Home ಜಿಲ್ಲೆ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ : ಪಂಡರಿ ಆಡೆ

ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ : ಪಂಡರಿ ಆಡೆ

ಔರಾದ್ :ಮಾ.17: ವಿದ್ಯಾರ್ಥಿಗಳು ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ತಮ್ಮ ಗುರುಗಳ ಹಾಗೂ ಹೆತ್ತವರಿಗೆ ಕೀರ್ತಿ ತರಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಂಡರಿ ಆಡೆ ಹೇಳಿದರು.

ತಾಲೂಕಿನ ಹೋಕ್ರಾಣಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಗೆಳೆಯರ ಬಳಗದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಹತ್ವದ ಹಂತವಾಗಿದ್ದು ಕೆಲವೇ ದಿನಗಳಿರುವುದರಿಂದ ತಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾವುದಕ್ಕೂ ಭಯಪಡದೆ ಸತತ ಅಭ್ಯಾಸದಿಂದ ಹೆಚ್ಚಿನ ವಿಷಯವನ್ನು ಮನನ ಮಾಡಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಬರೆಯಬೇಕು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವುದರಲ್ಲಿ ಕೂಡ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಬೇಕು ಎಂದರು.

ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಅವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಿಗೆ ಸಮಾನ ಮಹತ್ವ ನೀಡಬೇಕು. ಅದಕ್ಕೊಂದು ನಿಮ್ಮದೇ ವೇಳಾಪಟ್ಟಿ ತಯಾರಿಸಿಕೊಂಡು ಓದಿನಲ್ಲಿ ತಲ್ಲಿ?ನರಾಗಬೇಕು ಎಂದರು. ಈ ವೇಳೆ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ತಿಳಿ ಹೇಳಿ ಪರೀಕ್ಷಾ ಪ್ಯಾಡ್ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಬಾಲಾಜಿ ಪವಾರ, ಆನಂದ ಪವಾರ, ದಿಲೀಪ, ಪತ್ರಕರ್ತ ಅಮರಸ್ವಾಮಿ ಸ್ಥಾವರಮಠ, ಮಲ್ಲಿಕಾರ್ಜುನ ಟೆಕರಾಜ, ಮಹಾದೇವ ಶಿಂಧೆ, ಪ್ರಾಶಾಂತ ಸೇರಿದಂತೆ ಇನ್ನಿತರರಿದ್ದರು.