
ಭಾಲ್ಕಿ: ಬಾಲ್ಯದಲ್ಲಿ ಕಲಿತ ಶಿಕ್ಷಣ ಜೀವನದ ಕೊನೆಯೂಸಿರಿನವರೆಗೂ ಇರುತ್ತದೆ.ಆದಕಾರಣ ಪ್ರಾಥಮಿಕ ಹಂತದಲ್ಲಿ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರಕುವ ಹಾಗೆ ಪಾಲಕ-ಶಿಕ್ಷಕರು ನಿಗಾವಹಿಸಬೇಕು ಎಂದು ಬ.ಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಾಕೀತು ಮಾಡಿದರು.
ಪಟ್ಟಣದ ಶಾರದಾ ಸ್ಕೂಲ್‌ನಲ್ಲಿ ಹಮ್ಮಿಕೊಂಡಿರುವ ೧೫ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯರು,ಇತ್ತೀಚಿನ ಮಕ್ಕಳು ಮೊಬೈಲ್,ಟಿವಿಯಲ್ಲಿ ಕಾಲ ಹಗರಣ ಮಾಡುವುದನ್ನು ತಡೆಗಟ್ಟಬೇಕು.ಬದಲಾದ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊAಡು ಶಿಕ್ಷಕರು ಪರೀಕ್ಷೆಗೆ ಅಣಿಗೊಳಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಮಾತನಾಡಿ,ಪ್ರತಿ ವರ್ಷ ಇಲಾಖೆ ವತಿಯಿಂದ ನಡೆಯುತ್ತಿರುವ ಭಾಷಣ ಸ್ಪರ್ಧೆ,ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಶಾರದಾ ಶಾಲೆಯ ಮಕ್ಕಳು ಮೊದಲ ಸ್ಥಾನ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಖ್ಯಾತ ಮಕ್ಕಳತಜ್ಞರಾದ ಡಾ.ದಿನಕರರಾವ ಮೋರೆ ಮಾತನಾಡಿ,ಮಕ್ಕಳು ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿರಬೇಕಾದರೆ ನಿಯಮಿತ ನಿದ್ರೆ,ವ್ಯಾಯಾಮ,ಸಮತೋಲಿತ ಆಹಾರ ಸೇವನೆ ಮಾಡುವುದು ಅಗತ್ಯ ಎಂದರು.ಹೈದ್ರಬಾದನ ದತ್ತಗಿರಿ ಮಹಾರಾಜರು ಆಶೀರ್ವಚನ ನೀಡಿದರು.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತರಾವ ಪಾಟಿಲ್ ಅಧ್ಯಕ್ಷತೆವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಪುರಸಭೆ ಉಪಾಧ್ಕ÷್ಷ ವಿಜಯಕುಮಾರ ರಾಜಭವನ,ಮುಖಂಡರಾದ ಶಿವು ಲೋಖಂಡೆ,ಜನಾರ್ಧನರಾವ ಬಿರಾದಾರ,ಆರ್.ಡಿ.ಬಿರಾದಾರ,ರಾವಸಾಹೇಬ ಬಿರಾದಾರ,ಜೈಕಿಶನ ಬಿಯಾಣಿ,ಡಾ.ಸುಧಾಕರ,ಶೇಖರ ವಂಕೆ,ಕಿರಣ ಡಾವರಗಾವೆ,ದಯಾನಂದ ಪವಾರ,ಯೋಗೇಶ ಉಮಾಜಿ,ಸಿಆರ್‌ಪಿ ಪ್ರಭು ಡಿಗ್ಗೆ,ಡಾ.ಗುಂಡೆರಾವ ಶೆಡೋಳೆ,ಗಣಪತಿ ಬೋಚರೆ,ಅಶೋಕ ರಾಜೋಳೆ,ವಿಜಯಕುಮಾರ ಪರ್ಮಾ,ದೀಪಕ ಥಮಕೆ, ಆಡಳಿತಾಧಿüಕಾರಿ ಮಹಾದೇವ ಪಟ್ನೆ ಸೇರಿದಂತೆ ಅನೇಕರಿದ್ದರು.
ಮಕ್ಕಳಿಂದ ನಡೆದ ದೇಶಭಕ್ತಿ ನೃತ್ಯ ಎಲ್ಲರಿಗೆ ಆಕರ್ಷಿತವಾಗಿತ್ತು.ಪ್ರತಿಭಾ ಪಾಟೀಲ್ ಸ್ವಾಗತಿಸಿದರು.ಸಂತೋಷ ಕಾಮೆನೂರ ನಿರೂಪಿಸಿದರು.ಮುಖ್ಯಗುರು ಶಹನಾಜ ಬೇಗಂ ವಂದಿಸಿದರು.
ಬಾಕ್ಸ್ನಲ್ಲಿ ಮುದ್ರಿಸಿ…
`ಶಿಕ್ಷಣ ವ್ಯಕ್ತಿಯ ಘನತೆ ಹೆಚ್ಚಿಸುತ್ತದೆ.ವಸಂತರಾವ ಪಾಟೀಲ್ ಉಸ್ತುವಾರಿಯಲ್ಲಿ ನಡೆಯುತ್ತಿರುವ ಶಾರದಾ ಸ್ಕೂಲ್ ಗ್ರಾಮೀಣ ಭಾಗದ ಬಡ ಕುಟುಂಬದ ಮಕ್ಕಳಿಗೆ ಕೌಶಲ್ಯಭರಿತ ಶಿಕ್ಷಣ ನೀಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ.ಇಲ್ಲಿ ಕಲಿತ ಅದೇಷ್ಟೋ ಮಕ್ಕಳು ರಾಷ್ಟç ಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಷಯ.’- ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಭಾಲ್ಕಿ.

























