ಡಾ.ಕೊನೇಕರಿಗೆ ರಾಷ್ಟ್ರೀಯ ಗೋಲ್ಡನ್ ಅವಾರ್ಡ್ ಪ್ರದಾನ

ಕಲಬುರಗಿ,ಸೆ.23: ಸಿದ್ದಲಿಂಗೇಶ್ವರ ಪ್ರಕಾಶನ ಮತ್ತು ಬುಕ್ ಡಿಪೆÇೀದ ಪ್ರಕಾಶಕರಾದ ಡಾ. ಬಸವರಾಜ ಕೊನೆಕರ 58 ವರ್ಷದ ಸಾಧನೆಗಳನ್ನು ಮನಗೊಂಡು ನವದೆಹಲಿಯ ರಾಷ್ಟ್ರೀಯ ಪುಸ್ತಕ ವ್ಯಾಪಾರಿ ಮತ್ತು ಮುದ್ರಕರ ಸಂಘದ ವತಿಯಿಂದ ಇತ್ತೀಚಿಗೆ ನವದೆಹಲಿಯಲ್ಲಿ ರಾಷ್ಟ್ರೀಯ ಗೋಲ್ಡನ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಸ್.ಕೆ ಘಾಯ್,ಉಪಾಧ್ಯಕ್ಷ ವಿಕಾಸ ಚೌದರಿ,ಎಂ.ಎಸ್.ವೆಂಕಟೇಶ,ಕಲ್ಪನಾ ಶುಕ್ಲಾ,ಕಾರ್ಯದರ್ಶಿ ಅರುಣಜೀತ ಸಿಂಗ್ ಶುಕ್ಲಾ, ಸಿದ್ದಲಿಂಗ ಕೊನೇಕ್,ಪ್ರೀತಿ ಎಸ್.ಕೊನೇಕ್ ಸೇರಿದಂತೆ ಹಲವು ಗಣ್ಯರು ಇದ್ದರು.
ಕಳೆದ 50 ವರ್ಷಗಳಿಂದ ಸಕ್ರಿಯವಾಗಿ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪ್ರಕಾಶನ ಸಂಸ್ಥೆಯನ್ನು ಗುರುತಿಸಿ ನೀಡುವ ಪ್ರಶಸ್ತಿಗೆ ದಕ್ಷಿಣ ಭಾರತದಿಂದ ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ. ಈ ಪ್ರಕಾಶನ ಸಂಸ್ಥೆಯಲ್ಲಿ ವರೆಗೆ 3700ಕ್ಕಿಂತ ಹೆಚ್ಚು ಕೃತಿಗಳು ಪ್ರಕಟಣೆಗೊಂಡಿದ್ದು ಸಾಹಿತ್ಯ ಮಾಲಿಕೆ,ಜನಪ್ರಿಯ ಮಾಲಿಕೆ,ಸ್ಪರ್ಧಾತ್ಮಕ ಪುಸ್ತಕಹಾಗೂ ಪಠ್ಯಪುಸ್ತಕಗಳಾದ ಶಿಕ್ಷಣ, ವಾಣಿಜ್ಯ,ಕಲಾ,ವಿಜ್ಞಾನ,ತಂತ್ರಜ್ಞಾನ್ ಮಕ್ಕಳ ಪುಸ್ತಕ ಸೇರಿದಂತೆ ವಿಭಿನ್ನ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ಹಿರಿಯ ಮತ್ತು ಕಿರಿಯ ಸಾಹಿತಿಗಳಿಗೆ ಹಲವಾರು ದಶಕಗಳಿಂದ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದು ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವು ಹೊಸ ಲೇಖಕರನ್ನು ಹುಟ್ಟು ಹಾಕಿದ ಕೀರ್ತಿಗೆ ಪ್ರಕಾಶನ ಸಂಸ್ಥೆ ಭಾಜನವಾಗಿದೆ.