕೆ ವ್ಯಕ್ತಪಡಿಸಿದರು. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ನಿವೃತ್ತಿ ಹೊಂದಿದ ಗಿರಿಯಾಚಾರ ಪತ್ನಿ ಪರಿಮಳಾ ಗಿರಿಯಾಚಾರ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಸ್.ಜಿ.ಮಿರ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.